BREAKING NEWS
Search

ಪ್ರಯಾಣಿಕರೇ ಗಮನಿಸಿ|ಕಾರವಾರ-ಮಡಗಾವ್ ರೈಲು ಐದು ದಿನ ಬಂದ್ ! ಯಾವಾಗಿಂದ ವಿವರ ನೋಡಿ.

153

ಕಾರವಾರ: ವೀಕೆಂಡ್ ನಲ್ಲಿ ಬೆಂಗಳೂರಿನಿಂದ ,ಗೋವಾ,(goa)ಕಾರವಾರ (karwar) ಭಾಗಕ್ಕೆ ಪ್ರವಾಸ ನಿಗದಿ ಮಾಡಿ ಹೊರಡಬೇಕು ಎಂದು ನೀವೇನಾದರೂ ಪ್ಲಾನ್ ಮಾಡಿದ್ರೆ ಈ ಸುದ್ದಿ ಓದಲೇ ಬೇಕು.

ಹೌದು ಗೋವಾ ಹಾಗೂ ಕಾರವಾರ ಭಾಗಕ್ಕೆ ಬಸ್ ವ್ಯವಸ್ಥೆ ಅಲ್ಪ ಮಟ್ಟಿನದ್ದಿದೆ ಹೀಗಾಗಿ ದುಬಾರಿ ದರ .ಅದ್ರಲ್ಲೂ ವೀಕೆಂಡ್ ನಲ್ಲಿ (weekend) ಖಾಸಗಿ ಬಸ್ ದರ ಗಮನಕ್ಕೆ ಮುಟ್ಟಿದ್ರೆ , ವಿರಳವಾಗಿ ಇರುವ ಸರ್ಕಾರಿ ಬಸ್ ಫುಲ್ ಆವಿರುತ್ತೆ. ಹೀಗಾಗಿ ರೈಲು ಮಾರ್ಗವೊಂದೇ ಅಲ್ಪ ಲಾಭದಾಯಕ ಆದ್ರ ಇದೀಗ
ಡಿ.17 ರಿಂದ 21ರವರೆಗೆ ಕಾರವಾರ ಮತ್ತು ಗೋವಾದ ಮಡಗಾಂವ್ ಸಂಪರ್ಕಿಸುವ ವಿಶೇಷ ರೈಲನ್ನು (Train) ಸ್ಥಗಿತಗೊಳಿಸಲಾಗಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾರವಾರದಿಂದ ಮಡಗಾಂವ ಜಂಕ್ಷನ್‍ಗೆ ಸಾಗುವ (01595) ಮತ್ತು ಮಡಗಾಂವದಿಂದ ಕಾರವಾರ ಜಂಕ್ಷನ್‍ಗೆ ಬರುವ (01596) ರೈಲನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.

ಇದನ್ನೂ ಓದಿ:- ಪೆಟ್ರೋಲ್ ದರ ಇಳಿಸಲು ಕೇಂದ್ರದಿಂದ ಪ್ಲಾನ್ ಕಾರಣ ಏನು ಗೊತ್ತಾ?

ಬೆಂಗಳೂರಿನಿಂದ ಕಾರವಾರಕ್ಕೆ ಬರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಕ್ಸಪ್ರೆಸ್ (Krantiveera Sangolli Rayanna Express train )ಮತ್ತು ಪಂಚಗಂಗಾ ಎಕ್ಸಪ್ರೆಸ್ ರೈಲುಗಳು (panchaganga Express train)ಹಾಸನ ಬಳಿಯ ರೈಲು ಹಳಿ ದುರಸ್ತಿ ಕಾರಣಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!