BREAKING NEWS
Search

ಮಾಜಿ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಕ್ಷೇತ್ರದಲ್ಲಿ ಕೌಶಲ್ಯ ನೀಡುವುದನ್ನು ಮರೆತ ಕೌಶಲ್ಯಾಭಿವೃದ್ಧಿ ಕೇಂದ್ರ- ವರ್ಷಗಳಿಂದ ಕೇಂದ್ರಕ್ಕೆ ಬೀಗ!

728

ಕಾರವಾರ:- ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ನೀಡಿ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಕೇಂದ್ರ ಸರ್ಕಾರ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ದೇಶದಲ್ಲೆಡೆ ಸ್ಥಾಪಿಸಿದೆ. ಆದ್ರೆ ಕುದ್ದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಮಾಜಿ ಸಚಿವ ಅನಂತಕುಮಾರ್ ಹೆಗಡೆ ಕ್ಷೇತ್ರದಲ್ಲಿ ಕೇಂದ್ರವು ಬಾಗುಲು ಮುಚ್ಚಿ ನಾಲ್ಕು ವರ್ಷಗಳು ಕಳೆಯುತ್ತಿದೆ. ಈ ಕೇಂದ್ರವನ್ನು ಕೇಳುವವರೇ ಇಲ್ಲದಂತಾಗಿದೆ.

2017 ರಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಶಿರಸಿಯ ಯಡಳ್ಳಿಯಲ್ಲಿ ನಿರುದ್ಯೋಗಿಗಳಿಗಾಗಿ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿದರು.ಆದ್ರೆ ಈ ಕೇಂದ್ರದಲ್ಲಿ ನಾಲ್ಕು ವರ್ಷದಲ್ಲಿ 270 ಜನರಿಗೆ ಮಾತ್ರ ತರಬೇತಿಯನ್ನು ನೀಡಿತು ಎಂದು ಅವರ ಕಚೇರಿ ಮೂಲಗಳಿಂದ ತಿಳಿದುಬಂದಿದೆ.

ಇನ್ನು ಈ ಕೇಂದ್ರದಲ್ಲಿ ಆರಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ತರಬೇತುದಾರರು ಕಾರ್ಯನಿರ್ವಹಿಸುತಿದ್ದರು‌.ಆದ್ರೆ ಇದೀಗ ಸಂಬಳ ಸಹ ಆಗದ ಹಿನ್ನಲೆಯಲ್ಲಿ ಇಬ್ಬರು ಮಾತ್ರ ಕಾರ್ಯನಿರ್ವಹಿಸುತಿದ್ದು, ಕೇಂದ್ರದಲ್ಲಿ ಕಸ ಗುಡಿಸಲು ಮಾತ್ರ ಬಾಗಿಲು ತೆರೆಯುವುದು ಬಿಟ್ಟರೇ ಉಳಿದ ದಿನಗಳಲ್ಲಿ ಕೇಂದ್ರಕ್ಕೆ ಬೀಗ ಹಾಕಲಾಗಿದೆ.

ಈ ಕೇಂದ್ರವು 2017 ರಲ್ಲಿ ಪ್ರಾರಂಭವಾಗಿದ್ದು ನಿರುದ್ಯೋಗಿಗಳಿಗಾಗಿ ಮೊಬೈಲ್ ರಿಪೇರಿ, software development,ಫಿಟ್ಟಿಂಗ್ ಟ್ರೈನಿಂಗ್ ನೀಡುತ್ತದೆ. ಐ.ಎಸ್.ಡಿ.ಸಿ ಕಲ್ಕತ್ತಾ ಮೂಲದ ಎನ್ .ಜಿ.ಓ ಈ ಸಂಸ್ಥೆಯಲ್ಲಿ ತರಬೇತಿ ನೀಡುತ್ತಿದೆ. ಆದ್ರೆ ಕಳೆದ ನಾಲ್ಕು ವರ್ಷದಲ್ಲಿ ಕೇವಲ ಎರಡು ಬ್ಯಾಚ್ ಗಳಿಗೆ ತರಬೇತಿ ನೀಡಿ ಬಾಗಿಲು ಹಾಕಿದೆ.

