ಯಾರಿಗೆ ಯಾರೂ ಹೆದರುವುದಿಲ್ಲ ,ಹೆದರುವ ಕಾಲ ಹೊರಟುಹೋಗಿದೆ – ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್

1090

ಕಾರವಾರ :- ಕರ್ನಾಟಕದಿಂದ ಬೆಳಗಾವಿಯನ್ನು ಬೇರ್ಪಡಿಸಲು ಯಾವ ದುಷ್ಟ ಶಕ್ತಿಯಿಂದಲೂ ಸಾಧ್ಯವಿಲ್ಲ,ಅದು ಆಗುವುದೂ ಇಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ. ಇಂದು ಶಿರಸಿಯಲ್ಲಿ ಮಾತನಾಡಿದ ಅವರು
ಬೆಳಗಾವಿಯಲ್ಲಿ ಎಂ.ಇ.ಎಸ್ ಕನ್ನಡದ ವಿರುದ್ಧ ಮಾತನಾಡಿ ಹಿಂದೆ ಏನಿತ್ತೋ ಅದೆಲ್ಲಾ ಬದಲಾವಣೆಯಾಗಿದೆ . ಹಿಂದೆ ನಾಲ್ಕು ಐದು ಎಂ.ಇ.ಎಸ್ ಶಾಸಕರು ಆಯ್ಕೆಯಾಗಿ ಬರುತಿದ್ದರು ,ವಿಧಾನಸಭೆಯಲ್ಲಿ ಶಾಸಕರು ಇದ್ದರು,ಬೆಳಗಾವಿ ನಗರಸಭೆಯಲ್ಲಿ ಆಡಳಿತ ನಡೆಸುತಿತ್ತು .ಇಂದು ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಿದೆ.ಎಂ.ಇ.ಎಸ್ ಪುಂಡಾಟಕ್ಕೆ ಜನ ರೋಸಿಹೋಗಿದ್ದಾರೆ. ಎಲ್ಲಾ ಅಸ್ಥಿತ್ವವನ್ನು ಕಳೆದುಕೊಂಡು ಹತಾಶರಾಗಿ ಇಂತಹ ಕ್ರಮಕ್ಕೆ ಅವರು ಇಳದಿದ್ದಾರೆ.ಆ ಪುಂಡರನ್ನು ಹದ್ದುಬಸ್ತಿನಲ್ಲಿ ಇಡಲು ಸರ್ಕಾರ ಎಲ್ಲಾ ಕ್ರಮ ತೆಗೆದುಕೊಳ್ಳುತ್ತದೆ.ಯಾರಿಗೆ ಯಾರೂ ಹೆದರುವುದಿಲ್ಲ ,ಹೆದರುವ ಕಾಲ ಹೊರಟುಹೋಗಿದೆ.ಯಾವ ಶಾಸಕರೂ ಹೆದರುವುದಿಲ್ಲ,ಹೆದರಿದ್ದರೆ ಇಷ್ಟು ಸೀಟು ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ರಮೇಶ್ ಕುಮಾರ್ ಬುದ್ದಿವಂತಿಕೆ ಪ್ರದರ್ಶಿಸಲು ಹೋಗಿ ದೇಶವ್ಯಾಪಿ ಮಹಿಲೆಯರನ್ನು ಎದುರು ಹಾಕಿಕೊಂಡರು-ಶಿವರಾಮ್ ಹೆಬ್ಬಾರ್.

ರಮೇಶ್ ಕುಮಾರ್ ರವರು ಬುದ್ದಿವಂತ ರಾಜಕಾರಣಿ .ಬುದ್ದಿವಂತಿಕೆ ಪ್ರದರ್ಶನ ಮಾಡಲುಹೋಗಿ ದೇಶವ್ಯಾಪಿ ಮಹಿಳೆಯರನ್ನು ಎದುರುಹಾಕಿಕೊಳ್ಳುವ ಸಂದರ್ಭ ಬಂದಿರುವುದು ದುರ್ದೈವದ ಸಂಗತಿ
ಯಾವುದೇ ರಾಜಕಾರಣಿ ಸದನದ ಒಳಗೆ ಇರಬಹುದು ಹೊರಗೆ ಇರಬಹುದು ಮಾತನಾಡುವಾಗ ನಡೆ ನುಡಿ ಜವಬ್ದಾರಿಯುತವಾಗಿದ್ದರೆ ಸಮಾಜ ನಮ್ಮನ್ನು ಗೌರವಿಸುತ್ತದೆ. ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.ಶಿರಸಿಯ ಕೆಡಿಸಿ ಬ್ಯಾಂಕ್ ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು
ರಮೇಶ್ ಕುಮಾರ್ ರವರು ಮಹಿಳೆಯರ ಬಗ್ಗೆ ಕೆಳಮಟ್ಟದ ಮಾತುಗಳನ್ನು ಆಡಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದರು.

ಇನ್ಮು ಬೈರತಿ ಬಸವರಾಜ್ ವಿರುದ್ಧ ಇರುವ ಆರೋಪ ಪ್ರಸ್ತಾಪಿಸಿದ ಅವರು ಸತ್ಯಕ್ಕೆ ದೂರವಾಗಿರುವ ಆರೋಪ.ಗಣಪತಿ ಕೊಲೆ ಕೇಸಿಗೂ ಜಾರ್ಜ ರಾಜೀನಾಮೆಗೂ ,ಬೈರತಿ ಬಸವರಾಜ್ ರಾಜೀನಾಮಗೆ ಹೋಲಿಕೆ ಮಾಡುವ ಪ್ರಶ್ನೆಯಿಲ್ಲ.
ಬೈರತಿ ಬಸವರಾಜ್ ಕೇಸನ್ನು ಜಾರ್ಜ ರವರ ಪ್ರಕರಣಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ ಎಂದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!