ಶಿರಸಿ:- ಶಿರಸಿಯ ನೀಲಕಣಿ ಕ್ರಾಸ್ ನಲ್ಲಿ ಇರುವ ಪೆಟ್ರೋಲ್ ಬಂಕ್ ನಲ್ಲಿ ಇಂಧನ ಹಾಕಿಸಿಕೊಳ್ಳಲು ಬಂದಿದ್ದ ವ್ಯಾಗನಾರ್ ಕಾರನ ಚಾಲಕ ಅಚಾತುರ್ಯದಿಂದ ಚಾಲನೆ ಮಾಡಿ ಪೆಟ್ರೊಲ್ ಹಾಕಿಸಿಕೊಳ್ಳಲು ಬಂದಿದ್ದ ಎರಡು ವಾಹನಗಳಿಗೆ ಡಿಕ್ಕಿ ಪಡಿಸಿ ಇಬ್ಬರಿಗೆ ಗಾಯಗೊಳಿಸಿದ ಘಟನೆ ನಡೆದಿದೆ.
ಈ ಕುರಿತು ಶಿರಸಿ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.
ವ್ಯಾಗೆನಾರ್ ನ ಚಾಲಕನ ಅಚಾತುರ್ಯದಿಂದ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದು , ಇಬ್ಬರು ಬೈಕ್ ಸವಾರರು ಕೊಂಚದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.