ಬಾಲಕಿಗೆ ಲವ್ ಲೆಟರ್ ಕೊಟ್ಟ ಆರನೇ ತರಗತಿ ವಿದ್ಯಾರ್ಥಿ- ಬಾಸುಂಡೆ ಬರುವಂತೆ ಬಾರಿಸಿದ ಶಿಕ್ಷಕಿ!

5239

ಕಾರವಾರ: ಸಿನಿಮಾಗಳನ್ನು ನೋಡಿ ಪ್ರೌಢ ಶಾಲೆ,ಕಾಲೇಜುಗಳಲ್ಲಿ ಪ್ರೀತಿ ಪ್ರೇಮ ಎಂದು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರ ಹಿಂದೆ ಬಿದ್ದು ಭವಿಷ್ಯವನ್ನು ಹಾಳುಮಾಡಿಕೊಳ್ಳುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಹೋಗಿದೆ.ಆದ್ರೆ ಪ್ರಪಂಚ ಏನು ಎಂಬುದನ್ನ ತಿಳಿದುಕೊಳ್ಳುವ ಶಕ್ತಿಯು ಸಹ ಇಲ್ಲದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿಗೆ ಲವ್ ಲೆಟರ್ ಕೊಟ್ಟು ಶಾಲೆಯ ಶಿಕ್ಷಕಿಯಿಂದ ಬಾಸುಂಡೆ ಬರುವಂತೆ ಹೊಡೆತ ತಿಂದಿದ್ದಾನೆ.

ಹೌದು ಈ ಘಟನೆ ನಡೆದಿದ್ದು ಹೊನ್ನಾವರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ. ಇಲ್ಲಿನ ಆರನೇ ತರಗತಿ ವಿದ್ಯಾರ್ಥಿ ತನ್ನ ಸಹಪಾಠಿ ವಿದ್ಯಾರ್ಥಿನಿಗೆ ಸಿನಿಮಾ ಸ್ಟೈಲ್ ನಲ್ಲಿ ಲವ್ ಲೆಟರ್ ಕೊಟ್ಟು ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿನಿ ಈ ಲೆಟರ್ ನನ್ನು ಶಾಲೆಯ ಶಿಕ್ಷಕಿ ಕಲ್ಪನ ಹೆಗಡೆಯವರಿಗೆ ನೀಡಿದ್ದಾಳೆ.

ಲವ್ ಲೆಟರ್ ನೋಡಿ ಸಿಟ್ಟಾದ ಶಿಕ್ಷಕಿ ವಿದ್ಯಾರ್ಥಿಯನ್ನು ಕರೆಯಿಸಿ ಕೋಪದಿಂದ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಅವರ ಹೊಡೆತಕ್ಕೆ ಬಾಲಕನ ಬೆನ್ನುಗಳಲ್ಲಿ ಬಾಸುಂಡೆ ಎದ್ದು ನಲುಗಿ ಹೋಗಿದ್ದಾನೆ.
ಇನ್ನು ಈ ವಿಷಯ ತಡವಾಗಿ ಪೋಷಕರಿಗೆ ತಿಳಿದಿದ್ದು ಬಾಲಕನ ಬಟ್ಟೆ ಬಿಚ್ಚಿ ನೋಡಿದಾಗ ಬೆನ್ನು ಕೆಂಪಾಗಿತ್ತು.

ತಕ್ಷಣ ಪೋಷಕರು ಶಿಕ್ಷಕಿಯನ್ನು ತರಾಟೆ ತೆಗೆದುಕೊಂಡಿದ್ದು ಗಲಾಟೆ ನಡೆದಿದೆ. ಕೊನೆಗೆ ಶಿಕ್ಷಕಿ ಪೋಷಕರಲ್ಲಿ ಕ್ಷಮೆ ಕೇಳುವ ಮೂಲಕ ಪ್ರಕರಣ ಇತ್ಯಾರ್ಥವಾಗಿದೆ. ಆದರೇ ಇಂದಿನ ದಿನದಲ್ಲಿ ಮಕ್ಕಳು ಮೊಬೈಲ್ ಸಿನಿಮಾ ಎಂದು ಚಿಕ್ಕ ವಯಸ್ಸಿನಲ್ಲಿ ದಾರಿತಪ್ಪುತ್ತಿರುವುದು ಇಂದಿನ ಪೀಳಿಗೆಗಳು ಯಾವ ಕಡೆ ವಾಲುತ್ತಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.ಇದರ ಜೊತೆಗೆ ತಪ್ಪನ್ನು ತಿದ್ದಬೇಕಾದ ಶಿಕ್ಷಕರು ಕ್ರೌರ್ಯ ಮೆರೆದಿದ್ದು ಸಹ ಕಂಡನೀಯವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!