ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲಿ ಏನಾಯ್ತು| Top News-ಓದಲು ಇಲ್ಲಿ ಕ್ಲಿಕ್ ಮಾಡಿ

84

ಭಟ್ಕಳ: ಅಕ್ರನ ಚಿರೆಕಲ್ಲು ಕ್ವಾರಿಮೇಲೆ ದಾಳಿ ಲಕ್ಷಾಂತರ ಮೌಲ್ಯದ ಪರಿಕರ ವಶ

ಕಾರವಾರ:- ಅಕ್ರಮವಾಗಿ ನಡೆಸುತ್ತಿರುವ ಚಿರೆಕಲ್ಲು ಕ್ವಾರಿ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಕಲ್ಲು ಕ್ವಾರಿ ಕೆಲಸಕ್ಕೆ ಬಳಸುವ 4 ಎಂಜಿನಗಳನ್ನು ವಶಕ್ಕೆ ಪಡೆದು ಮುರುಡೇಶ್ವ ಪೊಲೀಸ್ ಠಾಣೆಯ ವಶಕ್ಕೆ ನೀಡಿದ ಘಟನೆ ಭಟ್ಕಳ ತಾಲೂಕಿನ ಬೆಂಗ್ರೆ ಪಂಚಾಯತ 2 ರಲ್ಲಿ ನಡೆದಿದೆ.

ಗಣಿ ಮತ್ತು  ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಯಾದ  ಆಶಾ ಎಂ.ಎಸ್. ನೇತೃತ್ವದಲ್ಲಿ  , ಭೂವಿಜ್ಞಾನಿಗಳಾದ ಹರೀಶ್ ಕೆ.ಎಸ್  ಮತ್ತು  ಸುಬಾಷಚಂದ್ರ ಎಸ್ ಹಾಗೂ ಸಿಬ್ಬಂದಿಗಳು ಮತ್ತು  ಕಂದಾಯ ನಿರೀಕ್ಷಕರಾದ  ಶ್ರೀನಿವಾಸ  ಆರ್ ಮಾಸ್ತಿ ಮತ್ತು ಗ್ರಾಮ ಆಡಳಿತಾಧಿಕಾರಿಗಳಾದ  ಲತಾ ಎಸ್‌  ನಾಯ್ಕ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಹೊನ್ನಾವರ| ಬಾವಿಯಲ್ಲಿ ಬಿದ್ದ ಹೋರಿ ರಕ್ಷಣೆ‌.

ಹೊನ್ನಾವರ : ಮೇಯುತಿದ್ದ ಹೋರಿಯೊಂದು ತೋಟದ ಬಾವಿಗೆ ಬಿದ್ದು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಹೊನ್ನಾವರದ ಪಟ್ಟಣದ ಚಿಕ್ಕನಾಕೋಡು ಗ್ರಾಮದ ಗಜಾನನ ಹೊನ್ನಪ್ಪ ಆಚಾರಿ ಎಂಬುವವರ ತೋಟದಲ್ಲಿ ನಡೆದಿದೆ. AFSTO ಜಯಾನಂದ ಏನ್. ಪಟಗಾರ ನೇತ್ರತ್ವದಲ್ಲಿ ಅಗ್ನಿಶಾಮಾಕ ಸಿಬ್ಬಂದಿಗಳಾದ
ನಾಗೇಶ ಪೂಜಾರಿ, ಗಜಾನನ ನಾಯ್ಕ, ರಮೇಶ ಚಿಕ್ಕಲಗಿ, ವೆಂಕಟೇಶ ನಾಯ್ಕ್, ಲೋಕೇಶ ನಾಯ್ಕ, ಮಂಜುನಾಥ ಪಟಗಾರ, ದೀಪಕ ಅಂಕೋಲೆಕರ್, ಕಿರಣ ಅಗ್ಲೋಳೆ, ಅಭಿಷೇಕ ನಾಯ್ಕ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ರಕ್ಷಣೆ ಮಾಡಿದ್ದಾರೆ.

Yallapura|ಲಂಚ ಸ್ವೀಕರಿಸಿದ ಅಧಿಕಾರಿಗೆ ಒಂದು ವರ್ಷ ಜೈಲು ಶಿಕ್ಷೆ.

