ನೀರಜ್ ಜೋಪ್ರಾ ತರಬೇತುದಾರ ಶಿರಸಿಯ ಕಾಶಿನಾಥಗೆ ₹10 ಲಕ್ಷ ಬಹುಮಾನ ಘೋಷಣೆ-ವಿಶ್ವೇಶ್ವರ ಹೆಗಡೆ ಕಾಗೇರಿ.

801

ಬೆಂಗಳೂರು: ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆದ ನೀರಜ್ ಚೋಪ್ರಾ ತರಬೇತುದಾರ ಕರ್ನಾಟಕದ ಕಾಶಿನಾಥ್ ನಾಯಕ್ ಅವರಿಗೆ 10 ಲಕ್ಷ ರೂಪಾಯಿಗಳ ನಗದು ಬಹುಮಾನ ಘೋಷಿಸಿರುವ ಸರ್ಕಾರದ ನಿರ್ಧಾರಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮೆಚ್ಚುಗೆ ಸೂಚಿಸಿದ್ದಾರೆ.

ಸ್ವರ್ಣ ಇತಿಹಾಸ ಬರೆದ ಕ್ರೀಡಾಪಟುವಿನ ತರಬೇತುದಾರರಿಗೆ ನಗದು ಬಹುಮಾನ ಘೋಷಿಸುವುದು ‘ಉದಾತ್ತ, ಪ್ರೋತ್ಸಾಹದಾಯಕ ಮತ್ತು ಪ್ರೇರಣಾತ್ಮಕವಾಗಿದೆ’ ಇದು ಸರ್ಕಾರದ ಕಡೆಯಿಂದ ಉತ್ತೇಜನವಾಗಿದೆ. ತರಬೇತುದಾರರ ಸೇವೆಗಳನ್ನು ಗುರುತಿಸುವ ಈ ಕ್ರಮವು ತರಬೇತುದಾರರುಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಮತ್ತು ಅವರ ಸಂಪೂರ್ಣ ಸಾಮಥ್ರ್ಯವನ್ನು ಧಾರೆ ಎರೆಯಲು ಅವರನ್ನು ಪ್ರೇರೇಪಿಸುವಲ್ಲಿ ಬಹು ದೂರ ಸಾಗುತ್ತದೆ ಎಂದು ತಿಳಿಸಿದ್ದಾರೆ.

ಕಾಶೀನಾಥ್, ತಮ್ಮ ತವರು ಶಿರಸಿಯವರು ಎಂಬುದನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಹೆಮ್ಮೆಯಿಂದ ಸ್ಮರಿಸಿದ್ದಾರೆ. ” ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಚೋಪ್ರಾಗೆ ನನ್ನ ಊರಿನವರು ತರಬೇತುದಾರರಾಗಿದ್ದಾರೆ ಎಂಬ ಹೆಮ್ಮೆ ನನಗಿದೆ. ನಾನು ಕೂಡ ಕರ್ನಾಟಕ ರಾಜ್ಯದ ಸಮಸ್ತ ಜನತೆಯ, ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಲಕ್ಷಾಂತರ ಜನರ ಜೊತೆಗೆ ಅತ್ಯಂತ ಆನಂದ ಅನುಭವಿಸಿದ್ದೇನೆ ಎಂದು ಕಾಗೇರಿ ತಿಳಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರೆಲ್ಲರಿಗೂ ಗೌರವಿಸುವ ರಾಜ್ಯ ಸರ್ಕಾರದ ಔದಾರ್ಯವನ್ನು ಕಾಗೇರಿ ಶ್ಲಾಘಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!