BREAKING NEWS
Search

ಸಚಿವರ ಕಚೇರಿಯಲ್ಲೇ ಕಳ್ಳತನ ಮಾಡಿದ ಕಳ್ಳ!

77

ಚಿಕ್ಕಮಗಳೂರು.: ಚಿಕ್ಕಮಗಳೂರು ಜಿಲ್ಲಾ (chikkamangaluru) ಉಸ್ತುವಾರಿ ಸಚಿವ ಹಾಗೂ ಇಂಧನ ಸಚಿವ ಕೆ. ಜೆ. ಜಾರ್ಜ್ ಅವರ ಕಚೇರಿಯಲ್ಲಿ ಕಳ್ಳತನವಾಗಿರುವ ಘಟನೆ ನಗರದ ಕಚೇರಿಯಲ್ಲಿ ಶುಕ್ರವಾರ ನಡೆದಿದೆ.

ಕೆ.ಜೆ.ಜಾರ್ಜ್ ಅವರ ಖಾಸಗಿ ಆಪ್ತ ಸಹಾಯಕ ಮೋಗಣ್ಣ ಅವರ ಬಳಿ ಇದ್ದ ಫೈಲ್ ಗಳು, 15 ಸಾವಿರ ಹಣ ಹಾಗೂ ಅವರ ಖಾಸಗಿ ದಾಖಲೆಗಳು ಕಳ್ಳತನವಾಗಿವೆ.

ಇದನ್ನೂ ಓದಿ:-Crime news uttrakannada: ಜಿಲ್ಲೆಯಲ್ಲಿ ಕಳ್ಳತನ ಮಾಡಿ ಸಕ್ಕಿಬಿದ್ರು ಕಳ್ಳರು! ವಿವರ ನೋಡಿ

ಇಂಧನ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ನಗರದ ಪ್ರವಾಸಿ ಮಂದಿರದಲ್ಲೇ ಒಂದು ರೂಮನ್ನ ಕಚೇರಿ ಮಾಡಿಕೊಂಡಿದ್ದಾರೆ.

ಸರ್ಕಾರದಿಂದ ಕೊಟ್ಟಿರುವ ಆಪ್ತ ಸಹಾಯಕರ ಜೊತೆ ಸಚಿವ ಜಾರ್ಜ್ ಅವರು ಇಟ್ಟುಕೊಂಡಿರುವ ಇಬ್ಬರು ಆಪ್ತ ಸಹಾಯಕರು ಅದೇ ಕಚೇರಿಯಲ್ಲಿ ಇದ್ದಾರೆ. ಎರಡು ದಿನದ ಹಿಂದೆ ಕಚೇರಿಯಲ್ಲಿ ಬ್ಯಾಗ್ ಇಟ್ಟು ಹೊರಗಡೆ ಹೋಗಿ ಬರುವಷ್ಟರಲ್ಲಿ ಬ್ಯಾಗ್ ನಾಪತ್ತೆಯಾಗಿದೆ. ಪ್ರವಾಸಿ ಮಂದಿರದಲ್ಲಿ ಸಿಸಿ ಕ್ಯಾಮೆರಾಗಳು ಇಲ್ಲದ ಕಾರಣ ಕದ್ದವರು ಯಾರೆಂದು ಕೂಡ ಸ್ಪಷ್ಡವಿಲ್ಲದಂತಾಗಿದೆ. ದಾಖಲೆ ಹಾಗೂ ಹಣ ಕಳುವಾದ ಹಿನ್ನೆಲೆ ಮೊಗಣ್ಣ ಚಿಕ್ಕಮಗಳೂರು ನಗರದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:-ದಾಂಡೇಲಿ ಪೇಪರ್ ಮಿಲ್ ನಲ್ಲಿ ಕಳ್ಳರು ದೋಚಿದ್ರು ವಸ್ತುಗಳು!




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!