ಕಾರವಾರ:-ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ, ನಾಗೇಂದ್ರ ಶಿವರಾಮ ಹೆಗಡೆ ಎಂಬುವವರ ತಂದೆಯವರ ಹೆಸರಿನಲ್ಲಿದ್ದ ಜಮೀನಿನ ವಾರಸುದಾರ ಹೆಸರು ಬದಲಾಯಿಸಲು , ಯಲ್ಲಾಪುರ ತಹಸೀಲ್ದಾರರ ಕಚೇರಿಯ ಶಿರಸ್ತೆದಾರ ವಿನಾಯಕ ಪಾಯ್ಕಾರಾಮ ಗಾಂವಕಾರ್ ಎಂಬುವವರು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಸದರಿ ಆಪಾದಿತ ಅಧಿಕಾರಿಯು ಲೋಕಾಯುಕ್ತ ಕಾರ್ಯಾಚರಣೆಯ ವೇಳೆ ಪಿರ್ಯಾದಿಯಿಂದ ರೂ.1,000 ಲಂಚದ ಹಣವನ್ನು ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದು, ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪಾದಿತ ಅಧಿಕಾರಿಯ ವಿರುದ್ಧ ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಕಾರವಾರದಲ್ಲಿ ವಿಚಾರಣೆ ನಡೆಸಿ ನ್ಯಾಯಾಲಯವು ಆಪಾದಿತನ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 , ಕಲಂ 07 ರ ಅಡಿಯಲ್ಲಿ 1 ವರ್ಷ ಸಾದಾ ಕಾರಾವಾಸ ಹಾಗೂ ರೂ. 5000 ದಂಡ ಹಾಗೂ ಕಲಂ: 13 (1) (ಡಿ) ಸಹಿತ 13(2) ರ ಅಡಿಯಲ್ಲಿ 1 ವರ್ಷ ಸಾದಾ ಕಾರಾವಾಸ ಹಾಗೂ ರೂ. 5000 ದಂಡ ವಿಧಿಸಿ, ಸದರಿ ಆದೇಶಗಳನ್ನು ಸಮರ್ತಿತವಾಗಿ ಜಾರಿ ಮಾಡಿದ್ದು, ದಂಡ ಪಾವತಿಸದೇ ಇದ್ದಲ್ಲಿ ಹೆಚ್ಚುವರಿ 6 ತಿಂಗಳ ಸಾದಾ ಕಾರವಾಸ ಶಿಕ್ಷಗೆ ಗುರಿಪಡಿಸಿ ಆದೇಶಿಸಿದೆ.

ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ಲಕ್ಷ್ಮೀಕಾಂತ ಎಮ್. ಪ್ರಭು, ವಿಶೇಷ ಸರ್ಕಾರಿ ಅಭಿಯೋಜಕರು, ಕರ್ನಾಟಕ ಲೋಕಾಯುಕ್ತ ಕಾರವಾರ ಇವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಶಿರಸಿ |ಗ್ರಂಥಾಲಯ ಸಹಾಯಕ ಹುದ್ದೆ ಅರ್ಜಿ ಆಹ್ವಾನ.

Sirsi :-ಅರಣ್ಯ ಮಹಾವಿದ್ಯಾಲಯ, ಶಿರಸಿ
ಗ್ರಂಥಾಲಯಕ್ಕೆ ಪೂರಕ ಸೌಲಭ್ಯವನ್ನು ಒದಗಿಸುವ ಸಲುವಾಗಿ 2023-24 ನೇ ಸಾಲಿಗೆ ಒಬ್ಬ ಗ್ರಂಥಾಲಯ ಸಹಾಯಕ ಹುದ್ದೆಗೆ 179 ದಿನಗಳ ಅವಧಿಗೆ ಮೀರದಂತೆ ತಾತ್ಕಲಿಕವಾಗಿ ನೇಮಕಾತಿಯನ್ನು ಮಾಡಿಕೋಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಯುB Lib.I.Sc/M Lib.I.Sc ತೆರ್ಗಡೆಯನ್ನು ಹೊಂದಿರಬೇಕು. ನೇಮಕಾತಿ ಪಡೆಯಲು ಬಯಸುವ ಅಭ್ಯರ್ಥಿಗಳು ಸೆ.21 ರಂದು ಬೆಳಗ್ಗೆ 11 ಗಂಟೆಗೆ ಡಿನ್ ಅರಣ್ಯ ಮಹಾವಿದ್ಯಾಲಯ, ಶಿರಸಿ ಕಾರ್ಯಲಯದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಸಂದರ್ಶನಕ್ಕೆ ಬರುವಾಗ ಅರ್ಜಿ ನಮೂನೆಯ ಎರಡು ಪ್ರತಿಗಳೊಂದಿಗೆ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲಾ ಮೂಲ ದಾಖಲೆಗಳ ಎರಡು ಧೃಡಿಕೃತ ಪ್ರತಿಗಳನ್ನು ತರಬೇಕು ಎಂದು ಅರಣ್ಯ ಮಹಾವಿದ್ಯಾಲಯ ಡೀನ್ (ಅರಣ್ಯ) ಆರ್ ವಾಸುದೇವ ಪ್ರಟಣೆಯಲ್ಲಿ ತಿಳಿಸಿದ್ದಾರೆ.

