BREAKING NEWS
Search

Sirsi|ಹಣಕ್ಕಾಗಿ ಕೊಲೆಮಾಡಿ ಗೋಣಿಚೀಲದಲ್ಲಿ ಶವ ಇಟ್ಟು ಅರಣ್ಯದಲ್ಲಿ ಎಸೆದ ಮೂರು ಜನ ಆರೋಪಿಗಳ ಬಂಧನ

87

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಭಾಗದ ಕೊರ್ಲಕಟ್ಟಾ – ವಡ್ಡಿನಕೊಪ್ಪ ರಸ್ತೆಯ ಅರಣ್ಯದಲ್ಲಿ ಕೊಲೆ ಮಾಡಿ ಶವ ಬಿಸಾಡಿದ ಪ್ರಕರಣ ಸಂಬಂಧ ಮೂರು ಜನ ಕೊಲೆ ಆರೋಪಿಗಳನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:- ಅರಣ್ಯದಲ್ಲಿ ಕೊಲೆಮಾಡಿ ಗೋಣಿಚೀಲದಲ್ಲಿ ಶವ ಎಸೆದುಹೋದ ಆರೋಪಿಗಳು.


ಹಾನಗಲ್ ತಾಲೂಕಿನ  ಗೆಜ್ಜೆಹಳ್ಳಿಯ ಅಶೋಕ ಉಪ್ಪಾರ್(55) ಕೊಲೆಯಾದ ವ್ಯಕ್ತಿಯಾಗಿದ್ದು ಮೊನ್ನೆ ದಿನ ಕೊಲೆ ಮಾಡಿ ಗುರುತು ಸಿಗದಂತೆ ಶವವನ್ನು ಗೋಣಿಚೀಲದಲ್ಲಿ ತುಂಬಿ ಕೊರ್ಲಕಟ್ಟಾ-ವಡ್ಡಿನಕೊಪ್ಪ ಅರಣ್ಯ ಪ್ರದೇಶದಲ್ಲಿ ಎಸೆಯಲಾಗಿತ್ತು. ಹಾನಗಲ್ ಮೂಲದ ಗೆಜ್ಜೆಹಳ್ಳಿಯ ಕಿರಣ  ಸುರಳೇಶ್ವರ (23), ನಿರಂಜನ ಗೋವಿಂದಪ್ಪ ತಳವಾರ (19) ಹಾಗೂ ಗುಡ್ಡಪ್ಪ ಕೊಟಪ್ಪ ತಿಳುವಳ್ಳಿ(19) ಬಂಧಿತರಾಗಿದ್ದು
ಹಣದ ಆಸೆಗೆ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಕೊಲೆಗಾರರು ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಬಳಸಿದ ಒಂದು ಸ್ವಿಪ್ಟ್ ಕಾರು, ಕ್ರೇಟಾ ಹಾಗೂ ಬೈಕ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ‌.ಶಿರಸಿ ಡಿ.ಎಸ್.ಪಿ ಕೆ.ಎಲ್.ಗಣೇಶ ಮಾರ್ಗದರ್ಶನದಲ್ಲಿ ಸಿ.ಪಿ.ಐ ರಾಮಚಂದ್ರ ನಾಯಕ, ಬನವಾಸಿ ಠಾಣೆ ಪಿ.ಎಸ್.ಐಗಳಾದ ಚಂದ್ರಕಲಾ ಪತ್ತಾರ, ಸುನೀಲಕುಮಾರ.ಬಿ.ವೈ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!