ಕಾರವಾರ-ವೇಷ್ಯಾ ವಾಟಿಕೆ ನಡೆಯುತಿದ್ದ ಲಾಡ್ಜ್ ಮೇಲೆ ದಾಳಿ-ಕುಮಟಾ ಯುವಕ ವಶಕ್ಕೆ.

10986

ಕಾರವಾರ – ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್‌‌ಗೆ ಪೊಲೀಸರ ದಾಳಿ ನಡೆಸಿ ಯುವತಿಯ ರಕ್ಷಣೆ ಮಾಡಿದ ಘಟನೆ ಕಾರವಾರದ ಸುಮಿತ್ರಾ ಲಾಡ್ಜ್‌ನಲ್ಲಿ ನಡೆದಿದೆ.

ಖಚಿತ ಮಾಹಿತಿ ಆಧಾರದಲ್ಲಿ ಲಾಡ್ಜ್‌ಗೆ ದಾಳಿ ಮಾಡಿದ ಕಾರವಾರ ನಗರ ಪೊಲೀಸರು ಈ ವೇಳೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಅಂಕೋಲ ಮೂಲದ ಯುವತಿ ಹಾಗೂ ಕುಮಟಾ ಮೂಲದ ಜೋಡಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಕೈಗೊಂಡಿದ್ದಾರೆ‌.

ಬಂಧಿತ ಕುಮಟಾ ನಗರದ ಸುಭಾಶ್‌ ರಸ್ತೆಯ ನಿವಾಸಿ ಹೇಮಾಂಶು ನಾಯಕ್ ಎಂದು ಗುರುತಿಸಲಾಗಿದ್ದು,ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಪೊಲೀಸರು ಒಪ್ಪಿಸಿದ್ದಾರೆ.

ಇನ್ನು ಲಾಡ್ಜ್ ನಡೆಸುತ್ತಿದ್ದ ಸತೀಶ್ ರಾಣೆ ಹಾಗೂ ಮಾಲೀಕ ವರ್ಣೇಕರ್ ಮೇಲೆಯೂ ಪ್ರಕರಣ ದಾಖಲು ಮಾಡಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!