ಕಾರವಾರ,ಕುಮಟಾ,ಹೊನ್ನಾವರದಲ್ಲಿ ವಿದ್ಯುತ್ ವ್ಯತ್ಯಯ.

ಕಾರವಾರ:- 220ಕೆ.ವಿ ವಿದ್ಯುತ್ ಸ್ವೀಕರಣ ಕೇಂದ್ರ ಶೇಜವಾಡ, ಕಾರವಾರದಲ್ಲಿ ಅತಿ ಅವಶ್ಯಕ ಜಿ.ಓ.ಎಸ್ ನಿರ್ವಹಣಾ ಹಗೂ ತ್ರೈಮಾಸಿಕ ನಿರ್ವಹಣಾ ಕೆಲಸದ ನಿಮಿತ್ತ ಸೆ. 7 ರಂದು ಬೆಳಗ್ಗೆ 10 ರಿಂದ ಸಂಜೆ 4:30 ಗಂಟೆಯವರೆಗೆ ಕಾರವಾರ ಹಗೂ ಅಂಕೋಲಾ ತಾಲೂಕಿನಾದ್ಯಂತ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು (ವಿ), ಕೆ.ವಿ.ಪ್ರ.ನಿ.ನಿ. ಶೇಜವಾಡ ಕಾರವಾರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನು ಕುಮಟಾದ ಉಪ ವಿಭಾಗದ 110/33/11 ಕೆ.ವಿ ಕೆ.ಪಿ.ಟಿ.ಸಿ.ಎಲ್ ಗ್ರಿಡ್‍ನಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವ ಕಾರಣ ಗ್ರಾಮೀಣ ಪ್ರದೇಶದ ಎಲ್ಲಾ ಭಾಗಗಳಲ್ಲ್ಲಿ ಸೆ.7 ಬೆಳಗ್ಗೆ 9 ರಿಂದ ಮದ್ಯಾಹ್ನ 3 ಗಂಟೆವರೆಗೆ ಹಾಗೂ ನಗರ ಪ್ರದೇಶದ ಕುಮಟಾ ಟೌನ, ಇಂಡಸ್ಟ್ರಿಯಲ ಹಾಗೂ ಚಿತ್ರಗಿ ಫೀಡರಿನ ಎಲ್ಲಾ ಭಾಗಗಳಲ್ಲಿ ಐ.ಆರ್.ಬಿ ಯವರ ಕಾಮಗಾರಿ ಇರುವ ಕಾರಣ ಸೆ.7 ಮುಂಜಾನೆ 9 ರಿಂದ ಮದ್ಯಾಹ್ನ 4:30 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ,ಇದರ ಜೊತೆ ಹೊನ್ನಾವರ,ಮುರ್ಡೇಶ್ವರ ಭಾಗದಲ್ಲೂ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು (ವಿ), ಕೆ.ಪಿ.ಟಿ.ಸಿ.ಎಲ್. ಕುಮಟಾ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಕಲಚೇತನರಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ.

ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯು 8 ಫಲಾನುಭವಿ ಆಧಾರಿತ ಯೋಜನೆಗಳನ್ನು ಸೇವಾ ಸಿಂಧು ಯೋಜನೆ ಇವರಿಂದ ಡಿ.ಬಿ.ಟಿ ನೇರ ನಗದು ವರ್ಗಾವಣೆ ತಂತ್ರಾಂಶದಡಿ ಅರ್ಜಿ ಆಹ್ವಾನಿಸಲಾಗಿದೆ.

