ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ-ಸಚಿವ ಡಾ.‌‌ಸುಧಾಕರ್ .

698

ಕಾರವಾರ :- ಕೆಲವು ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ,ಜನ ಜವಾಬ್ದಾರಿಯಿಂದ ವರ್ತಿಸಬೇಕು.ಕರ್ನಾಟಕದಲ್ಲಿ ಲಾಕ್ ಡೌನ್ ಮಾಡುವ ಪ್ರಮೇಯ ಬರುವುದಿಲ್ಲ,ಜನ ಮತ್ತೆ ಲಾಕ್ ಡೌನ್ ಆಗಬಹುದು ಎನ್ನುವ ಆತಂಕ ಬಿಟ್ಟುಬಿಡಿ,ಆದ್ರೆ ಜವಬ್ದಾರಿ ಯಿಂದ ವರ್ತಿಸಿ ಎಂದು ಆರೋಗ್ಯ ಸಚಿವ ಸುಧಾಕರ ಹೇಳಿದ್ದಾರೆ.

ಇಂದು ಶಿರಸಿಯ ಅಂಬೇಡ್ಕರ್ ಭವನದಲ್ಲಿ ಮೂರನೇ ಹಂತದ ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಅಂತರಾಜ್ಯ ಗಡಿ ಭಾಗದಲ್ಲಿ ಕೆಲವೊ‌ಂದು ಗೊಂದಲ ವತಾವರಣ ಇದೆ ಆ ಸಮಸ್ಯೆ ಬಗೆಹರಿಸುತ್ತೆವೆ.

ಇಂದು ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ,ಪ್ರಧಾನಿ ಲಸಿಕೆ ಪಡೆದುಕೊಂಡಿದ್ದು ಪ್ರೇರಣೆಯಾಗಿದ್ದಾರೆ ಎಂದರು.

ಜಿಲ್ಲೆಯಲ್ಲಿ ಮೂರನೇ ಹಂತದ ಮೊದಲ ವ್ಯಾಕ್ಸಿನ್ ಪಡೆದ ಅನಂತ್ ಅಶೀಸರ,ಶ್ರೀನಿವಾಸ್ ಹೆಬ್ಬಾರ್ .

ಉ.ಕ ಜಿಲ್ಲೆಯಲ್ಲಿ ಶಿರಸಿಯಲ್ಲಿ ನಡೆದ 60ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಮೊದಲು ರಾಜ್ಯ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ಅನಂತ್ ಅಶೀಸರ ರವರು ತೆಗೆದುಕೊಂಡರು,ನಂತರ ಜೀವ ಜನ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ ರವರು ತೆಗೆದುಕೊಂಡರು. ಶಿರಸಿಯಲ್ಲಿ ಜನಪ್ರತಿನಿಧಿಗಳು ಸೇರಿ ಒಟ್ಟು 20 ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಯಿತು.

ವ್ಯಾಕ್ಸಿನ್ ಪಡೆಯಲು ನೊಂದಣಿ ಕಡ್ಡಾಯವಲ್ಲ!

45 ವರ್ಷ ವಯಸ್ಸಿನ ಅನಾರೋಗ್ಯ ಪೀಡಿತರು ಹಾಗೂ 60ವರ್ಷ ವಯಸ್ಸು ಆದ ಜನರು ಕೋವಿಡ್ ವ್ಯಾಕ್ಸಿನ್ ಪಡೆಯಲು ಅರ್ಹರಾಗಿರುತ್ತಾರೆ.

ಆನ್ ಲೈನ್ ಮೂಲಕ ನೊಂದಣಿ ಮಾಡದವರು ನೇರವಾಗಿ ಹೋಗಿ ವ್ಯಾಕ್ಸಿನ್ ಪಡೆಯಬಹುದಾಗಿದ್ದು, ಸರ್ಕಾರದ ಯಾವುದೇ ಗುರುತಿನ ಚೀಟಿ ನೀಡಿ ಪಡೆಯಬಹುದು. ಜೊತೆಗೆ 45 ವರ್ಷ ದವರು ಕೂಡ ಸ್ಥಳದಲ್ಲಿಯೇ ತಪಾಸಣೆ ಮಾಡಿಸಿಕೊಂಡು ವೈದ್ಯರ ಪ್ರಮಾಣಪತ್ರ ಪಡೆದು ವ್ಯಾಕ್ಸಿನ್ ಪಡೆಯಲು ಆರೋಗ್ಯ ಇಲಾಖೆ ಅವಕಾಶ ಮಾಡಿಕೊಟ್ಟಿದೆ.

ಇದನ್ನು ಓದಿ:-




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!