ಶಿರಸಿಯಲ್ಲಿ ಪ್ರೀತಿಸು ಎಂದು ಹಿಂದೆ ಬಿದ್ದ ಅನ್ಯ ಕೋಮಿನ ಯುವಕ-ಲವ್ ಜಿಹಾದ್ ಗುಸು ಗುಸು ಹಿಂದೆ!

3598

ಕಾರವಾರ :- ಕಾಲೇಜು ಎಂದಕೂಡಲೇ ಪ್ರೀತಿ,ಪ್ರೇಮ,ಪ್ರಣಯ ಎಂದು ದಿಕ್ಕು ಗೆಟ್ಟು ಕೊನೆಗೆ ಹಳ್ಳ ಹಿಡಿಯುವ ವಿದ್ಯಾರ್ಥಿಗಳ ಸಂಖ್ಯೆಗೇನೂ ಕಮ್ಮಿ ಇಲ್ಲ. ಆದ್ರೆ ಎಲ್ಲಿ ಎರಡು ಧರ್ಮಗಳು ಬೇರೆಯಾಗಿರುತ್ತದೋ ,ಆಗ ಕುಟುಂಬ ಮಾತ್ರ ಅಲ್ಲ ಇಡೀ ಸಮುದಾಯಗಳೇ ಸಂಘರ್ಷಕ್ಕೆ ಇಳಿಯುತ್ತದೆ.
ಇದೀಗ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸಹ ಅಂತದೊಂದು ಘಟನೆಗೆ ಸಾಕ್ಷಿಯಾಗಿದ್ದು, ಠಾಣೆಯ ಮೆಟ್ಟಿಲೇರಿದೆ.

ಅಷ್ಟಕ್ಕೂ ಆಗಿದ್ದೇನು? ಘಟನೆ ತಿರುವುಗಳೇನು ?

ಶಿರಸಿ ನಗರದ ಜಾಫರ್ ಶೇಕ್ ಅಜಮಾಸ್ (20) ಎಂಬ ವಿದ್ಯಾರ್ಥಿ ನಗರದ ಎಂ.ಎಂ ಆರ್ಟ್ಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಎ ಓದುತಿದ್ದಾನೆ. ಈತ ನಗರದ ಎಂ.ಇ.ಎಸ್ ಕಾಮರ್ಸ ಕಾಲೇಜಿನಲ್ಲಿ ಓದುತ್ತಿರುವ ಬ್ರಾಹ್ಮಣ ಯುವತಿಯೊಂದಿಗೆ ಸ್ನೇಹ ಬೆಳಸಿಕೊಂಡಿದ್ದಾನೆ. ಈ ಸ್ನೇಹ ಬೇರೆಯದಾಗಿತ್ತು ಎಂದು ಕಾಲೇಜಿನ ಕೆಲವರು ಹೆಳುತಿದ್ದರಾದರೂ,ಕೆಲವು ವರ್ಷಗಳಿಂದ ಇಬ್ಬರ ನಡುವೆ ಸಲುಗೆಯಿತ್ತು. ಅದು ಪ್ರೀತಿಯಾಗಿ ಬದಲಾಗಿತ್ತೊ, ಅಥವಾ ಬೇರೆಯದಾಗಿತ್ತೋ ಎನ್ನುವುದನ್ನು ಪೊಲೀಸರು ತನಿಖೆ ನಂತರ ತಿಳಿಸಬೇಕಷ್ಟೇ. ಆದರೇ ಅವರ ಸಂಪರ್ಕದಲ್ಲಿ ಇರುವವರು ಹೇಳುವಂತೆ ಇಬ್ಬರೂ ಪ್ರೀತಿ,ಸಲುಗೆಯಲ್ಲಿ ಇದ್ದರು ಎಂದಷ್ಟೇ ಮಾಹಿತಿಗಳಿವೆ. ಆದರೇ ಯುವಕ ತನ್ನನ್ನು ಪ್ರೀತಿಸಯವಂತೆ ಕೈ ಹಿಡಿದು ಎಳೆದಿದ್ದಾನೆ ಎಂದು ಶಿರಸಿ ಠಾಣೆಯಲ್ಲಿ ಒಂದು ತಿಂಗಳ ನಂತರ ಯುವತಿ ದೂರು ನೀಡಿದ್ದಾಳೆ.
ಇನ್ನು ಯುವಕನ ವಿರುದ್ಧ ದೂರು ದಾಖಲಾಗುತಿದ್ದಂತೆ ಕಾಲೇಜಿನಿಂದ ಆ ಯುವಕನನ್ನು ಅಮಾನತ್ತು ಮಾಡಲಾಗಿದೆ.

ಅಮಾನತು ಮಾಡಿದ ಪ್ರತಿ.

ದೂರಿನಲ್ಲಿ ಏನಿದೆ?

