BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಐದುಸಾವಿರ ದಾಟಿದ ಮಕ್ಕಳ ಕರೋನಾ ಪ್ರಕರಣ! ಮೂರನೇ ಅಲೆಗೆ ಮಕ್ಕಳು ತತ್ತರ?

14477

ಮಕ್ಕಳಿಗೆ ಹೆಚ್ಚಾಯ್ತು ಕರೋನಾ ಪಾಸಿಟಿವ್ – ಜಿಲ್ಲಾಡಳಿತದಿಂದ ಮೆಡಿಕಲ್ ಕಿಟ್ ವಿತರಣೆ.

ಕಾರವಾರ :- ಕರೋನಾ ಸೋಂಕು ಇಷ್ಟು ದಿನ ವಯಸ್ಕರಲ್ಲಿ ಹೆಚ್ಚು ಕಾಡುತಿತ್ತು.ಆದ್ರೆ ಇದೀಗ ಮಕ್ಕಳಲ್ಲೂ ಹೆಚ್ಚಿನ ಸೋಂಕು ಕಾಡತೊಡಗಿದ್ದು ಜಿಲ್ಲೆಯಲ್ಲಿ ಇಂದಿಗೆ 5338 ಮಕ್ಕಳಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಕಾರವಾರ- 387, ಅಂಕೋಲ- 319, ಕುಮಟಾ-511, ಭಟ್ಕಳ- 338, ಹಳಿಯಾಳ- 728 ,
ಜೋಯಿಡಾ- 296, ಹೊನ್ನಾವರ- 568,ಮುಂಡಗೋಡು- 491, ಸಿದ್ದಾಪುರ-498,ಶಿರಸಿ-681,ಯಲ್ಲಾಪುರ- 527 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.
ಜಿಲ್ಲೆಯಲ್ಲಿ ಮೊದಲ ಅಲೆಯಲ್ಲಿ 3800 ಮಕ್ಕಳಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಒಂದು ಮಗು ಮೃತಪಟ್ಟಿತ್ತು. ಆದರೇ ಈ ಬಾರಿ ಅತೀ ಹೆಚ್ಚು ಪಾಸಿಟಿವ್ ಮಕ್ಕಳಲ್ಲಿ ಕಂಡುಬಂದಿದ್ದರೂ ಮೃತ ಮಕ್ಕಳ ಸಂಖ್ಯೆ ಶೂನ್ಯವಿದೆ.

ಜಿಲ್ಲೆಯಲ್ಲಿ ಸರ್ಕಾರಿ ದಾಖಲೆ ಪ್ರಕಾರ 1ರಿಂದ 18 ವರ್ಷದ 391,519 ಜನ ಮಕ್ಕಳಿದ್ದಾರೆ. ಇದರಲ್ಲಿ ಕಳೆದ 10 ದಿನಗಳ ಅಂತರದಲ್ಲಿ 216 ಮಕ್ಕಳಲ್ಲಿ ಕರೋನಾ ಪಾಸಿಟಿವ್ ವರದಿಯಾಗಿದೆ.

ಜಿಲ್ಲೆಯ ಶಿರಸಿ ಮತ್ತು ಹಳಿಯಾಳ ದಲ್ಲಿ ಮಕ್ಕಳ ಸೋಂಕಿನ ಸಂಖ್ಯೆ ಗಣನೀಯ ಏರಿಕೆ ಕಂಡಿದೆ.

ಜಿಲ್ಲಾಡಳಿತದಿಂದ ಸರ್ವೆ ಕಾರ್ಯ- ಮಕ್ಕಳಿಗೆ ಮೆಡಿಕಲ್ ಕಿಟ್ ವ್ಯವಸ್ಥೆ.

ಜಿಲ್ಲೆಯಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬಂದಿದ್ದು ಹಲವು ಮಕ್ಕಳು ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಅವರ ಸರ್ವೇ ಮಾಡಲಾಗಿದೆ. ಜಿಲ್ಲೆಯಲ್ಲಿ ಆರು ವರ್ಷದ ಒಳಗಿನ 1,06,263 ಮಂದಿ ಮಕ್ಕಳು ಇದ್ದು ಈ ಪೈಕಿ 184 ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ.

