BREAKING NEWS
Search

ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಸಿಗಲಿದೆ ಇನ್ನುಮುಂದೆ ಪ್ರಶ್ ನಂದಿನಿ ಹಾಲು!

1666

ಕಾರವಾರ :- ಗಡಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಗೆ ಈ ಹಿಂದೆ ನಂದಿನಿ ಹಾಲು ಉತ್ಪನ್ನ ಘಟಕದಿಂದ ಸರಬರಾಜಾಗುತಿದ್ದ ಹಾಲು ಇದೀಗ ಇನ್ನಷ್ಟು ಉತ್ತಮವಾಗಿರಲಿದೆ. ಈ ಹಿಂದೆ ಶಿರಸಿಯ ಘಟಕದಲ್ಲಿ ಸಂಗ್ರಹಣೆಗೊಂಡ ಹಾಲನ್ನು ಪಾಶ್ಚೀಕರಿಸಿ ಧಾರವಾಡಕ್ಕೆ ಕಳುಹಿಸಬೇಕಿತ್ತು. ಅಲ್ಲಿಂದ ಪ್ಯಾಕಿಂಗ್ ಆಗಿ ಮರಳಿ ಮಾರುಕಟ್ಟೆಗೆ ಬರಲು ಎರಡು ದಿನ ಆಗುತ್ತಿತ್ತು.

ಆದರೇ ಇದೀಗ ಶಿರಸಿ ತಾಲ್ಲೂಕಿನ ಹನುಮಂತಿಯಲ್ಲಿರುವ ಧಾರವಾಡ ಹಾಲು ಒಕ್ಕೂಟದ (ಧಾಮುಲ್) ಹಾಲು ಶೀತಲೀಕರಣ ಘಟಕದ ಆವರಣದಲ್ಲಿ ಹಾಲು ಪ್ಯಾಕಿಂಗ್ ಘಟಕ ನಿರ್ಮಾಣ ಪೂರ್ಣ ಹಂತಕ್ಕೆ ತಲುಪಿದೆ. ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ಸ್ಥಾಪನೆಯಾದ ರಾಜ್ಯದ ಮೊದಲ ಪ್ಯಾಕಿಂಗ್ ಘಟಕ ಇದಾಗಲಿದ್ದು , ಧಾಮುಲ್‍ಗೆ ಸೇರಿದ ಜಾಗದಲ್ಲಿ ಸುಮಾರು ₹18 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಶಿರಸಿ ಡೇರಿ ಪ್ರೈವೇಟ್ ಲಿ. ಸಂಸ್ಥೆ ಹಾಲು ಪ್ಯಾಕಿಂಗ್ ಘಟಕ ಸ್ಥಾಪಿಸುತ್ತಿದೆ. ಕಳೆದೊಂದು ವರ್ಷಗಳಿಂದ ನಡೆಯುತ್ತಿದ್ದ ಕಾಮಗಾರಿ ಮುಗಿಯುವ ಹಂತಕ್ಕೆ ತಲುಪಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಯಂತ್ರೋಪಕರಣಗಳ ಅಳವಡಿಕೆ ನಡೆಯುತ್ತಿದೆ.

ನಂದಿನಿ ಬ್ರ್ಯಾಂಡ್‍ನ ಮೂರು ಬಗೆಯ ಹಾಲಿನ ಪ್ಯಾಕಿಂಗ್, ಹೆಚ್ಚುವರಿ ಹಾಲನ್ನು ಸಂಸ್ಕರಿಸಿ ಬೆಣ್ಣೆ, ತುಪ್ಪ ಸಿದ್ಧಪಡಿಸಿ ಅವುಗಳನ್ನೂ ಪ್ಯಾಕಿಂಗ್ ಮಾಡುವ ವ್ಯವಸ್ಥೆಯನ್ನು ಘಟಕ ಹೊಂದಿದೆ. ಇವುಗಳಿಗೆ ಪ್ರತ್ಯೇಕ ಯಂತ್ರಗಳನ್ನು ಅಳವಡಿಸಲಾಗುತ್ತಿದ್ದು, ತಂತ್ರಜ್ಞರು ಪ್ರಾಯೋಗಿಕ ಪರೀಕ್ಷೆ ನಡೆಸಿದ್ದಾರೆ.

ಶಿರಸಿಯಲ್ಲಿ 15 ವರ್ಷಗಳ ಅವಧಿಗೆ ಜಾಗವನ್ನು ಲೀಸ್‍ಗೆ ಖಾಸಗಿ ಸಂಸ್ಥೆಗೆ ನೀಡಲಾಗಿದೆ. ಹಾಲು ಶೀತಲೀಕರಣ ಘಟಕಕ್ಕೆ ಹೊಂದಿಕೊಂಡಿರುವ ಘಟಕದಿಂದ ಪ್ರತಿನಿತ್ಯ ಜಿಲ್ಲೆಗೆ ಅಗತ್ಯದಷ್ಟು ಹಾಲು ಪೊಟ್ಟಣಗಳು ರವಾನೆಯಾಗಲಿದೆ. ಸ್ಥಳಿಯವಾಗಿ ಪ್ಯಾಕಿಂಗ್ ಘಟಕ ಸ್ಥಾಪನೆಯಾಗುವುದರಿಂದ ಅಂದಿನ ಹಾಲು ಅದೇ ದಿನ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಹೇಗಿರಲಿದೆ ಕಾರ್ಯ

ಡೇರಿಗಳಿಂದ ಹಾಲು ಸಂಗ್ರಹಿಸಿ ಘಟಕಕ್ಕೆ ಪೂರೈಸುವ ಕಾರ್ಯವನ್ನು ಒಕ್ಕೂಟವೇ ಮಾಡುತ್ತದೆ. ದಿನವೊಂದಕ್ಕೆ 55 ರಿಂದ 1 ಲಕ್ಷ ಲೀ. ಹಾಲನ್ನು ಪ್ಯಾಕಿಂಗ್ ಮಾಡುವ ಸಾಮರ್ಥ್ಯವನ್ನು ಘಟಕ ಹೊಂದಿದೆ. ಪ್ರತಿ ಹಾಲಿನ ಪೊಟ್ಟಣ ಸಿದ್ಧಪಡಿಸಲು ತಲಾ ₹4.09 ಮೊತ್ತ ಸಂಸ್ಥೆಗೆ ಪಾವತಿಸಲಾಗುತ್ತದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿನಿತ್ಯ ಸರಾಸರಿ 50 ರಿಂದ 52 ಸಾವಿರ ಲೀ. ಹಾಲು ಉತ್ಪಾದನೆಯಾಗುತ್ತಿದೆ. 55 ಸಾವಿರ ಲೀ. ಹಾಲು ಮಾರಾಟವಾಗುತ್ತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!