ಶಿವಮೊಗ್ಗದಲ್ಲಿ ಬಂಧಿತ ಉಗ್ರನ ತಂದೆ ಹೃದಯಾಘಾತದಿಂದ ಸಾವು!

1007

ಶಿವಮೊಗ್ಗ: ಶಿವಮೊಗ್ಗದಲ್ಲಿ ಪತ್ತೆಯಾಗಿರುವ ಉಗ್ರ ಜಾಲಕ್ಕೆ ಸಂಬಂಧಿಸಿ ಬಂಧಿತನಾಗಿರುವ ಮಂಗಳೂರು ಮೂಲದ ಮಾಜ್ ಮುನೀರ್ ಅಹಮದ್‌ನ ತಂದೆ ಮುನೀರ್ ಸಾಬ್ ಜಾನ್(55) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಎದೆನೋವು ಕಾಣಿಸಿಕೊಂಡ ಅವರನ್ನು ಮಂಗಳೂರಿನ ಫಾ.ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಮುನೀರ್ ಸಾಬ್ ಜಾನ್ ಅವರು ಕಳೆದ ಐದು ವರ್ಷಗಳಿಂದ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಮಗ ವಾಜ್ ಮತ್ತು ಪತ್ನಿ ಜತೆ ಮಂಗಳೂರಿನ ಬಲ್ಮಠ ಬಳಿಯ ಪ್ರೆಸಿಡೆನ್ಸಿ ಅವೆನ್ಯೂನಲ್ಲಿ ವಾಸವಾಗಿದ್ದರು. ಮಗ ಉಗ್ರ ಚಟುವಟಿಕೆಯಲ್ಲಿ ಬಂಧಿತನಾದ ಬಳಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಈ ನಡುವೆ, ಮಾಜ್‌ನ ತಂದೆಯ ಸಾವಿನ ಸುದ್ದಿ ತಿಳಿದ ಪೊಲೀಸರು ಕೂಡಲೇ ಆತನನ್ನು ಕೋರ್ಟ್‌ ಗೆ ಹಾಜರುಪಡಿಸಿ ಮಂಗಳೂರಿಗೆ ಕರೆದೊಯ್ಯಲು ಅನುಮತಿ ಪಡೆದಿದ್ದಾರೆ. ತಂದೆಯ ಅಂತಿಮ ದರ್ಶನಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ.

ಮಾಜ್ ಮುನೀರ್ ಮಹಮದ್ ಎಮ್ ಟೆಕ್ ಪದವೀಧರನಾಗಿದ್ದು, ಶಿವಮೊಗ್ಗದಲ್ಲಿ ಪತ್ತೆಯಾದ ಉಗ್ರ ಜಾಲದಲ್ಲಿ ಬಂಧಿತನಾಗಿದ್ದ. ಈತನ ಜತೆಗೆ ಶಿವಮೊಗ್ಗದ ಸಿದ್ಧೇಶ್ವರ ನಗರದ ಮಹಮ್ಮದ್ ಯಾಸಿನ್‌ನನ್ನು ಬಂಧಿಸಲಾಗಿತ್ತು. ಅವರಿಬ್ಬರನ್ನು ಶಿವಮೊಗ್ಗದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇವರಿಬ್ಬರಿಗೆ ಕಿಂಗ್ ಪಿನ್ ಆಗಿರುವ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಮಹಮ್ಮದ್ ಶಾರಿಕ್ ತಲೆಮರೆಸಿಕೊಂಡಿದ್ದಾನೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!