ಕಾರವಾರ:- ಉತ್ತರಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ಲ್ಯಾಕ್ ಫಂಗಸ್ ಪತ್ತೆಯಾಗುವ ಮೂಲಕ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಜಿಲ್ಲೆಯ
ದಾಂಡೇಲಿ ಸರಕಾರಿ ಆಸ್ಪತ್ರೆಯಲ್ಲಿ ಕರೋನಾ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಕೆಲವು ದಿನದ ಹಿಂದೆ ಕರೋನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಗೆ ಕಣ್ಣು ಊದಿಕೊಂಡಿತ್ತು. ನಂತರ ವೈದ್ಯರು ತಪಾಸಣೆ ನಡೆಸಿದ್ದು ಬ್ಲಾಕ್ ಪಂಗಸ್ ಇರುವುದನ್ನು ದೃಡಪಡಿಸಿದ್ದಾರೆ. ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಈತನನ್ನು ಮಂಗಳೂರಿಗೆ ರವಾನೆ ಮಾಡಲಾಗಿದೆ.
ಸದ್ಯ ಮಲೆನಾಡು ಭಾಗದ ದಾಂಡೇಲಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಕರಾವಳಿ ಭಾಗದಲ್ಲಿ ಈ ಬಗ್ಗೆ ಈವರೆಗೂ ಯಾವುದೇ ಬ್ಲಾಕ್ ಫಂಗಸ್ ಸೋಂಕಿನ ಪ್ರಕರಣ ವರದಿಯಾಗಿಲ್ಲ.

ದಾಂಡೇಲಿಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಏರಿಕೆ.
ಇನ್ನು ದಾಂಡೇಲಿಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಸಹ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ.
ಲಾಕ್ ಡೌನ್ ,ಕಠಿಣ ನಿಯಮ ಜಾರಿ ಮಾಡಿದರೂ
ದಾಂಡೇಲಿ ತಾಲೂಕಿನಲ್ಲಿ ಇಂದು 43 ಜನರಿಗೆ ಪಾಸಿಟಿವ್ ವರದಿಯಾಗಿದೆ. ಈ ವರೆಗೆ 1916ಜನ ಕರೋನಾ ಸೋಂಕಿತರಾಗಿದ್ದು 60 ಜನ ಕರೋನಾಕ್ಕೆ ಮೃತಪಟ್ಟಿದ್ದಾರೆ. ಸದ್ಯ 385 ಯಾಕ್ಟೀವ್ ಕೇಸ್ ಗಳಿದ್ದು ಅತೀ ಚಿಕ್ಕ ತಾಲೂಕಿನಲ್ಲಿ ಸೋಂಕು ಹೆಚ್ಚಾಗುವ ಜೊತೆ ಇದೀಗ ಬ್ಲಾಕ್ ಪಂಗಸ್ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಬ್ಲಾಕ್ ಫಂಗಸ್ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ:-
https://kannadavani.news/karnataka-black-fungus-information-coronavirus-india-karnataka/