4142 ಮಕ್ಕಳು ಸಾಧಾರಣ ಅಪೌಷ್ಠಿಕತೆಯಿಂದ ಬಳಲುತ್ತಿದ್ದು ಇಂತಹ ಮಕ್ಕಳ ಆರೈಕೆಗೆ ಮೆಡಿಕಲ್ ಕಿಟ್ ನ್ನು ಜಿಲ್ಲಾ ಪಂಚಾಯತ್ ವತಿಯಿಂದ ಸಿದ್ಧಪಡಿಸಿ ಮೊದಲ ಹಂತದಲ್ಲಿ 1500 ಕಿಟ್ ಗಳನ್ನು ನೀಡಲಾಗಿದೆ.

ಈ ವಾರದಲ್ಲಿ ಉಳಿದ ಮಕ್ಕಳಿಗೂ ನೀಡಲು ಸಿದ್ದತೆ ನಡೆದಿದೆ. ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಮೊದಲ ಹಂತವಾಗಿ ಮಲ್ಟಿವಿಟಾಮಿನ್, ಪ್ಯಾರಾಸಿಟಾಮಲ್, ಜಿಂಕ್-ಐಯಾನ್ ಸಿರಪ್ ಹಾಗೂ ಪ್ರೋಟೀನ್ ಪೌಡರ್ ಸೇರಿದಂತೆ ಉಸಿರಾಟಕ್ಕೆ ಅನುಕೂಲವಾಗುವ ಚ್ಯವನಪ್ರಾಶವನ್ನ ಒಳಗೊಂಡ ಕಿಟ್ ನ್ನು ವಿತರಿಸಲಾಗಿದೆ.

ಜೊತೆಗೆ ಪ್ರತಿತಿಂಗಳು ಆದ್ಯತೆಯ ಮೇರೆಗೆ ಸಾಧಾರಣ ಅಪೌಷ್ಠಿಕತೆ ಹೊಂದಿರುವ ಮಕ್ಕಳಿಗೂ ಪೂರೈಕೆಗೆ ಯೋಜನೆ ರೂಪಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಮೂಲಕ ಕಿಟ್ ನ್ನು ಮಕ್ಕಳಿಗೆ ಪೂರೈಸಲು ವ್ಯವಸ್ಥೆ ಮಾಡಲಾಗಿದೆ.ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮಕ್ಕಳಿಗಾಗಿ ಆಕ್ಸಿಜನ್ ಬೆಟ್ ವೆವಸ್ಥೆಯ ಕೋವಿಡ್ ಸೆಂಟರ್ ಸಹ ತೆರೆಯಲಾಗುತಿದ್ದು ಸಿದ್ದತೆ ನಡೆದಿದೆ.

ಎಂದು ಮಹಿಳಾ ಮತ್ತು ಮಕ್ಕಳ ಕಾರ್ಯನಿರ್ವಹಣಾಧಿಕಾರಿ ಪದ್ಮಾವತಿರವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಜೂ.22 (ಮಂಗಳವಾರ) 102 ಜನರು ಕರೋನಾ ಸೋಂಕಿಗೆ ಒಳಗಾಗಿದ್ದು ,ಇಬ್ಬರು ಕರೋನಾ ಕ್ಕೆ ಬಲಿಯಾಗಿದ್ದು ಈವರೆಗೆ ಕರೋನಾಕ್ಕೆ ಸಾವನ್ನಪ್ಪಿದವರು 695 ಕ್ಕೆ ಏರಿಕೆ ಕಂಡಿದೆ. ಜಿಲ್ಲೆಯಲ್ಲಿ 1187 ಸಕ್ರಿಯ ಪ್ರಕರಣವಿದ್ದು ಈವರೆಗೆ 51127 ಜನ ಕರೋನಾ ಸೋಂಕಿತರಾಗಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!