ದಾಂಡೇಲಿ: ನಗರಕ್ಕೆ ಸಮೀಪದ ಬೈಲಪಾರ್ ಕಾಳಿ ಸೇತುವೆಯ ಬಳಿ ತಾಯಿಯ ಜೊತೆ ನೀರು ಕುಡಿಯಲೆಂದು ಕಾಳಿ ನದಿಯ ದಂಡೆಗೆ ಇಳಿದಿದ್ದ ಆಕಳ ಕರುವನ್ನು ಮೊಸಳೆಯೊಂದು ಎಳೆದೊಯ್ದು ಕೊಂದಿರುವ ಘಟನೆ ನಡೆದಿದೆ.
ಆಕಳು ತನ್ನ ಕರುವಿನ ಜೊತೆ ನೀರು ಕುಡಿಯಲು ನದಿ ದಂಡೆಯ ಬಳಿ ಬಂದಿದ್ದ ಸಂದರ್ಭದಲ್ಲಿ ನದಿಯಲ್ಲಿರುವ ಮೊಸಳೆಗಳು ಮೊಸಳೆ ಎಳೆದೊಯ್ದಿದ್ದನ್ನು ನೋಡಿದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಳಿ ನದಿಯಲ್ಲಿ ಮೊಸಳೆಗಳು ಸಾಕು ಪ್ರಾಣಿ ಹಾಗೂ ಮನುಷ್ಯರ ಮೇಲೆ ದಾಳಿ ನಡೆಸುತಿದ್ದು ಈ ಹಿಂದೆ ಮೀನು ಹಿಡಿಯಲು ತೆರಳಿದ್ದ ಬಾಲಕನನ್ನು ಮೊಸಳೆ ಎಳೆದೊಯ್ದಿತ್ತು .ಇದಾದ ನಂತರ ಇದು ಮೂರನೇ ಘಟನೆಯಾಗಿದ್ದು ನದಿ ಪಾತ್ರದ ಜನರಲ್ಲಿ ಆತಂಕ ಮನೆಮಾಡಿದೆ.