ಯೋಜನೆಗಳು: ಮೆರಿಟ್ ವಿದ್ಯಾರ್ಥಿವೇತನಕ್ಕಾಗಿ ಬಹುಮಾನ ಹಣ, ಶಿಶುಪಾಲನ ಭತ್ಯ, ನಿರುದ್ಯೋಗ ಭತ್ಯ, ಆಧಾರ ಯೋಜನೆ, ಮರಣ ಪರಿಹಾರ ನಿಧಿ, ಸಾಧನೆ ಯೋಜನೆ, ಪ್ರತಿಭೆ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ.

ಈ ಯೋಜನೆಗಳು ಆನ್‍ಲೈನ್ ಆಗಿರುವುದರಿಂದ ಅರ್ಹ ವಿಕಲಚೇತನರು (Suvidha website sevasindhu.karnataka.gov.in ನ ಮೂಲಕ ಸೆ.31 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.

ನೊಂದಣಿ ಮಾಡಿಕೊಂಡ ಅರ್ಜಿಯನ್ನು ಆಯಾ ತಾಲೂಕಿನ ವಿವಿದ್ದೋದ್ದೇಶ ಕಾರ್ಯಕರ್ತರಿಗೆ ನೀಡವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಪುರ್ನವಸತಿ ಕಾರ್ಯಕರ್ತರ  ದೂರವಾಣಿ ಸಂಖ್ಯೆ: ಕಾರವಾರ ತಾಲೂಕಿನ ಶಶಿರೇಖಾ.ವಿ.ಮಾಳಸೇಕರ ಪೋ.9739054681, 8217693255, 

ಅಂಕೋಲಾ ತಾಲೂಕಿನ ಕವಿತಾ ಶ್ರೀಕಾಂತ ನಾಯ್ಕ ಪೊ.8217882332, ಕುಮಟಾ ತಾಲೂಕಿನ ಸುಧಾ ಜೈರಾಮ ಭಟ್ ಪೋ.7019198365, ಹೊನ್ನಾವರ ತಾಲೂಕಿನ ಶೈಲಾ.ವಿ. ನಾಯ್ಕ ಪೋ.8217079665, ಭಟ್ಕಳ ತಾಲೂಕಿನ ಮೋಹನ ಅಪ್ಪು ದೇವಾಡಿಗ ಪೋ.9448902002, ಶಿರಸಿ ತಾಲೂಕಿನ ಸ್ನೇಹಾ ಅಂಬಿಗ ಪೋ.9148723385, ಸಿದ್ಧಾಪುರ ತಾಲೂಕಿನ ಶ್ರೀಧರ.ಟಿ. ಹರ್ಗಿ ಪೋ.9972512435, ಯಲ್ಲಾಪುರ ತಾಲೂಕಿನ ಸಲೀಂ ಖುದ್ದುಸ್ ಶೇಖ್ ಪೋ.8095295796, ಮುಂಡಗೋಡ ತಾಲೂಕಿನ ಶೋಭಾ ಕಾಂತು ಭಟ್ಕಳ ಪೋ.9686508135, ಹಳಿಯಾಳ ತಾಲೂಕಿನ ಸುನೀತಾ ಕೃಷ್ಣಾ ಸಹಾಪೂರಕರ ಪೋ.8867645974, ಜೋಯಿಡಾ ತಾಲೂಕಿನ ರಾಜೇಸಾಬ್.ಡಿ. ತಹಶೀಲ್ದಾರ ಪೋ.9449589571 ಗೆ ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಮೋಟಾರೀಕೃತ ಮೀನುಗಾರಿಕಾ ದೋಣಿಗಳ ಪರಿಶೀಲನೆ ಸ್ಥಳ ನಿಗದಿ.

ಕಾರವಾರ:-ಜಿಲ್ಲೆಯಲ್ಲಿ ಸೀಮೆಎಣ್ಣೆ ಬಳಸಿ ಔಟಬೋರ್ಡ ಇಂಜಿನ್ ಮೂಲಕ ಮೀನುಗಾರಿಕೆ ಮಾಡುತ್ತಿರುವ ಎಲ್ಲಾ ದೋಣಿಗಳನ್ನು ಸೆ. 12 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಜಿಲ್ಲೆಯಾದ್ಯಂತ ಒಂದೇ ಹಂತದಲ್ಲಿ ತಪಾಸಣೆ ಕೈಗೊಳ್ಳಲಾಗುವುದು.

