BREAKING NEWS
Search

ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಮೋಸ|ಅಂಕೋಲದ ಕುಸುಮಾ ಇನ್ಫೋಟೆಕ್ ಏಜನ್ಸಿ ಮೇಲೆ ದೂರು ದಾಖಲು.

1810

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಸ್ಥಾನದ ಮುಖ್ಯ ದ್ವಾರ ಹಾಗೂ ಒಳಭಾಗದಲ್ಲಿ ಮೆಟೆಲ್ ಡಿಟೆಕ್ಟರ್ ಅಳವಡಿಸುವುದಾಗಿ ಟೆಂಡರ್ ಪಡೆಯುವ ಜೊತೆ ಮುಂಗಡ ಹಣ ಪಡೆದು ಮೆಟೆಲ್ ಡಿಟೆಕ್ಟರ್ ಅಳವಡಿಸದೇ ಮೋಸ ಮಾಡಿದ ಕುರಿತು ಶಿರಸಿ ನಗರ ಠಾಣೆಯಲ್ಲಿ ದೇವಸ್ಥಾನದ ಮುಖ್ಯ ಕಾರ್ಯದರ್ಶಿ ಚಂದ್ರಕಾಂತ್ ನಾಯ್ಕ ರವರು ದೂರು ದಾಖಲಿಸಿದ್ದಾರೆ.

2020 ರ ಫೆಬ್ರವರಿ 25 ರಂದು ದೇವಸ್ಥಾನದ ಆಡಳಿತ ಮಂಡಳಿ ಟೆಂಡರ್ ಮೂಲಕ ಅಂಕೋಲದ ಕುಸುಮಾ ಇನ್ಫೋಟೆಕ್ ಏಜನ್ಸಿ ಮಾಲೀಕರಾದ ಶಾಂತರಾಮ್ ಗಜಾನನ ನಾಯ್ಕ ಎಂಬುವವರಿಗೆ ಮೆಟಲ್ ಡಿಟೆಕ್ಟರ್ ಅಳವಡಿಸಲು ಗುತ್ತಿಗೆ ನೀಡಿತ್ತು. ಈ ಸಂದರ್ಭದಲ್ಲಿ ಒಂದುಲಕ್ಷದ ಎಂಬತ್ತು ಸಾವಿರ ಹಣವನ್ನು ಚಕ್ ಮೂಲಕ ಮುಂಗಡವಾಗಿ ನೀಡಿತ್ತು.

ಆದರೆ ವರ್ಷ ಕಳೆದರೂ ಮೆಟಲ್ ಡಿಟೆಕ್ಟರ್ ಅಳವಡಿಸದ ಏಜನ್ಸಿ ದೇವಸ್ಥಾನ ಆಡಳಿತ ಮಂಡಳಿಗೆ ಸ್ಪಂದಿಸದೇ ಮೋಸಕ್ಕೆ ಪ್ರಯತ್ನ ಮಾಡಿದ್ದು ಈ ಕುರಿತು ಆಡಳಿ ಮಂಡಳಿಯ ಕಾರ್ಯದರ್ಶಿಗಳು ದೂರು ದಾಖಲಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!