ಕಾರವಾರ:- ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಮತ್ತೆ ಬೆಳಿಗ್ಗೆ 10 ಗಂಟೆವರೆಗೆ ಮಾತ್ರ ಅವಕಾಶ ವಿದ್ದು ಬೇರೆ ಜಿಲ್ಲೆಗಳಲ್ಲಿ ಮಾಡಿದಂತೆ ಲಾಕ್ ಡೌನ್ ಇಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದಿನಸಿ ಹಾಗೂ ಅಗತ್ಯ ವಸ್ತುಗಳು ಅಂಗಡಿಗಳಿಗೆ ಬೆಳಿಗ್ಗೆ 10 ಗಂಟೆವರೆಗೆ ಮಾತ್ರ ಅವಕಾಶ ಮಾಡಿಕೊಡಲಾಗಿದ್ದು ಈ ಹಿಂದೆ ಇದ್ದಂತೆ 12 ಘಂಟೆ ವರೆಗೆ ಅವಕಾಶ ಇಲ್ಲ ಎಂದರು.

ಜಿಲ್ಲೆಯಲ್ಲಿ ಜನ ಜನತಾ ಕರ್ಫ್ಯೂ ಗೆ ಬೆಂಬಲ ನೀಡಿದ್ದಾರೆ ಹೀಗಾಗಿ ಒಂದು ವಾರ ನೋಡಿ ಲಾಕ್ ಡೌನ್ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದ ಅವರು ಜಿಲ್ಲೆಯಲ್ಲಿ 561 ಆಕ್ಸಿಜನ್ ಬೆಡ್‌ಗಳಿದ್ದು, 272 ಬಳಕೆಯಾಗಿದ್ದು 289 ಬೆಡ್ ಖಾಲಿಯಿವೆ, 61 ವೆಂಟಿಲೇಟರ್ ಬೆಡ್‌ಗಳ ಪೈಕಿ 14 ಬಳಕೆಯಾಗಿದ್ದು 47 ಖಾಲಿಯಿದೆ,
ಜಿಲ್ಲೆಯಲ್ಲಿ 11 ಟನ್ ಆಕ್ಸಿಜನ್ ಸ್ಟಾಕ್ ಮಾಡೋ ಸಾಮರ್ಥ್ಯವಿರೋದ್ರಿಂದ ಆಕ್ಸಿಜನ್‌ಗೆ ಕೊರತೆಯಿಲ್ಲ.
ಆಸ್ಪತ್ರೆಯಲ್ಲಿ ಡೀನ್, ಡಿಎಚ್‌ಒ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಆಸ್ಪತ್ರೆ ವಿಷಯದಲ್ಲಿ ಏನೇ ಆದ್ರೆ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
ಜಿಲ್ಲಾಧಿಕಾರಿ ವೈದ್ಯರಿಗೆ ಅಗತ್ಯವಿರೋ ಎಲ್ಲಾ ಸೌಲಭ್ಯಗಳನ್ನು ಪೂರೈಸುತ್ತಾರೆ,ಅಧಿಕಾರಿಗಳು, ಜನಪ್ರತಿನಿಧಿಗಳು
ಯಾರೂ ಕರೆ ಮಾಡಿ ನಿಗದಿತ ಬೆಡ್ ನೀಡಿ ಎಂದು ಹೇಳುವಂತಿಲ್ಲ,ರೋಗಿಗಳಿಗೆ ಯಾವ ಬೆಡ್ ನೀಡಬೇಕೆಂದು ತಜ್ಞರೇ ನಿರ್ಧರಿಸುತ್ತಾರೆ.ಅಗತ್ಯ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಜಿಲ್ಲಾಧಿಕಾರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಜಿಲ್ಲೆಯಲ್ಲಿ 800ಕ್ಕೂ ಮಿಕ್ಕಿ ರೆಮ್‌ಡಿಸಿವಿಯರ್ ಸ್ಟಾಕ್ ಇದೆ, ಅವಶ್ಯಕತೆ ಇರುವವರಿಗೆ ಪೂರೈಸಲಾಗುತ್ತದೆ. ರಾಜ್ಯದಲ್ಲಿ 79 ಹೊಸ ವೈದ್ಯರನ್ನು ಸರಕಾರದ ಸೇವೆಗೆ ನೀಡಲಾಗಿದ್ದು, 300 ಬೆಡ್ ಆಸ್ಪತ್ರೆಯನ್ನೂ ಕೊರೊನಾ ಚಿಕಿತ್ಸೆಗಾಗಿ ನೀಡಲಾಗಿದೆ.
