BREAKING NEWS
Search

ಕರೋನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಮುಚ್ಚಿಡುತ್ತಿದೆಯಾ ಉತ್ತರ ಕನ್ನಡ ಜಿಲ್ಲಾಡಳಿತ!

1918

ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಪ್ರತಿ ದಿನ 700 ರಿಂದ ಸಾವಿರ ದಾಟುತ್ತಿದೆ.
ಆದರೇ ಜಿಲ್ಲಾ ಹೆಲ್ತ್ ಬುಲಟಿನ್ ಹಾಗೂ ರಾಜ್ಯ ಹೆಲ್ತ್ ಬುಲಟಿನ್ ನಲ್ಲಿ ಸಾಕಷ್ಟು ಅಂತರ ಬರುತ್ತಿದೆ.ಕಳೆದ ಮೂರು ದಿನಗಳ ಹಿಂದೆ ಜಿಲ್ಲೆಯಲ್ಲಿ ಕರೋನಾ ದಿಂದ ಒಂದೇ ದಿನದಲ್ಲಿ 15 ಜನ ಸಾವಾಗಿದೆ ಎಂದು ರಾಜ್ಯ ಬುಲಟಿನ್ ನಲ್ಲಿ ಬಂದಿತ್ತು. ಮರುದಿನ ಕುದ್ದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ರಾಜ್ಯದ ಬುಲಟಿನ್ ನಲ್ಲಿ ಬಂದಿರುವುದು ತಪ್ಪಿದೆ ಎಂದು ಹೇಳಿಕೆ ನೀಡಿದ್ದರು.

ಇನ್ನು ಪ್ರತಿ ದಿನ ಸಾವಿರದ ಹತ್ತಿರ ಸೋಂಕಿತರ ಸಂಖ್ಯೆ ಏರುತ್ತಲಿದೆ. ಆದರೇ ಮಾಧ್ಯಮಗಳಿಗೂ ಸಹ ಈ ಮಾಹಿತಿಯನ್ನು ಬಿಡುಗಡೆ ಮಾಡುತ್ತಿಲ್ಲ. ಇನ್ನು ಸಾವಿನ ಸಂಖ್ಯೆಯಲ್ಲಿ ಸಹ ಮಾಹಿತಿಯನ್ನು ತಪ್ಪಾಗಿ ನೀಡುತ್ತಿದೆ.

ಇದಲ್ಲದೇ ಜಿಲ್ಲಾಡಳಿತ ನೀಡುತ್ತಿರುವ ಆಕ್ಸಿಜನ್ ,ಬೆಡ್ ಸಂಖ್ಯೆಯ ಮಾಹಿತಿ ಅನುಸಾರ ಸೋಂಕಿತರಿಗೆ ಬೆಡ್ ಗಳು ಸಿಗಬೇಕು. ಹಾಗೆಯೇ ತೀವ್ರ ಉಸಿರಾಟ ಸಮಸ್ಯೆ ಹೊಂದಿದ ಸೋಂಕಿತ ವ್ಯಕ್ತಿಗಳಿಗೆ ವೈದ್ಯರ ಅಭಿಪ್ರಾಯ ಪಡೆದು ಆಕ್ಸಿಜನ್ ನೀಡಬೇಕು . ಆದರೇ ತೀವ್ರ ಉಸಿರಾಟ ಸಮಸ್ಯೆ ಇರುವ ಸೋಂಕಿತರು ಇಲ್ಲಿ ಚಿಕಿತ್ಸೆ ಸರಿಯಾಗದೇ ಮಣಿಪಾಲ್ ಗೆ ಕರೆದೊಯ್ಯುತಿದ್ದಾರೆ. ಇನ್ನು ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತೇವೆ ಎಂದರೂ ಹೋಮ್ ಐಸೋಲೇಷನ್ ಗೆ ಶಿಪಾರಸ್ಸು ಮಾಡುತಿದ್ದಾರೆ ಎಂದು ಅಂಕೋಲ, ಕುಮಟಾ,ಶಿರಸಿ ಭಾಗದ ಸೋಂಕಿತ ವ್ಯಕ್ತಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹೀಗಾಗಿ ಅವರ ಕುಟುಂಬ ವರ್ಗದವರಿಗೂ ಸೋಂಕು ತಗಲುತಿದ್ದು ಈ ಕಾರಣದಿಂದಾಗಿಯೂ ಸೋಂಕಿತರ ಸಂಖ್ಯೆ ಗಣನೀಯ ಏರಿಕೆ ಕಾಣುತ್ತಿದೆ.

