BREAKING NEWS
Search

Satheri Temple Karwar :ಸಾತೇರಿ ದೇವಿ ಮೂರ್ತಿಗೆ ಉಡಿಸಿದ ಸೀರೆ ₹1.06 ಲಕ್ಷಕ್ಕೆ ಹರಾಜು

163

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕಾರವಾರ (karwar) ತಾಲೂಕಿನ ಹಣಕೋಣ ಗ್ರಾಮದಲ್ಲಿರುವ ಸಾತೇರಿ ದೇವಿ ದೇವಸ್ಥಾನ (satgeri temple) ವರ್ಷದಲ್ಲಿ ಒಂದುಬಾರಿ ಏಳು ದಿನಗಳ ಕಳ ಭಕ್ತರಿಗೆ ದರ್ಶನ ನೀಡುತ್ತಾಳೆ.ಉಳಿದ ದಿನ ಪ್ರತಿ ಸೋಮವಾರ ದೇವಾಲಯದ ಗರ್ಭಗುಡಿಯ ಎದುರಿನ ಬಾಗಿಲ ಬಳಿ ನಿಂತು ಪೂಜೆ ಸಲ್ಲಿಸಲಾಗುತ್ತದೆ.

ಗಣೇಶ ಚತುರ್ಥಿ ( ganesha chathurthi )ಮುಗಿದ ಮೂರನೇ ದಿನದ ಮಧ್ಯರಾತ್ರಿ ದೇಗುಲದ ಬಾಗಿಲು ತೆರೆಯಲಾಗಿದ್ದು ಈ ಬಾರಿ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.

ಇಷ್ಟಾರ್ಥ ನೆರವೇರಿಸು ದೇವಿ ಎಂದು ಪ್ರಸಿದ್ಧಿ ಪಡೆದಿರುವ ದೇವಿ ದೇವಸ್ಥಾನಕ್ಕೆ ಪ್ರತಿ ವರ್ಷ ಸಾವಿರಾರು ಭಕ್ತರು ಹರಕೆ ಕಟ್ಟಿಕೊಂಡು ಇಷ್ಟಾರ್ಥ ನೆರವೇರಿದ ಬಳಿಕ
ಶಕ್ತಿಯಾನುಸಾರ ಕಾಣಿಗೆ, ಆಭರಣ (jewels) ಅರ್ಪಿಸಿ ಕೃತಾರ್ಥರಾಗುತ್ತಾರೆ. ಹೀಗೆ ದೇವಿಗೆ ನೀಡಿದ ಹರಕೆ ರೂಪದ ಆಭರಣ,ಸೀರೆಗಳನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಭಕ್ತರಿಗೆ ಹರಾಜಿನ ಮೂಲಕ ವಸ್ತುಗಳನ್ನು ನೀಡಲಾಗುತಿದ್ದು ಇಂದು ಸಾತೇರಿ ದೇವಿ ಮೂರ್ತಿಗೆ ಉಡಿಸಿದ ಸೀರೆ ₹1.06 ಲಕ್ಷಕ್ಕೆ ಹರಾಜಾಗಿದೆ. ಉದ್ಯಮಿ (Industrialist )ಪ್ರದೀಪ ಕದಂ ಎಂಬುವವರು ಈ ಸೀರೆಯನ್ನು ಆಡಳಿತ ಮಂಡಳಿ ಹಾಕಿದ ಹರಾಜಿನಲ್ಲಿ ಪಡೆದುಕೊಂಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!