ಕಾರವಾರ:- ನಾಳೆಯಿಂದ ಮೇ .24 ರ ವರೆಗೆ ಸಂಪೂರ್ಣ ಲಾಕ್ ಡೌನ್ ಗೆ ರಾಜ್ಯ ಸರ್ಕಾರ ಆದೇಶಿಸಿದೆ. ಇದರ ಬೆನ್ನಲ್ಲೇ ಜಿಲ್ಲಾಡಳಿತ ಸಹ ನಾಳೆಯಿಂದ ಜಿಲ್ಲಾದ್ಯಾಂತ ಕಠಿಣ ಲಾಕ್ ಡೌನ್ ಗೆ ಕ್ರಮ ಕೈಗೊಂಡಿದೆ.
ಈ ಕುರಿತು ಕಾರವಾರದಲ್ಲಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
ಯಾವುದಕ್ಕೆ ನಿರ್ಬಂಧ ಯಾವುದಕ್ಕೆ ಇಲ್ಲ!
- ಹಾಲು ಮಾರಾಟಕ್ಕೆ ಬೆಳಗ್ಗೆ 6 ರಿಂದ ಸಂಜೆ 6 ರ ವರೆಗೆ ಅವಕಾಶ.
- ಜಿನಸಿ ಅಂಗಡಿಗಳಿಗೆ ಬೆಳಗ್ಗೆ 6 ರಿಂದ 10 ರ ವರೆಗೆ ಅವಕಾಶ ವಿದೆ ಆದರೇ ಕಾರವಾರ ನಗರಸಭೆ ಆದೇಶದಂತೆ ಮನೆ ಮನೆಗೆ ತೆರಳಿ ವ್ಯಾಪಾರಕ್ಕೆ ಸೂಚಿಸಲಾಗಿದೆ.
- ಔಷಧಿ ಅಂಗಡಿಗಳಿಗೆ ಸಮಯ ನಿಗದಿ ಇಲ್ಲ.
- ಗೂಡಂಗಡಿಗಳಿಗೆ ಸಂಪೂರ್ಣ ನಿರ್ಬಂಧ.
- ಬೀದಿ ಬದಿ ವ್ಯಾಪಾರಕ್ಕೆ ನಿರ್ಬಂಧ.
- ಮೀನು,ತರಕಾರಿ ವ್ಯಾಪಾರಕ್ಕೆ ನಿರ್ಬಂಧ. ಈ ವ್ಯಾಪಾರಿಗಳು ಮನೆ-ಮನೆಗೆ ತೆರಳಿ ವ್ಯಾಪಾರ ನಡೆಸಬೇಕು.
-ಅಗತ್ಯ ವಸ್ತು ತರುವವರು ವಾಹನ ಬಳಸುವಂತಿಲ್ಲ.
-ಜಿಲ್ಲೆಯಲ್ಲಿ ಯಾವುದೇ ರೀತಿಯ ಓಡಾಟವಿಲ್ಲ, ಖಾಸಗಿ ವಾಹನಗಳ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.
-ಸರಕಾರ ಸೂಚಿಸಿದ ವಾಹನಗಳು ಹೊರತುಪಡಿಸಿ ಉಳಿದ ವಾಹನಗಳಿಗೆ ಅವಕಾಶವಿಲ್ಲ.
-ಹೋಟಲ್ ಗಳಿಗೆ ಪಾರ್ಸಲ್ ಗೆ ಅವಕಾಶ.
- ಈಗಾಗಲೇ ನಿಗದಿಯಾದ ಮದುವೆ ಮನೆಯಲ್ಲಿ ಕಾರ್ಯ ಮಾಡಲು ಅವಕಾಶವಿದ್ದು, 40 ಜನರು ಮಾತ್ರ ಭಾಗವಹಿಸಬಹುದು
- ಮದುವೆ ಮನೆಯ ಪ್ರಮುಖ ವ್ಯಕ್ತಿಗಳಿಗೆ ನಿರ್ಬಂಧಿತ ಅನುಮತಿ ಪತ್ರ ಮೂಲಕ ಪ್ರಯಾಣಕ್ಕೆ ಅವಕಾಶ.
-ರೋಗಿಗಳಿಗೆ ಚಿಕಿತ್ಸೆಗೆ ಹೊರ ಜಿಲ್ಲೆ,ಹೊರ ರಾಜ್ಯಕ್ಕೆ ತೆರಳಲು ನಿರ್ಬಂಧಿತ ಅವಕಾಶ.
- ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಪ್ರಯಾಣಕ್ಕೆ ಅವಕಾಶವಿಲ್ಲ.
-ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್ ಸೀಲ್ ಮಾಡಲಾಗುವುದು.
- ಈ ಹಿಂದೆ ಹಲವು ಚಟುವಟಿಕೆಗಳಿತ್ತಾದರೂ
ಈ ಬಾರಿ ಟೋಟಲ್ ಲಾಕ್‌ಡೌನ್ ಮಾಡಲಾಗುತ್ತಿದೆ. ಈ ಲಾಕ್ ಡೌನ್‌ನಲ್ಲಿ ಕೆಲವು ಚಟುವಟಿಕೆಗಳಿಗೆ ಮಾತ್ರ ಸರಕಾರ ಅವಕಾಶ ನೀಡಿದೆ.
-ಸರಕಾರ ನಿಗದಿಪಡಿಸಿದ ವಾಹನ ಹೊರತುಪಡಿಸಿ ಈ ಬಾರಿ ಪ್ರತೀ ವಾಹನಗಳು ಬ್ಯಾನ್
- ನಾಳೆಯಿಂದ ಯಾವುದೇ ವಾಹನ ಗಳು ಅನುಮತಿ ಇಲ್ಲದೇ ಓಡಾಡಿದರೆ ಅಂತಹ ವಾಹನ ಸೀಝ್ . 30 ದಿನಗಳವರೆಗೆ ಕೋರ್ಟ್ ವಶಕ್ಕೆ.
- ಅಂತರ್‌ರಾಜ್ಯ, ಅಂತರ್‌ಜಿಲ್ಲೆ ಚೆಕ್‌ಪೋಸ್ಟ್‌ನಲ್ಲಿ ಅನುಮತಿ ರಹಿತ ಎಲ್ಲಾ ಸಂಚಾರ ಬ್ಯಾನ್
ರೈಲು, ವಿಮಾನ ಬುಕ್ಕಿಂಗ್ ಇದ್ರೆ ಮಾತ್ರ ಅಂತರ್ ಜಿಲ್ಲೆ, ಅಂತರ್ ರಾಜ್ಯಕ್ಕೆ ಸಂಚಾರಕ್ಕೆ ಅವಕಾಶ.
- ಆಯಾ ತಾಲೂಕು ಆಡಳಿತದಿಂದ ಅನುಮತಿ ಪತ್ರ ತಂದವರಿಗೆ ಸಂಚಾರಕ್ಕೆ ಅವಕಾಶ.
- ಕೃಷಿ ಚಟುವಟಿಕೆಗೆ ಅವಕಾಶ.