ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಬಿತ್ತು ಬರೋಬ್ಬರಿ ದಂಡ! ಒಂದೇ ದಿನದಲ್ಲಿ 117200₹ ಬರಿಸಿದ ಸವಾರರು.

1412

ಕಾರವಾರ :- ನಾಯಿ ಬಾಲ ಡೊಂಕು ಅನ್ನೋದು ಹಳೇ ಗಾದೆ ಆದ್ರೆ ಈ ಗಾದೆಗೆ ತಕ್ಕಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 243 ಜನ ಸವಾರರು ಕರೋನಾ ನಿಯಮವನ್ನು ಮೀರಿ ದಂಡ ಕಟ್ಟಿದ್ದಾರೆ.

ಹೌದು ಜಿಲ್ಲೆಯಲ್ಲಿ ಕರೋನಾ ಹೆಚ್ಚಾದ ಹಿನ್ನಲೆಯಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಹತ್ತು ಘಂಟೆ ನಂತರ ಸಂಚಾರಕ್ಕೆ ನಿರ್ಬಂದ ಇದ್ದರೂ ಜನರು ಮಾತ್ರ ಇದು ತಮಗೆ ಅನ್ವಯಿಸುವುದಿಲ್ಲ ಎಂದು ಬೇಕಾಬಿಟ್ಟಿ ಓಡಾಟ ಮಾಡುತಿದ್ದಾರೆ. ಹೀಗಾಗಿ ಬುದ್ದಿ ಹೇಳಿ ಲಾಠಿ ರುಚಿ ತೋರಿಸಿದ್ದ ಪೊಲೀಸರು ಇದೀಗ ದಂಡದ ಬಿಸಿಯನ್ನ ತೋರಿಸಿದ್ದಾರೆ.

ಜಿಲ್ಲೆಯಲ್ಲಿ 243 ಜನ ಸುಕಾಸುಮ್ಮನೆ ಓಡಾಡಿದ್ದಕ್ಕೆ ಒಟ್ಟು 117200₹ ದಂಡ ಕಟ್ಟಿದ್ದಾರೆ.

ಪೊಟೋ ಕೃಪೆ :-ಯುಕೆ ಎಕ್ಸ್ ಪ್ರೆಸ್

ಇದರಲ್ಲಿ ಶಿರಸಿ ತಾಲೂಕಿನಲ್ಲಿ ಅತೀ ಹೆಚ್ಚು ದಂಡ ಕಟ್ಟಿದ ಸವಾರರಲ್ಲಿ ಮೊದಲ ಸ್ಥಾನದಲ್ಲಿದೆ. ಶಿರಸಿಯಲ್ಲಿ 86 ಜನ ಸವಾರರು,ಭಟ್ಕಳ-61,ದಾಂಡೇಲಿ-50,ಕಾರವಾರ -46 ಜನ ಸವಾರರು ದಂಡ ಕಟ್ಟಿದ್ದಾರೆ‌. ಇನ್ನು ಹೊನ್ನಾವರದಲ್ಲಿ 75 ಜನ ಸವಾರರು ನಿಯಮ ಉಲ್ಲಂಗಿಸಿದ್ದರೂ, ಸಿಪಿಐ ಶ್ರೀಧರ್ ರವರು ಎಲ್ಲರಿಗೂ ಕೊನೆಯದಾಗಿ ವಾರ್ನ ಮಾಡಿದ್ದರಿಂದ ದಂಡ ವಿಧಿಸದೇ ಕ್ಷಮೆ ನೀಡಿ ಕಳುಹಿಸಿದ್ದಾರೆ.

ನಾಳೆಯಿಂದ ಜೋಯಿಡಾ ವನ್ನು ಹೊರತುಪಡಿಸಿ ಎಲ್ಲೆಡೆ ನಾಕಬಂದಿ ಹಾಕಲಿದ್ದು ಬಿಗಿ ಪೊಲೀಸ್ ಬಂದವಸ್ತ್ ಕಲ್ಪಿಸಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!