ಕಾಳಿ ನದಿಯಲ್ಲಿ ಕೈ ತೊಳೆಯಲು ಹೊದ ಯುವಕನನ್ನು ಎಳೆದೊಯ್ದ ಮೊಸಳೆ

1784

ದಾಂಡೇಲಿ:- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಳಿ ನದಿಯಲ್ಲಿ ಯುವಕನನ್ನು ಮೊಸಳೆ ಹೊತ್ತೊಯ್ದ ಘಟನೆ ಇಂದು ರಾತ್ರಿ ನಡೆದಿದೆ.

ದಾಂಡೇಲಿಯ ಪಟೇಲ್ ನಗರದ ಆರ್ಷದ್ ಖಾನ್ (22) ಮೊಸಳೆ ದಾಳಿಗೆ ಬಲಿಯಾದ ಯುವಕನಾಗಿದ್ದು ದಿನನಿತ್ಯದ ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಕಾಳಿ ನದಿ ದಡಕ್ಕೆ ಹೋಗಿದ್ದ. ಈ ವೇಳೆ ನೀರಿಗೆ ಕೈ ಹಾಕುತ್ತಿದ್ದಂತೆ ಮೊಸಳೆ ಆತನನ್ನು ಎಳೆದೊಯ್ದಿದೆ.
ಅರಣ್ಯಾಧಿಕಾರಿಗಳು ಮತ್ತು ಅಗ್ನಿಶಾಮಕ ದಳದಿಂದ ಯುವಕನ ದೇಹಕ್ಕಾಗಿ ಹುಡುಕಾಟ ನಡೆಸುತಿದ್ದು
ದಾಂಡೇಲಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!