ಮೇಲ್ಕಂಡ ಮಾಹಿತಿಯಲ್ಲಿ ಕೈ ತಪ್ಪಿನಿಂದ ತಪ್ಪಾಗಿರುವ ಕುರಿತು ಸ್ಪಷ್ಟನೆ ನೀಡಿದ್ದಾರೆ.

ವೆಂಟಿಲೇಟರ್ ಇದ್ರೂ ಸಿಬ್ಬಂದಿ ಇಲ್ಲ!

ಕುಮಟಾ ಕೋವಿಡ್ ವಾರ್ಡ ನಲ್ಲಿ ಆಕ್ಸಿಜನ್ ,ವೆಂಟಿಲೇಟರ್ ವ್ಯವಸ್ಥೆ ಇರುವ ಬೆಡ್ ಗಳು ಕಳೆದ ವರ್ಷವೇ ವ್ಯವಸ್ಥೆ ಮಾಡಲಾಗಿತ್ತು. ಆದರೇ ಇದರ ನಿರ್ವಹಣೆ ಸಹ ಇಲ್ಲ. ಇನ್ನು ಸೂಕ್ತ ಸಿಬ್ಬಂದಿ ಸಹ ಇಲ್ಲದೇ ವೈದ್ಯಕೀಯ ತಂಡ ತೊಂದರೆ ಅನುಭವಿಸುತ್ತಿದೆ. ಜೊತೆಗೆ ಎಲ್ಲಾ ವ್ಯವಸ್ಥೆ ಇದ್ದರೂ ರೋಗಿಗಳಿಗೆ ಉಪಯೋಗಿಸದಂತಾಗಿದೆ.

ಕೋವಿಡ್ ಟೆಸ್ಟ್ ಬ್ರೇಕ್!

ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಸೋಂಕಿನ ಲಕ್ಷಣ ಇರುವ ವ್ಯಕ್ತಿಗಳು ಮಾತ್ರ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂಬ ಹೊಸ ನಿಯಮ ಜಾರಿಯಾಗಿದೆ.

ಆದರೇ ಸೋಂಕಿನ ಲಕ್ಷಣ ಇದ್ದರೂ ಹಲವರು ಟೆಸ್ಟ್ ಮಾಡಿಸಿಕೊಳ್ಳಲಾಗದೇ ಮರಳಿ ಬರುವಂತಾಗಿದೆ. ಈ ರೀತಿಯ ಘಟನೆ ಕಾರವಾರ,ಅಂಕೋಲ ಭಾಗದಲ್ಲಿ ನಡೆದಿದ್ದು ಕುದ್ದು ಆಡಳಿಪಕ್ಷದ ಜನಪ್ರತಿನಿಧಿಗಳೇ ಜಿಲ್ಲಾಡಳಿತದ ವಿರುದ್ಧ ಅಸಮದಾನ ಹೊರ ಹಾಕಿದ್ದಾರೆ.

ಕಾರವಾರದಲ್ಲಿ ಆಕ್ಸಿಜನ್ ಸಿಲೆಂಡರ್ ಲೀಕ್ !

ಕಳೆದ ಒಂದು ವಾರದ ಹಿಂದೆ ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಇರುವ ಆಕ್ಸಿಜನ್ ಪೈಪ್ ಲಿಕ್ ಆಗುವ ಮೂಲಕ ಸಂಗ್ರಹವಿದ್ದ ಆಕ್ಸಿಜನ್ ಲೀಕ್ ಆಗಿದ್ದು ಸೂಕ್ತ ನಿರ್ವಹಣೆ ಮಾಡುತಿಲ್ಲ ಎಂದು ಕುದ್ದು ಮಾಜಿ ಶಾಸಕ ಸತೀಶ್ ಸೈಲ್ ಆರೋಪ ಮಾಡಿದ್ದಾರೆ.

ಸದ್ಯಕ್ಕಂತೂ ಜಿಲ್ಲಾಡಳಿತ ಹಲವು ವಿಷಯಗಳನ್ನು ಮುಚ್ಚಿಡುತ್ತಿದೆಯೇ ಎಂಬ ಅನುಮಾನ ಹೊಗೆಯಾಡುವಂತೆ ಮಾಡಿದೆ. ಇದಕ್ಕೆ ಹಲವು ಘಟನೆಗಳು ಪೂರಕ ಎಂಬಂತೆ ನಡೆದಿದೆ. ಇನ್ನಾದರೂ ಸೂಕ್ತ ಮಾಹಿತಿ ನೀಡುವ ಜೊತೆಗೆ ಸಮರ್ಪಕ ವ್ಯವಸ್ಥೆ ಮಾಡುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!