ಇನ್ನು ಕುದ್ದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ರವರು ಶಿರಸಿಗೆ ಭೇಟಿ ನೀಡಿದಾಗ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು.ಆದ್ರೆ ಇದುವರೆಗೂ ಕೇಂದ್ರ ಆರಂಭವಾಗದೇ ಬೀಗ ಹಾಕಲಾಗಿದ್ದು ,ಕೌಶಲ್ಯ ಬಯಸಿ ಬರುವ ನಿರುದ್ಯೋಗಿಗಳಿಗೆ ಗೇಟಿಗೆ ಹಾಕಿದ ಬೀಗ ನೋಡಿ ಹೋಗುವಂತಾಗಿದೆ. ಇನ್ನು ಕರೋನಾ ದಿಂದ ಕೇಂದ್ರ ಕಾರ್ಯನಿರ್ವಹಿಸಿಲ್ಲ,ಜಿಲ್ಲೆಯ ನಿರುದ್ಯೋಗಿಗಗಳಿಗೆ ತರಬೇತಿ ಅವಷ್ಯವಿದ್ದು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜನಾಶಿರ್ವಾದ ಯಾತ್ರೆ ಎನ್ನುವ ನೆಪದಲ್ಲಿ ಪ್ರಚಾರ ಗಿಟ್ಟಿಸಿಕೊಂಡು ಫೋಸು ಕೊಡುವ ಕೌಶಲ್ಯಾಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಸ್ವಂತ ಉದ್ಯೋಗ ಮಾಡಲು ಆಸೆ ಹೊತ್ತು ಬರುವ ಸಾವಿರಾರು ನಿರುದ್ಯೋಗಿಗಗಳು ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ತರಬೇತಿ ಸಿಗದೇ ಮರಳಿ ಹೋಗುವಂತಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರುದ್ಯೋಗಿಗಳು ಹೆಚ್ಚುತ್ತಿದ್ದಾರೆ. ಅವರಿಗೆ ಸೂಕ್ತ ತರಬೇತಿ ಮಾರ್ಗದರ್ಶನ ಇಂತಹ ಕೌಶಲ್ಯ ಕೇಂದ್ರಗಳಲ್ಲಿ ನೀಡಿದಲ್ಲಿ ಕೆಲಸಗಳಿಗೆ ಸೇರಲು ಸಹ ಸಹಕಾರಿಯಾಗುತ್ತದೆ. ಜೊತೆಗೆ ಸ್ವಂತ ಉದ್ಯೋಗಕ್ಕೂ ಸಹಕಾರಿಯಾಗಲಿದೆ. ಸಂಸದ ಅನಂತಕುಮಾರ್ ಹೆಗಡೆಯವರಿಗೆ ಹೇಗೆ ಸಚಿವ ಸ್ಥಾನ ದೊರೆತು ಮುಂದೆ ಕೈ ತಪ್ಪಿತೋ ಅದೇ ಮಾದರಿಯಲ್ಲಿ ಕೇಂದ್ರ ಪ್ರಾರಂಭವಾಗಿ ಬಾಗಿಲು ಮುಚ್ಚಿದೆ. ಈ ಬಗ್ಗೆ ಗಮನ ಹರಿಸಿದರೆ ನಮ್ಮ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ವಿದ್ಯಾರ್ಥಿಗಳಿಗೆ,ನಿರುದ್ಯೋಗಿಗಳಿಗೆ ಸಹಾಯವಾಗಲಿದೆ. ಇನ್ನಾದರೂ ಎಚ್ಚೆತ್ತು ಸಂಬಂಧಪಟ್ಟ ಇಲಾಖೆ ಇತ್ತ ಗಮನಿಸಿ ಕೇಂದ್ರವನ್ನು ಪುನಹಾ ಆರಂಭಿಸಿಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!