ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೊನಾ ಸೋಂಕಿನ ಸಂಖ್ಯೆ ಕಡಿಮೆಯಾದ ಹಿನ್ನಲೆಯಲ್ಲಿ ಕರೋನಾ ನಿಯಮಗಳಲ್ಲಿ ಸಡಿಲಿಕೆ ಮಾಡಿ ಜಿಲ್ಲಾಧಿಕಾರಿ ಮುಲೈ ಮುಗಿಲ್ ರವರು ಆದೇಶ ಮಾಡಿದ್ದಾರೆ.
ಈ ಆದೇಶದ ಪ್ರಕಾರ ಜಿಲ್ಲೆಯಲ್ಲಿ ಇರುವ ದೇವಸ್ಥಾನ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ,ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಇಂದಿನಿಂದ ಜಿಲ್ಲಾಧಿಕಾರಿ ಆದೇಶವು ಜಾರಿಯಾಗಿದ್ದು ಇದರಿಂದಾಗಿ ಗೋಕರ್ಣ, ಮುರುಡೇಶ್ವರ ಧಾರ್ಮಿಕ ಕ್ಷೇತ್ರಗಳಲ್ಲಿ ಬರುವ ಭಕ್ತರಿಗೆ ಸೇವೆಗಳಿಗೆ ಅವಕಾಶ ಸಿಕ್ಕಂತಾಗಿದೆ.
ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಶೇ.1 ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇದ್ದು ಸಾವಿನ ಪ್ರಮಾಣ ಸಹ ಅತ್ಯಲ್ಪವಾಗಿದೆ. ಪ್ರವಾಸೋಧ್ಯಮ ಹಾಗೂ ಧಾರ್ಮಿ ಕ್ಷೇತ್ರಕ್ಕೆ ಹೆಸರಾಗಿರು ಜಿಲ್ಲೆಯಲ್ಲಿ ಪ್ರವಾಸಿಗರು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಜನರ ಸಂಖ್ಯೆ ಹೆಚ್ಚಿದೆ.ಆದರೂ ಕೋವಿಡ್ ಸಂಖ್ಯೆ ಈ ತಿಂಗಳಲ್ಲಿ ಅತ್ಯಲ್ಪವಾಗಿದ್ದು ಈ ಹಿನ್ನಲೆಯಲ್ಲಿ ಇಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶ ನೀಡಿದ್ದಾರೆ.
ಜಿಲ್ಲೆಯಲ್ಲಿ ಇಂದಿನ ಕರೋನಾ ಸೋಂಕಿತರ ಸಂಖ್ಯೆ ಈ ಕೆಳಗಿನಂತಿದೆ.:-
