ಕಾರವಾರ :- ರಾಜ್ಯ ಸರ್ಕಾರ ವಿನಾಯಿತಿ ನೀಡಿರುವ ಅಂಗಡಿಗಳು ತೆರೆದೇ ಇರುತ್ತವೆ.
ಯಾವುದೋ ಕನ್‌ಫ್ಯೂಶನ್‌ನಿಂದಾಗಿ ಕೆಲ ಜಿಲ್ಲೆಗಳಲ್ಲಿ ಅಂಗಡಿಗಳನ್ನ ಬಂದ್ ಮಾಡಿಸಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಶಿವರಾಮ್ ಹೆಬ್ಬಾರ್
ಜಿಮ್ಗಳು, ಸ್ವಿಮ್ಮಿಂಗ್ ಪುಲ್, ಸ್ಕೂಲು, ಕಾಲೇಜು, ಸಿನೇಮಾ ಥಿಯೆಟರ್ ಗೆ ಕಡಿವಾಣ ಹಾಕಲಾಗಿದೆ.
ಉಳಿದವುಗಳಿಗೆ ವಿನಾಯಿತಿ ನೀಡಿದ್ದೇವೆ.
ಜನರಿಗೆ ಅಗತ್ಯ ಸೇವೆಗಳನ್ನು ಪೂರೈಸುವ ಅಂಗಡಿ- ಮುಂಗಟ್ಟು, ಹೋಟೆಲ್ ಹಾಗೂ ಇತರ ಕ್ಷೇತ್ರಗಳು ತೆರೆದಿರಲಿವೆ. ಬೇರೆ ಜಿಲ್ಲೆಯ ಸಂಗತಿ ಬಗ್ಗೆ ನನಗೆ ಗೊತ್ತಿಲ್ಲ ಎಂದ ಅವರು, ಸರ್ಕಾರದ ಹೊಸ ನಿರ್ದೇಶನ ತಮಗೆ ಬಂದಿಲ್ಲ ಎಂದಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಆ ಪರಿಸ್ಥಿತಿ ಇಲ್ಲ. ಹೀಗಾಗಿ ಅಂಗಡಿಗಳನ್ನ ಬಂದ್ ಮಾಡಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗೊಂದಲದಲ್ಲಿ ಪೊಲೀಸ್ ಇಲಾಖೆ ಹಾಗೂ ಪೂರ್ಣ ಮಾಹಿತಿ ನೀಡದ ಜಿಲ್ಲಾಡಳಿತದಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಇನ್ನು ಪೊಲೀಸ್ ಇಲಾಖೆ ಗೆ ಸೂಚನೆ ಬಂದಂತೆ ಹೋಟಲ್ , ಲಾಡ್ಜ್ ,ಹಾಲಿನ ಮಾರಾಟ ಅಂಗಡಿ, ಜಿನ್ಸಿ ,ಬೇಕರಿ ,ಮಾಂಸದ ಅಂಗಡಿ, ಕಟಿಂಗ್ ಶಾಪ್ ,ಬ್ಯೂಟಿ ಪಾರ್ಲರ್ , ಕಟ್ಟಡ ಸಾಮಾಗ್ರಿ ಮಾರಾಟ ಅಂಗಡಿಗಳು, ಔಷಧ ,ಆಸ್ಪತ್ರೆ, ಹಣ್ಣು-ತರಕಾರಿ ಅಂಗಡಿ,ಸೇರಿದಂತೆ ದಿನನಿತ್ಯದ ಅಗತ್ಯ ವಿರುವುದನ್ನು ಹೊರತುಪಡಿಸಿ ಉಳಿದ ಅಂಗಡಿಗಳು ಇಡೀ ದಿನ ಬಂದ್ ಇರಲಿದೆ.
ಸದ್ಯ ಹೋಟಲ್ ,ಬೇಕರಿ ಗಳಲ್ಲಿ ಪಾರ್ಸಲ್ ಗೆ ಅವಕಾಶ ಮಾಡಿಕೊಟ್ಟಿದೆ.