ಬಿಳಿ ಹೆಬ್ಬಾವಿನ ವಿಶೇಷ ತಿಳಿಯಲು ಕ್ಲಿಕ್ ಮಾಡಿ.

ಪರೀಶಿಲನೆಗೆ ನಿಗಧಿ ಪಡಿಸಿದ ಸ್ಥಳ : ಕಾರವಾರ ತಾಲೂಕಿನ ಕಾರವಾರ ಅಲಿಗದ್ದಾ ಬೀಚ್, ಮಾಜಾಳಿ ಬೀಚ್ ಗೋಟ್ನಿಭಾಗ, ದೇವಭಾಗ, ಮುದಾಗ ಬೀಚ್ ಅಂಕೋಲಾ ತಾಲೂಕಿನ ಹಾರವಾಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎದುರುಗಡೆ ಬೀಚ್. ಕುಮಟಾ ತಾಲ್ಲೂಕಿನ ವನ್ನಳ್ಳಿ ಬೀಚ್, ತದಡಿ ಬಂದರು , ಅಳ್ವೆದಂಡೆ, ಶಶಿಹಿತ್ತಲು. ಹೊನ್ನಾವರ ತಾಲ್ಲೂಕಿನ ಟೊಂಕಾ ಕಾಸರಕೋಡ ಬಂದರು, ಮಂಕಿ ಕೋಡಿ ಬೀಚ್ . ಭಟ್ಕಳ ತಾಲೂಕಿನ ಮುಂಡಳ್ಳಿ ಬೆಲೆ ಬೀಚ್, ಮುರ್ಡೇಶ್ವರ ಬೀಚ್, ತೆಂಗಿನಗುಂಡಿ ಬಂದರು.

ತಪಾಸಣಾ ಕೇಂದ್ರದಲ್ಲಿ ತಪ್ಪದೇ ದೋಣಿ ನೊಂದಣ ಪ್ರತಿ, ಹಾಲಿ ಇರುವ ಸೀಮೆ ಎಣ್ಣೆ ಪರ್ಮಿಟ್, ಆಧಾರ್ ಕಾರ್ಡ್ ಝೆರಾಕ್ಸ್ ಪ್ರತಿ ಹಾಜರುಪಡಿಸಬೇಕು.

ದೋಣಿ ಮತ್ತು ದೋಣಿಯ ಇಂಜಿನ್ ಸುಸ್ಥಿತಿಯಲ್ಲಿದೆ ಎಂಬುದನ್ನು ತಪಾಸಣಾ ತಂಡಕ್ಕೆ ಖಾತ್ರಿಪಡಿಸಬೇಕು.
ತಪಾಸಣೆಗೆ ಒಳಪಡಿಸದ ಸುಸ್ಥಿತಿಯಲ್ಲಿಲ್ಲದ ದೋಣಿಗಳ ನೊಂದಣಿಗಳನ್ನು ಮತ್ತು ನಿಯಂತ್ರಿತ ದರದ ಸೀಮೆ ಎಣ್ಣೆ ಅನುಮತಿಯನ್ನು ರದ್ದುಗೊಳಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆಜಂಟಿನಿರ್ದೇಶಕರು ಕಾರವಾರ ಹಾಗೂ ಮೀನುಗಾರಿಕೆ ಉಪನಿರ್ದೇಶಕರು ಕಾರವಾರ ಮತ್ತು ಮೀನುಗಾರಿಕೆ ಸಹಾಯಕ ನಿರ್ದೇಶಕರು ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ,ಇವರನ್ನು ಕಚೇರಿಯ ಅವಧಿಯೊಳಗೆ ಸಂಪರ್ಕಿಸಬಹುದೆಂದು ಮೀನುಗಾರಿಕೆ ಜಂಟಿನಿರ್ದೇಶಕರು ತಿಳಿಸಿದ್ದಾರೆ.

ಇದನ್ನೂ ಓದಿ:- ನಿನ್ನೆ ಜಿಲ್ಲೆಯಲ್ಲಿ ಏನಾಗಿತ್ತು? ವಿವರ ನೋಡಲು ಅಕ್ಷರದ ಮೇಲೆ ಕ್ಲಿಕ್ ಮಾಡಿ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!