ಕಾಸರಕೋಡು ಕಡಲತೀರದಲ್ಲಿ ಕಡಲಾಮೆ ಸಾವು.

727

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡು ಟೊಂಕದ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯ ಸಮೀಪ ಸಂತಾನಾ
ಭಿವೃದ್ಧಿಗಾಗಿ ಮೊಟ್ಟೆ ಇಡಲು ಬಂದಿದ್ದ ರಿಡ್ಲೆ ಜಾತಿಯ ಕಡಲಾಮೆ ಸಾವು ಕಂಡಿದೆ. ಡೊಂಕಾದ ಕಡಲ ತೀರದಲ್ಲಿ ಕಡಲಾಮೆ ಕಳೆಬರ ಪತ್ತೆಯಾಗಿದೆ. ಕಳೆದ ಎರಡು ದಿನದಿಂದ ಈ ಆಮೆ ಕಡಲ ತೀರದಲ್ಲಿ ಮೊಟ್ಟೆ ಇಡಲು ಬಂದಿತ್ತು. ಈ ಸಂದರ್ಭದಲ್ಲಿ ಕಡಲ ತೀರದಲ್ಲಿ ಬಂದರು ನಿರ್ಮಾಣಕ್ಕಾಗಿ ರಸ್ತೆ ಮಾಡಲಾಗುತಿದ್ದು ಈ ವೇಳೆ ಸಾವು ಸಂಭವಿಸಿರುವ ಅನುಮಾನ ವ್ಯಕ್ತವಾಗಿದೆ.

ಆಮೆ ಸಾವಿಗೆ ಅನುಮಾನ ವ್ಯಕ್ತಪಡಿಸಿದ ಮೀನುಗಾರರು.

ಮಂಗಳವಾರ ಸಂಜೆ ಸ್ಥಳೀಯ ಮೀನುಗಾರರು ಈ ಘಟನೆ ಗಮನಿಸಿದ್ದು, ಕಡಲತಡಿಯಲ್ಲಿ ರಕ್ತಸಿಕ್ತವಾದ ಸ್ಥಿತಿಯಲ್ಲಿ ಕಡಲಾಮೆ ಕಳೇಬರ ಪತ್ತೆಯಾಗಿದೆ.
ಸ್ಥಳೀಯ ವಾಣಿಜ್ಯ ಬಂದರು ನಿರ್ಮಾಣ ಕಂಪನಿಯ ಕಾವಲು ಸಿಬ್ಬಂದಿಗಳು ಹೊಡೆದು ಸಾಯಿಸುವ ಅಮಾನವೀಯ ಕೃತ್ಯ ಎಸಗಿದ್ದಾರೆ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಕೊಂಕಣ ಖಾರ್ವಿ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

ಕಡಲಾಮೆಗಳ ಮೀನುಗಾರರಿಗೆ ಪೂಜ್ಯನೀಯ ಭಾವನೆ ಇದೆ. ಹಿಂದೆ ಮೀನುಗಾರರು ಸಮುದ್ರದಲ್ಲಿ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಾಗ ವಿಷ್ಣು ಕೂರ್ಮಾವತಾರದಲ್ಲಿ ಬಂದು ಮೀನುಗಾರರನ್ನು ರಕ್ಷಿಸಿದ್ದನು ಎನ್ನುವ ಪ್ರತೀತಿ ಇದೆ. ಹಾಗಾಗಿ ಆಮೆಗಳ ಬಗ್ಗೆ ಮೀನುಗಾರರಿಗೆ ಅದರಲ್ಲೂ ಕೊಂಕಣಿ ಖಾರ್ವಿ ಸಮಾಜದವರು ವಿಶೇಷವಾದ ಭಾವನೆ ಇದೆ.
ಇಲ್ಲಿ ನಿಷೇದಾಜ್ಞೆ ನಡುವೆಯೇ ವಾಣಿಜ್ಯ ಬಂದರು ಕಂಪನಿಯವರು ಕಡಲಾಮೆಗಳನ್ನು ಸಾಯಿಸಿ ಅವುಗಳ ಮಾರಣಹೋಮ ನಡೆಸುತ್ತಿರುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದು, ಹೊನ್ನಾವರ ಪೋರ್ಟ ಪ್ರೈವೇಟ್ ಕಂಪೆನಿಯ ಮತ್ತು ಅದರ ಕಾವಲು ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು. ಸ್ಥಳೀಯ ಕೊಂಕಣ ಖಾರ್ವಿ ಸಮಾಜದ ಮುಖಂಡ ರಾಜೇಶ ಗೊವಿಂದ ತಾಂಡೇಲರು ಸ್ಥಳೀಯ ಅರಣ್ಯವಲಯಾಧಿಕಾರಿಯವರನ್ನು ಆಗ್ರಹ ಪಡಿಸಿದ್ದಾರೆ.

ಗೋಹತ್ಯೆ ವಿಷಯದಲ್ಲಿ ಜನರನ್ನು ಭಾವಾನಾತ್ಮಕವಾಗಿ ಪ್ರಚೋದಿಸಿ ಧರ್ಮಸಂಘರ್ಷ ಹುಟ್ಟುಹಾಕುವ ಪಕ್ಷವೊಂದು ಕಾಸರಕೋಡು ಟೊಂಕದಲ್ಲಿ ಭಗವಾನ್ ಶ್ರೀ ವಿಷ್ಣುವಿನ ಅವತಾರವಾದ ಕಡಲಾಮೆ
ಗಳ ಮಾರಣಹೋಮಕ್ಕೆ ಪರೋಕ್ಷ
ವಾಗಿ ಕಾರಣವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!