ಕಾರವಾರ : ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಮನೆಯ ಸದಸ್ಯರಾಗಿದ್ದವರು. ಅವರು ಅವರ ಮನೆಗೆ ಆಸೆಪಟ್ಟು ಬರುತಿದ್ದಾರೆ.ಮುಹೂರ್ತ ಯಾವಾಗ ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.
ಕಾರವಾರದಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಎಂಪಿ ಆಗುತ್ತೇನೆ ,ಸಚಿವ ಆಗುತ್ತೇನೆ,ಮುಖ್ಯಮಂತ್ರಿ ಆಗುತ್ತೇನೆ ಎಂಬ ಆಸೆಯಿಂದ ಬರಬೇಡಿ. ಅಲ್ಲಿ ಕಷ್ಟ ಪಡುತಿದ್ದಾರೆ, ಅಲ್ಲಿ ಅವರು ಕಷ್ಟ ಪಡುವುದು ನೋಡಲು ಆಗುವುದಿಲ್ಲ ಬರುತ್ತೇನೆ ಎಂದಿದ್ದಾರೆ ಬರುತ್ತಾರೆ ಅಷ್ಟೆ.
ಹೆಬ್ಬಾರ್ ರವರು ಬರುತ್ತೇನೆ ಎಂದಾಗ ದೂಡಲು ಆಗುವುದಿಲ್ಲ.ಮುಹೂರ್ತ ಅವರು ನೋಡಬೇಕು ನಾವು ಯಾವಾಗಲೂ ಬಾಗಿಲು ತೆರೆದುಕೊಂಡಿರುತ್ತೇವೆ ಯಾರು ಬಂದ್ರೂ ಸ್ವಾಗತ ಎಂದರು.
ಇನ್ನು ಲೋಕ ಸಭೆ ಚುನಾವಣೆಗೆ ಸ್ಪರ್ದಿಸಲು ನಮ್ಮ ಹತ್ತಿರ ಹತ್ತು ಜನ ಕ್ಯಾಂಡಿಡೇಟ್ ಇದ್ದಾರೆ.ಕೇಂದ್ರ ಸಚಿವ ಪ್ರಹ್ಲಾದ್ ಜ್ಯೋಷಿಯವರಿಗೆ ಹೆದರಿಕೆ ಹುಟ್ಟಿದೆ.ಜಗದೀಶ್ ಶಟ್ಟರ್ ಲೋಕಸಭೆಗೆ ನಿಂತರೇ ಗೆಲ್ಲುತ್ತಾರೆ ಎಂದರು.
ರಾಜ್ಯದಲ್ಲಿ ಗುತ್ತಿಗೆ ದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುತಿದ್ದಾರೆ.ಅವರು ಸೂಸೈಡ್ ಮಾಡಿಕೊಳ್ಳಬಾರದು ಎಂದಾದರೇ ನಾವು ಹಣ ಕೊಡುತ್ತೇವೆ ಎಂದರೇ ಅದು ಬಿಜೆಪಿಯವರು ಮಾಡಿದ ಸಾಲ.ಅವರು ಮಾಡಿದ್ದನ್ನ ನಾವು ಸರಿಪಡಿಸುತ್ತೇವೆ.
ಬಿಜೆಪಿಯವರು ಸುಳ್ಳು ಹೇಳಿ ಮತದಾರರಿಗೆ ದಾರಿ ತಪ್ಪಿಸಿದರು.ಬಿಜೆಪಿಯವರು ಮಾತ್ರ ಅಚ್ಚೆ ದಿನ್ ಬಂದಿದೆ.ಬೇರೆಯವರಿಗೆ ಮಾತ್ರ ಅಚ್ಚೆದಿನ್ ಬಂದಿಲ್ಲ.
KSRTC ಅವರಿಗೆ ಆರು ತಿಂಗಳಿಂದ ಹಣ ಬಂದಿರಲಿಲ್ಲ ಹಣ ಹಾಕಿದ್ದೇವೆ.ಯಾವುದೇ ಇಲಾಖೆಗೆ ಸಂಬಳ ಕೊಡಲು ನಮ್ಮ ಬಳಿ ಹಣ ಇದೆ.ಗ್ಯಾರಂಟಿ ಯೋಜನೆಯಿಂದ ಯಾವುದೇ ಸಮಸ್ಯೆ ಯಾಗಿಲ್ಲ ಎಂದರು.