ದಿನಾಂಕ26/11/21 ರಂದು 20 :30 ಗಂಟೆಗೆ ಫಿರ್ಯಾದುದಾರರು ಠಾಣೆಗೆ ಹಾಜರಾಗಿ ಶಿರಸಿಯ ಜಾಫರ್ ಶೇಕ್ ಅಜಮಾಸ್ ಪ್ರಾಯ: 20 ವರ್ಷ ಈತ ಕಾಲೇಜಿನ ವಿದ್ಯಾಭ್ಯಾಸ ಮಾಡಬೇಕಾದರೆ ಪರಿಚಯವಿದ್ದನು. ಕಳೆದ ಒಂದು ತಿಂಗಳ ಹಿಂದೆ ಪಿರ್ಯಾದಿ ಯವರು ದ್ವಿತೀಯ ಪಿಯುಸಿ ಮಾರ್ಕ್ಸ್ ಕಾರ್ಡ್ ತೆಗೆದುಕೊಂಡು ಪುನಃ ಸಿರ್ಸಿಗೆ ಬರಲು ಯಡಳ್ಳಿ ಬಸ್ ನಿಲ್ದಾಣದ ಹತ್ತಿರ ಬಸ್ಸಿಗೆ ನಿಂತು ಕಾಯುತ್ತಿದ್ದಾಗ ಆರೋಪಿತ ಜಾಫರ್ ಎಂಬಾತ ವ್ಯಕ್ತಿ ಹತ್ತಿರ ಬಂದು ಫಿರ್ಯಾದಿಗೆ ತನ್ನನ್ನು ಪ್ರೀತಿಸುವಂತೆ ಕೈ ಹಿಡಿದು ಎಳೆದು ಪೀಡಿಸುತ್ತಿದ್ದರಿಂದ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶಿರಸಿ ಗ್ರಾಮೀಣಠಾಣೆ ಗುನ್ನಾ ನಂಬರ್ -116/2021 ಕಲಂ : 354 504 506 ಐಪಿಸಿ ನೇ ದರಂತೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಲವ್ ಚಿಹಾದ್ ಗುಸು-ಗುಸು? ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಫೋಟೋ ವೈರಲ್?

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋ.

ಇಬ್ಬರ ನಡುವೆ ಸ್ನೇಹ ಇತ್ತು ಇಬ್ಬರೂ ಚನ್ನಾಗಿ ಪರಿಚಯವಿದ್ದು ಆಗಾಗ “ಅಲ್ಲಲ್ಲಿ” ಕಾಣಿಸಿಕೊಳ್ಳುತಿದ್ದರು! ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತಿದ್ದರು ಎಂಬ ಮಾತುಗಳು ಕೇಳಿಬಂದಿವೆ. ಇನ್ನು ಇಬ್ಬರ ಸ್ನೇಹದ ಬಗ್ಗೆ ತಿಳಿಯುತಿದ್ದಂತೆ ಯುವತಿ ಮನೆಯಲ್ಲಿ ಆಕೆಗೆ ಬುದ್ದಿ ಹೇಳಿದ್ದರು ಎಂಬ ಮಾತು ಸಹ ಕೇಳಿಬಂದಿದೆ.
ಇದರ ನಡುವೆ ಯುವಕ ಅನ್ಯ ಕೋಮಿನವನಾದ್ದರಿಂದ ಈ ವಿಷಯ ಹಲವು ತಿರುವು ಪಡೆದುಕೊಂಡಿದೆ. ಕಾಲೇಜಿಗೆ ಕೆಲವು ಸಂಘಟನೆಗಳು ತೆರಳಿ ತರಾಟೆ ತೆಗೆದುಕೊಂಡಿದೆ. ಇದರ ಪರಿಣಾಮ ಯುವಕನನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಯುವತಿ ಠಾಣೆಗೆ ತೆರಳಿ ದೂರು ನೀಡಿದ್ದರಿಂದ ಯುವಕ ಪಾರಾರಿಯಾಗಿದ್ದಾನೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಫೋಟೋವನ್ನು ಹಾಕಿ “ಲವ್ ಜಿಹಾದ್” ಶಿರಸಿ ಹಿಂದೂ ಸಂಘಟನೆ ಇತ್ತ ಗಮನ ಹರಿಸಬೇಕು ,ಹಿಂದು ಯುವತಿಯ ಪ್ರೇಮಕಥೆ ಎಂಬ ಟ್ಯಾಗ್ ನೊಂದಿಗೆ ವೈರಲ್ ಮಾಡಲಾಗಿದೆ. ಇದೀಗ ಶಿರಸಿಯಲ್ಲಿ ಇದೇ ಸುದ್ದಿ ಗಲ್ಲಿ ಗಲ್ಲಿಯಲ್ಲಿ ರೌಂಡ್ ಹೊಡೆಯುತ್ತಿದೆ. ಜೊತೆಗೆ ಎರಡು ಕೋಮುಗಳ ನಡುವೆ “ಬೂದಿಯಲ್ಲಿ ಕೆಂಡ” ಹೊಗೆಯಾಡುತ್ತಿದೆ.
ಸದ್ಯ ಶಿರಸಿ ಪೊಲೀಸರು ಕ್ರಮ ಕೈಗೊಂಡು ತನಿಖೆ ಮುಂದುವರೆಸಿದ್ದಾರೆ. ಇವುಗಳ ನಡುವೆ ಎರಡು ಕೋಮುಗಳಲ್ಲಿ ಇದೀಗ ಹಾಲಿಗೆ ಹುಳಿ ಹಿಂಡಿದಂತಾಗಿದ್ದು ಈ ವಿಷಯ ಇನ್ಯಾವ ತಿರುವು ಪಡೆದುಕೊಂಡು ಇನ್ಯಾರ ಮನೆ ಸುಡುತ್ತದೆಯೋ ಎಂಬ ಭೀತಿ ಸ್ಥಳೀಯ ಮುಗ್ಧ ಜನರಲ್ಲಿ ಕಾಡುವಂತಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!