ಹೊನ್ನಾವರ:ಆಸ್ತಿ ವಿಚಾರ ಅಣ್ಣನನ್ನು ಬಡಿದು ಕೊಂದ ಸಹೋದರರು

266

ಕಾರವಾರ :- ಆಸ್ತಿ ವಿಚಾರವಾಗಿ ಸಹೋದರ ನಡುವಿನ ಗಲಾಟೆ ತಾರಕಕ್ಕೇರಿ ತಮ್ಮ ಅಣ್ಣನನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ (uttrakannda) (areyangade) ಅರೆಯಂಗಡಿಯ ತೊಟ್ಟಿಲಗುಂಡಿಯಲ್ಲಿ ನಡೆದಿದೆ. ಹನುಮಂತ ಹೊನ್ನಪ್ಪ ನಾಯ್ಕ್ (54) ದಾರುಣವಾಗಿ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಘಟನೆಯಲ್ಲಿ ಮೃತರ ಸೋದರ ಮಾವ ಮಾರುತಿ ನಾಯ್ಕ್ (70)ಗೆ ಗಂಭೀರ ಗಾಯಗೊಂಡಿದ್ದಾರೆ.

ತಮ್ಮಂದಿರಾದ ವಿನಾಯಕ ನಾಯ್ಕ, ಚಿದಾನಂದ ನಾಯ್ಕ್ ಕೊಲೆ‌ ಮಾಡಿದ ಆರೋಪಿಗಳಾಗಿದ್ದಾರೆ.
ಹಿಂದಿನಿಂದಲೂ ಆಸ್ತಿ ,ಅಡಕೆ ಫಸಲಿನ(arecanut) ವಿಚಾರವಾಗಿ ಸಹೋದರ (brothers)ನಡುವೆ ಕಲಹ ಏರ್ಪಡುತಿತ್ತು .ಆದರೇ ಇಂದು ಗಲಾಟೆ ವಿಕೋಪಕ್ಕೆ ಹೋಗಿ ಸಹೋದರರಿಬ್ಬರೂ ಅಣ್ಣನಿಗೆ ರಾಡ್‌ನಿಂದ ತಲೆಗೆ ಹೊಡೆದಿದ್ದು ತಲೆಗೆ ಹೊಡೆದ ಕಾರಣ ಗಂಭೀರ ಗಾಯಗೊಂಡು ಸ್ಥಳದಲ್ಲೇ ಹೊನ್ನಪ್ಪ ನಾಯ್ಕ್ ಸಾವನ್ನಪ್ಪಿದ್ದಾರೆ.(Honnavara police)
ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!