BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ. ವಾರದಲ್ಲಿ ನಾಲ್ಕು ದಿನ ಅವಕಾಶ: ವಿವರ ನೋಡಿ.

5775

ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶ ಮಾಡಿದ್ದಾರೆ. ಈ ಹಿಂದೆ ಅಗತ್ಯ ವಸ್ತು ಕರೀದಿಗೆ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು.ಆದರೇ ಇದೀಗ ಜನರ ದಟ್ಟಣೆ ತಪ್ಪಿಸಲು ಜನರ ಅಗತ್ಯ ವಸ್ತು ಕರೀದಿಗೆ ನಾಲ್ಕು ದಿನ ಅವಕಾಶ ಮಾಡಿಕೊಟ್ಟಿದೆ.
ಸೋಮವಾರ,ಮಂಗಳವಾರ,ಬುಧವಾರ,ಗುರುವಾರ ಅಗತ್ಯ ಕರೀದಿಗೆ ಅವಕಾಶ ಮಾಡಿಕೊಟ್ಟಿದ್ದು ,ಈ ಹಿಂದೆ ಬೆಳಗ್ಗೆ 6 ರಿಂದ 10 ಘಂಟೆ ವರೆಗೆ ಇದ್ದ ಸಮಯವನ್ನು ಬೆಳಗ್ಗೆ 8 ರಿಂದ 12 ರ ವರೆಗೆ ಏರಿಕೆ ಮಾಡಿ ಅವಕಾಶ ಮಾಡಿಕೊಟ್ಟಿದೆ. ಇನ್ನು ಶುಕ್ರವಾರ ,ಶನಿವಾರ,ಭಾನುವಾರ ಮಾತ್ರ ಸಂಪೂರ್ಣ ಲಾಕ್ ಡೌನ್ ಇರಲಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ರವರು ಮಾಹಿತಿ ನೀಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!