BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ನಲ್ಲಿ ಬದಲಾವಣೆ ಆದೇಶ ಹೊರಡಿಸಿದ ಡಿಸಿ

3757

ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಅನ್ನು ಇದೇ ತಿಂಗಳ 14 ವರೆಗೂ ವಿಸ್ತರಿಸಿದ್ದು ಲಾಕ್ ಡೌನ್ ನಿಯಮದಲ್ಲಿ ಅಲ್ಪ ಸಡಿಲಿಕೆ ಮಾಡಲಾಗಿದೆ.

ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಛತ್ರಿ ಮತ್ತು ರೇನ್ ಕೋಟ್ ಮಾರಾಟಕ್ಕೆ ಅನುಮತಿ ನೀಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಜೂ.14 ರ ಬೆಳಗ್ಗೆ 9 ಗಂಟೆಯವರೆಗೆ ಮದುವೆ ಸಮಾರಂಭಕ್ಕೆ ಅವಕಾಶವಿಲ್ಲ. ಅನಗತ್ಯ ಸಂಚಾರ ಕೈಗೊಳ್ಳುವವರ ಮೇಲೆ ಸೂಕ್ತ ಕಾನೂನು ಕ್ರಮ ವಿಧಿಸಲಾಗುತ್ತದೆ. ಆದರೆ ಪ್ರಸ್ತುತ ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳಾದ ಛತ್ರಿ, ರೇನ್‌ಕೋಟ್ ಮೊದಲಾದ ವಸ್ತುಗಳ ಮಾರಾಟಕ್ಕೆ ಅವಕಾಶವಿದೆ.

ಸೋಮವಾರದಿಂದ ಗುರುವಾರದವರೆಗೆ ವಾರದ ನಾಲ್ಕು ದಿನಗಳ ಕಾಲ ಬೆಳಗ್ಗೆ 8 ರಿಂದ 12 ಗಂಟೆಯವರೆಗೆ ಜೀವನಾವಷ್ಯಕ ವಸ್ತುಗಳು, ಹಾಲು, ತರಕಾರಿ, ದಿನಸಿ ಮೊದಲಾದ ವಸ್ತುಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೇ ಕಂಡೈನ್ಮೆಂಟ್ ಝೋನ್ ಗಳಲ್ಲಿ ಎಂದಿನಂತೆ ನಿರ್ಭಂದ ಮುಂದುವರೆಯಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!