ಲಾಕ್ ಡೌನ್ ಸಮಯದಲ್ಲಿ ಮಳಿಗೆಗಳಿಗೆ ಕನ್ನ ಹಾಕುತಿದ್ದ ಅಪ್ರಾಪ್ತ ಬಾಲಕರು ಸೇರಿ ಕಳ್ಳರ ಬಂಧನ

1182

ಕಾರವಾರ :- ಶಿರಸಿ ನಗರದಲ್ಲಿ ಲಾಕ್ ಡೌನ್ ನಡುವೆ ಅಂಗಡಿ ಕಳ್ಳತನ ನಡೆಸಿದ್ದ ನಾಲ್ವರನ್ನು ಶಿರಸಿ ನಗರ ಪೂಲೀಸತು ಬಂಧಿಸಲು ಯಶಸ್ವಿಯಾಗಿದ್ದಾರೆ. ಇದೇ ತಿಂಗಳ ಜೂ.6 ರ ದಿನದಂದು
ಶಿರಸಿಯ ಕೃಷ್ಣ ಮೆಡಿಕಲ್ ಸ್ಟೋರ್ ಕಳ್ಳತನ ನಡೆಸಿದ್ದ ಖದೀಮರು,ಲ್ಯಾಪ್ ಟಾಪ್ ಮತ್ತು 20ಸಾವಿರ ರೂ. ನಗದು ಕಳ್ಳತನ ಮಾಡಿದ್ದರು. ಇದಲ್ಲದೇ ಅಕ್ಕಪಕ್ಕದ ಮಳಿಗೆಗಳಿಗೂ ಕನ್ನ ಹಾಕಿದ್ದ ಇವರು ಕೈಗೆ ಏನೂ ಸಿಗದೇ ಮರಳಿದ್ದರು.

ಶಿರಸಿ ಕರಿಗುಂಡಿಯ ಭರತ ಗಣಪತಿ ನಾಯ್ಕ (20),ಕೋಟೆಗಲ್ಲಿಯ ಪ್ರಕಾಶ ಗುಡ್ಡಪ್ಪ ತಳವಾರ(22) ಮತ್ತು ಅಪ್ರಾಪ್ತ ಬಾಲಕರು ಬಂಧಿತರಾದವರಾಗಿದ್ದಾರೆ.

ಬಂಧಿತರ ವಿಚಾರಣೆಯಿಂದ ಶಿರಸಿ ಸೇರಿದಂತೆ ಇತರೆಡೆ ಹಲವು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಶಿರಸಿ ನಗರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಜನರ ಮೆಚ್ಚುಗೆ ವ್ಯಕ್ತವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!