ತುರ್ತು ಚಿಕಿತ್ಸಾ ವಿಭಾಗದಲ್ಲಿ ನರ್ಸ್‌ಗಳಿಗಾಗಿ ಮೆಡಿಕಲ್ ವಿಭಾಗದ ವಿದ್ಯಾರ್ಥಿಗಳನ್ನು ಬಳಕೆಗೆ ಅನುಮತಿ ನೀಡಲಾಗಿದೆ. ಡಿ ದರ್ಜೆ ನೌಕರರ ಬೇಡಿಕೆಯಿಟ್ಟಿದ್ದಾರೆ.ಶೀಘ್ರದಲ್ಲಿ ಬೇಡಿಕೆಗಳನ್ನು ಪೂರೈಸಲಾಗುವುದು.
ಅಗತ್ಯವಿರುವ ವೈದ್ಯರು, ನರ್ಸ್, ಡಿ ಗ್ರೂಪ್ ನೇಮಕದ ವಾಕ್ ಇನ್ ಟಾಕ್‌ಗೆ ಜಿಲ್ಲಾಧಿಕಾರಿ, ಡಿಎಚ್‌ಒಗೆ ಅನುಮತಿ ನೀಡಲಾಗಿದೆ. ಆಶಾ ಕಾರ್ಯಕರ್ತರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿದ್ದೇನೆ.ಕಳೆದ ಬಾರಿ ಆಶಾ ಕಾರ್ಯಕರ್ತರನ್ನು ಬಳಕೆ ಮಾಡಿದಂತೆ ಈ ಸಲ ಬಳಕೆಯಾಗಿಲ್ಲ,ಕಳೆದ ಬಾರಿ ತುಂಬಾ ಕೆಲಸ ಮಾಡಿದ್ದಾರೆ, ಈ ಸಲವೂ ಬಳಸಿಕೊಳ್ಳಬೇಕು.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ 15 ಸಾವಿರ ಲೀಟರ್ ಆಕ್ಸಿಜನ್ ಉತ್ಪಾದಿಸುವ ಘಟಕದ ಕೆಲಸ ನಾಳೆ ಅಥವಾ ನಾಳಿಡಿದ್ದಿ ನಿಂದ ಪ್ರಾರಂಭವಾಗಲಿದೆ.
ಕಾರವಾರ ಜಿಲ್ಲಾಸ್ಪತ್ರೆ, ಶಿರಸಿ, ಭಟ್ಕಳದಲ್ಲಿ ಒಂದೂವರೆ ತಿಂಗಳಲ್ಲಿ ಬೃಹತ್ ಆಕ್ಸಿಜನ್ ಘಟಕ ಪ್ರಾರಂಭವಾಗಲಿದೆ.
ವಾಕ್ಸಿನೇಷನ್ ಸದ್ಯಕ್ಕೆ 18 ವರ್ಷ ಹಾಗೂ ಅದಕ್ಕೂ ನೇಲ್ಪಟ್ಟವರಿಗೆ ಕೊಡಲಾಗುತ್ತಿಲ್ಲ,ಈಗಾಗಲೇ ಡೋಸ್ ಪಡೆದುಕೊಂಡವರಿಗೆ ಸೆಕೆಂಡ್ ಡೋಸ್ ನೀಡಲು ನಮ್ಮಲ್ಲಿದ್ದು, ಕೊಡಲಾಗುತ್ತಿದೆ.
10-15 ದಿನದಲ್ಲಿ ವಾಕ್ಸಿನೇಷನ್ ಬರುತ್ತೆ, ಜನರು ಸಹಕಾರವಿರಲಿ, ಗರ್ಭಿಣಿಯರಿಗೆ ಡೆಲಿವಾರಿ ಆಗೋ ಎರಡು ವಾರಗಳ ಮೊದಲು ಆರ್‌ಟಿಪಿಸಿಆರ್ ಟೆಸ್ಟ್ ಅನಿವಾರ್ಯ. ರಾಜ್ಯದಲ್ಲಿ ಲಾಕ್‌ಡೌನ್ ಮಾಡಿದ್ರೆ ಕಾರ್ಮಿಕರ ಸ್ಥಿತಿ, ರೈತರ, ರಾಜ್ಯದ ಹಣಕಾಸಿನ ಸ್ಥಿತಿ ಹೇಗಿರುತ್ತೆ ಅಂತಾ ಗೊತ್ತಿದೆ.ಇದರಿಂದಾಗಿ ಸದ್ಯಕ್ಕೆ ಲಾಕ್‌ಡೌನ್ ಮಾಡೋ ಯಾವುದೇ ನಿರ್ಧಾರ ಕೈಗೊಳ್ಳಲ್ಲ,ಹಣಕಾಸಿನ ಮೂಲಕ ಸರ್ಕಾರಕ್ಕೆ ಯಾರೇ ಸಹಾಯ ಮಾಡಲು ಇಚ್ಛೆಯಿದ್ದರೆ ಜಿಲ್ಲಾಧಿಕಾರಿಗೆ ನೀಡಬಹುದು ಎಂದರು.