BREAKING NEWS
Search

ಭಟ್ಕಳ-ಪಾಕಿಸ್ತಾನಿ ಮಹಿಳೆಗೆ ಆಧಾರ್ ಕಾರ್ಡ ! -ಚುನಾವಣೆ ಆಯೋಗದಿಂದ 100ಕ್ಕೂ ಹೆಚ್ಚು ಅರ್ಜಿಗಳು ವಜಾ

1043

ಕಾರವಾರ :- ಕಳೆದ 2021, ಜೂನ್ ತಿಂಗಳಿನಲ್ಲಿ ಬೆಳಕಿಗೆ ಬಂದ ಪಾಕಿಸ್ತಾನಿ ಮಹಿಳೆ ಭಟ್ಕಳದಲ್ಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಪಡೆದುಕೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ, ಮತದಾರರ ಸೇರ್ಪಡೆ ವಿಷಯದಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ತಾಕೀತು ಮಾಡಿದೆ.

ಇದರ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಳೆದ ತಿಂಗಳು ನಡೆದ ಮತದಾರರ ನೋಂದಣಿ ಅಭಿಯಾನದಲ್ಲಿ ಹೆಸರು ಸೇರ್ಪಡೆಗೆ ಮುಂದಾಗಿದ್ದ100ಕ್ಕೂ ಹೆಚ್ಚು ಜನರ ಅರ್ಜಿಯನ್ನು ದಾಖಲೆ ವ್ಯತ್ಯಾಸದ ಕಾರಣವೊಡ್ಡಿ ತಿರಸ್ಕರಿಸಲಾಗಿದೆ.

ಕಳೆದ ಮತದಾರರ ನೋಂದಣಿ ಅಭಿಯಾನದಲ್ಲಿ 1176 ಜನರು ಹೊಸದಾಗಿ ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, 114 ಜನರ ಅರ್ಜಿ ತಿರಸ್ಕೃತಗೊಂಡಿದೆ.

ಹೆಸರು ಕೈಬಿಡಲು ಸಲ್ಲಿಸಲಾಗಿದ್ದ 1718 ಅರ್ಜಿಗಳ ಪೈಕಿ 18 ಹಾಗೂ ತಿದ್ದುಪಡಿಗಾಗಿ ಸಲ್ಲಿಸಲಾಗಿದ್ದ 761 ಅರ್ಜಿಗಳ ಪೈಕಿ 112 ಅರ್ಜಿಗಳು ತಿರಸ್ಕೃತಗೊಂಡಿವೆ.

ಮತದಾರರ ವರ್ಗಾವಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ187 ಅರ್ಜಿಗಳಲ್ಲಿ 13 ಅರ್ಜಿಗಳನ್ನು ಮಾನ್ಯತೆ ಪಡೆದುಕೊಂಡಿಲ್ಲ. ಹೆಸರು ಸೇರ್ಪಡೆ ಸಂಬಂಧ ತಿರಸ್ಕೃತಗೊಂಡ ಅರ್ಜಿಗಳೊಂದಿಗೆ ಲಗತ್ತಿಸಲಾದ ದಾಖಲೆಗಳಲ್ಲಿ ಹೆಚ್ಚಿನವರ ವಿಳಾಸ ತಾಳೆಯಾಗದೇ ಇರುವುದು, ಹೆಸರು ವ್ಯತ್ಯಾಸ ಸೇರಿದಂತೆ ವಿವಿಧ ಕಾರಣಗಳನ್ನು ಪರಿಗಣಿಸಿ ತಿರಸ್ಕೃತಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಭಟ್ಕಳ ತಾಲೂಕು ಅತೀ ಸೂಕ್ಷ್ಮವಾಗಿದ್ದು ಈ ಹಿಂದೆ ಪಾಕಿಸ್ತಾನ ದಿಂದ ಭಟ್ಕಳ ವ್ಯಕ್ತಿಗಳನ್ನು ಮದುವೆಯಾಗಿ ನಕಲಿ ಪಾಸ್ವಪೋರ್ಟ ಹಾಗೂ ಪ್ರವಾಸಿ ವಿಸಾ ಪಡೆದು ಇಲ್ಲಿ ಬಂದು ನೆಲಸಿದ್ದರು. ಈ ಕುರಿತು ಜಿಲ್ಲಾ ಪೊಲೀಸ್ ಇಲಾಖೆ ,ಕೇಂದ್ರ ಗುಪ್ತದಳ ಇಲಾಖೆ ಮಾಹಿತಿ ಕಲೆಹಾಕುತಿದ್ದು ಪಾಕಿಸ್ತಾನದಿಂದ ಭಾರತಕ್ಕೆ ವಿವಿಧ ಕಾರಣದಿಂದ ವಿಸಾ ಪಡೆದು ಬಂದ 12 ಜನರನ್ನು ಹಾಕು ನಕಲಿ ಪಾಸ್ ಪೋರ್ಟ ಮಾಡಿಸಿಕೊಂಡು ಬಂದು ಭಟ್ಕಳದಲ್ಲಿ ನೆಲಸಿದ್ದವರನ್ನು ಪತ್ತೆ ಮಾಡಿದೆ. ಹೀಗಾಗಿ ಚುನಾವಣಾ ಆಯೋಗ ಸಹ ಸಲ್ಲಿಕೆಯಾದ ದಾಖಲೆಗಳಲ್ಲಿ ವ್ಯತ್ಯಾಸವನ್ನು ಹುಡುಕಿ ಪತ್ತೆಮಾಡುತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!