BREAKING NEWS
Search

ಮರಣಹೊಂದಿ ಹತ್ತು ದಿನ ಕಳೆದರೂ ಕೊಳೆಯದೇ ಉಳಿದ ಮುಂಡಗೋಡು ಟಿಬೇಟಿಯನ್ ಕಾಲೋನಿ ಬೌದ್ಧ ಸನ್ಯಾಸಿ ದೇಹ.

992

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಟಿಬೇಟಿಯನ್ ಕಾಲೋನಿಯಲ್ಲಿ ಬೌದ್ಧ ಸನ್ಯಾಸಿಯೊಬ್ಬರು ಮೃತರಾಗಿ ಹತ್ತು ದಿನ ಕಳೆದರೂ ದೇಹ ಕೊಳೆಯದೇ ಯತಾ ಸ್ಥಿತಿಯಲ್ಲಿರುವ ಮೂಲಕ ವಿಸ್ಮಯ ಮೂಡಿಸಿದೆ.

ಕಾಲೋನಿಯ ನಂ.1 ಕ್ಯಾಂಪ್ ನ ಶೇರ್ ಗಾಂದೇನ್ ಬೌದ್ಧ ಮಂದಿರದ ಹಿರಿಯ ಸನ್ಯಾಸಿ ಯಾಸಿ ಪೋಂಟ್ಸ್ (90) ಮೃತರಾದವರಾಗಿದ್ದಾರೆ.

ಸೆ. 9 ರಂದು ಇವರು ಕೊಠಡಿಯಲ್ಲಿ ಧ್ಯಾನದಲ್ಲಿ ಇರುವಾಗ ಮೃತರಾಗಿದ್ದು ಈ ವೇಳೆ ಅವರ ದೇಹವನ್ನು ಅದೇ ಕೊಠಡಿಯಲ್ಲಿ ಹಾಗೆಯೇ ಇರಿಸಲಾಗಿದೆ.ಆದರೇ ಹತ್ತು ದಿನ ಕಳೆದಿದ್ದು ದೇಹ ನೀರು ಒಡೆಯುವುದಾಗಲಿ ,ವಾಸನೆ ಬರುವುದಾಗಲಿ,ಕೊಳೆಯುವುದಾಗಲಿ ಆಗದೇ ಯಥಾ ಸ್ಥಿತಿಯಲ್ಲಿ ಇದ್ದು ಇದೀಗ ಅವರ ದೇಹಕ್ಕೆ ಕಿರಿಯ ಬೌದ್ಧ ಸನ್ಯಾಸಿಗಳು ದೀಪ ಬೆಳಗಿಸುವ ಮೂಲಕ ಪೂಜೆ ಮಾಡುತಿದ್ದಾರೆ.

ಈ ಸನ್ಯಾಸಿಯು ಕ್ಯಾಂಪ್ ನಲ್ಲಿ ಇರುವ ಕಿರಿಯ ಸನ್ಯಾಸಿಗಳಿಗೆ ಧರ್ಮ ಭೋದನೆ ಮಾಡುತಿದ್ದರು. ಇದೀಗ ಅವರು ಮೃತಪಟ್ಟಿದ್ದರೂ ದೇಹ ಯಥಾ ಸ್ಥಿತಿಯಲ್ಲಿ ಇರುವುದರಿಂದ ದೇಹ ಕೊಳೆಯುವ ವರೆಗೂ ಅವರ ದೇಹ ಅಂತ್ಯಸಂಸ್ಕಾರ ಮಾಡದಿರಲು ಡಿಬೇಟಿಯನ್ ಮುಖಂಡರು ತೀರ್ಮಾನಿಸಿದ್ದಾರೆ.

ಅಂತ್ಯ ಸಂಸ್ಕಾರ ಹೇಗಿರುತ್ತೆ?


ಬೌದ್ಧ ಸನ್ಯಾಸಿಗಳು ಮರಣ ಹೊಂದಿದ ನಂತರ ಅವರ ದೇಹವನ್ನು ಊರಿನ ದೂರದ ಬೆಟ್ಟ ಪ್ರದೇಶದಲ್ಲಿ ಇಡಲಾಗುತ್ತದೆ. ಆ ದೇಹವನ್ನು ರಣ ಹದ್ದುಗಳು ತಿನ್ನಲು ಬಿಡುವುದು ಟಿಬೇಟಿಯನ್ ರ ಸಂಪ್ರದಾಯ. ಆದರೇ ಇಂದಿನ ದಿನದಲ್ಲಿ ಆ ರೀತಿಯಲ್ಲಿ ವ್ಯವಸ್ಥೆಗಳು ಇಲ್ಲದ ಕಾರಣ ದೇಹವನ್ನು ಹುಗಿದು ಆ ಸ್ಥಳದಲ್ಲಿ ಮಂಟಪ ವನ್ನು ನಿರ್ಮಿಸುತ್ತಾರೆ‌‌ . ಅಂತ್ಯ ಸಂಸ್ಕಾರದ ವೇಳೆ ಬೌದ್ಧ ಧರ್ಮದ ರಿವಾಜುಗಳ ಮೂಲಕ ಮೆರವಣಿಗೆ ಮಾಡಿ ನಂತರ ಜನರಿಗೆ ನಮಸ್ಕರಿಸಲು ಅವಕಾಶ ಮಾಡಿಕೊಡಲಾಗುತ್ತದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!