ಕಾರವಾರ:- ಚಾಲಕನ ನಿಯಂತ್ರಣ ತಪ್ಪಿ
ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ರಾಷ್ಟ್ರೀಯ ಹೆದ್ದಾರಿ 66ರ ಹೊನ್ಮಾವು ವೃತ್ತದ ಬಳಿ ನಡೆದಿದೆ.
ಅನಿಲ ಸೋರಿಕೆಯಿಂದ ಹೆದ್ದಾರಿ ವಾಹನ ಸಂಚಾರ ವನ್ನು ಅಲ್ಪ ಸಮಯ ಬಂದ್ ಮಾಡಲಾಗಿತ್ತು.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಪೊಲೀಸಿನವರು ಹಾಜುರಾಗಿ ಅವಘಡ ವಾಗದಂತೆ ತಡೆದಿದ್ದಾರೆ.
ಮಂಗಳೂರಿನಿಂದ ಅಂಕೋಲದ ಕಡೆ ಸಂಚರಿಸುತಿದ್ದ ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಹೆದ್ದಾರಿಯಲ್ಲಿ ಪಲ್ಟಿಯಾಗಿ ಪಕ್ಕದಲ್ಲಿದ್ದ ಮನೆಗೆ ಡಿಕ್ಕಿ ಹೊಡೆದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.