ಪ್ರಜಾಪ್ರಭುತ್ವ ಕ್ಕೆ ವಿರೋಧ ಪಕ್ಷ ಬೇಕು ,ದೇಶದ್ರೋಹಿಗಳ ವಿರೋಧ ಪಕ್ಷವಲ್ಲಅನಂತಕುಮಾರ್ ಹೆಗಡೆ

150

ಕಾರವಾರ :- ಪ್ರಜಾಪ್ರಭುತ್ವ ಕ್ಕೆ ವಿರೋಧ ಪಕ್ಷ ಬೇಕು ,ದೇಶದ್ರೋಹಿಗಳ ವಿರೋಧ ಪಕ್ಷವಲ್ಲ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ‌ .

ಇಂದು ಸಿದ್ದಾಪುರ ತಾಲೂಕಿನ ಕಾನಸೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಎಲ್ಲಾ ಭಗವಂತನ ಇಚ್ಛೆ,ಇವತ್ತು ದೇಶದಲ್ಲಿ ಏನು ನಡೆಯುತ್ತಿದೆಯೋ ಅವೆಲ್ಲವೂ ಭಗವಂತನ ಇಚ್ಛೆ. ನಾವು ತೀರ್ಮಾನ ಮಾಡಿದ್ದೇನೂ ಇಲ್ಲ,ಜಗತ್ತಿಗೆ ಈ ಭಾರತ ಬೇಕು.ದೇಶಕ್ಕೆ ಬಿಜೆಪಿ ಬೇಕು.

ಇದನ್ನೂ ಓದಿ:-ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚ,ಅವನನ್ನ ಉಪಚಾರ ಮಾಡೋಕೆ ನಾವೂ ಬರ್ತೀವಿ- ಸಚಿವ ಮಧು ಬಂಗಾರಪ್ಪ

ಒಮ್ಮೆ ಗೆದ್ದರೇ ಸಾಕಾಗೋದಿಲ್ಲ ಅಂತಿಮದ ತನಕ ನಾವೇ ಗೆಲ್ಲುತ್ತಿರಬೇಕು, ಏನದು ಅಂತಿಮ ಗೆಲವು ಎಂದರೇ ನಮ್ಮ ಗೆಲವು ಹಿಂದುರಾಷ್ಟ್ರ ನಮ್ಮ ಗುರಿ ಹಿಂದೂರಾಷ್ಡ್ರ ಎಂದ ಅವರು ಮುಂದೆ ಎಲ್ಲವೂ ಸರಿಹೋಗುತ್ತದೆ ,ಜಾತಿ ಧರ್ಮ ಅದು ಇದು ,ವ್ಯವಸ್ಥೆ ಸಹ ಸರಿ ಹೋಗುತ್ತೆ.‌

ಪ್ರಜಾಪ್ರಭುತ್ವ ಕ್ಕೆ ವಿರೋಧ ಪಕ್ಷ ಬೇಕು ,ದೇಶದ್ರೋಹಿಗಳು ವಿರೋಧ ಪಕ್ಷವಲ್ಲ,
ಲಾಲ್ ಬಹದ್ದೂರ್ ಶಾಸ್ತ್ರಿ ಕೊಲೆ ನಂತರ 15 ದಿವಸದ ನಂತರ ಜಹಂಗೀರ್ ಬಾಬ ಹತ್ಯೆಯಾಯಿತು ,ಸಾರಾಬಾಯಿ ಕೊಲೆಯಾಯಿತು,ಇದ್ಯಾವುದೂ ಸಾವಲ್ಲ ,ನನ್ನ ಶಬ್ಧದಲ್ಲಿ ಸ್ಪಷ್ಟತೆ ಇದೆ.

ಇಂತಹ ಘಟನೆಗಳು ಸರಣಿ ಸರಣಿಯಲ್ಲಿ ನಮ್ಮ ದೇಶದಲ್ಲಿ ನಡೆದಿದೆ.ಈ ದೇಶ ವನ್ನು ಮುಗಿಸಬೇಕು ಎಂದು ಸಂಚು ನಡೆದಿತ್ತು ಎಂದು ಹಿಂದಿನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ:- ನಿಮ್ಮ ತಲೆಯನ್ನೇ ತೆಗೆಯುವ ಸಂತಾನದವರು ನಾವು- ಅನಂತಕುಮಾರ್ ಹೆಗಡೆ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!