ಕಾರವಾರ :- ಕುಮಟಾದ ರೈಲ್ವೆ ನಿಲ್ದಾಣದ ಸಮೀಪವೇ ನಕಲಿ ಬಾಂಬ್ ಪತ್ತೆಯಾದ ಬೆನ್ನಲ್ಲಿ ಇದೀಗ ಪೊಲೀಸ್ ಇಲಾಖೆ ಜನ ನಿಬಿಡ ಪ್ರದೇಶಗಳಲ್ಲಿ ಬಾಂಬ್ ಸ್ಕ್ವಾಡ್ ನಿಂದ ಪರಿಶೀಲನೆ ನಡೆಸುತ್ತಿದೆ. ಹಲವು ಭಾಗದಲ್ಲಿ ರಸ್ತೆಯಲ್ಲಿ ನಿಂತು ವಾಹನಗಳನ್ನು ಸಹ ತಪಾಸಣೆ ಮಾಡಲಾಗುತ್ತಿದೆ.
ಕಳೆದ ಎರಡು ದಿನದಿಂದ ಕೈಗಾ ,ಕದ್ರಾ,ಕಾರವಾರದ ಕದಂಬ ನೌಕಾನೆಲೆ ,ಕುಮಟಾದ ರೈಲ್ವೆ, ಬಸ್ ನಿಲ್ದಾಣ ,ಮಹಾಬಲೇಶ್ವರ ದೇವಸ್ಥಾನ ಸೇರಿದಂತೆ ಭಟ್ಕಳದ ಹಲವು ಭಾಗದಲ್ಲಿ ತಪಾಸಣೆ ನಡೆಸಿದೆ.
ಶಿರಸಿಯಲ್ಲಿ ಬಾಂಬ್ ಸ್ಕ್ವಾಡ್ ನಿಂದ ತಪಾಸಣೆ.?


ಕರಾವಳಿ ಭಾಗದಲ್ಲಿ ಸೂಕ್ಷ್ಮ ಪ್ರದೇಶಗಳಿವೆ.ಆದರೇ ಶಿರಸಿ ಭಾಗದಲ್ಲೂ ಬಾಂಬ್ ಪತ್ತೆ ದಳ ,ಶ್ವಾನದಳಗಳು ಇಂದು ಹಲವು ಪ್ರದೇಶಗಳಲ್ಲಿ ತಪಾಸಣೆ ನಡೆಸಿತು.
ಶಿರಸಿ ಕಾಲೇಜಿನಲ್ಲಿ ತಪಾಸಣೆ?
ಶಿರಸಿಯ ಎಂ.ಎಂ ಆರ್ಟ್ಸ್, ಸೈನ್ಸ್ ಕಾಲೇಜು ಸೇರಿದಂತೆ ಪ್ರಮುಖ ಕಾಲೇಜಿನಲ್ಲಿ ತಪಾಸಣೆ ನಡೆಸಲಾಗಿದೆ. ಬಸ್ ನಿಲ್ದಾಣ ಹಾಗೂ ಜನ ನಿಬಿಡ ಪ್ರದೇಶದಲ್ಲೂ ಸಹ ತಪಾಸಣೆ ನಡೆಸಲಾಗಿದೆ.

ತಪಾಸಣೆ ನಡೆಸಲು ಕಾರಣ ಏನು?
ಜಿಲ್ಲೆಯಲ್ಲಿ ಭಟ್ಕಳ ಉಗ್ರಗಾವಾದಿಗಳ ಹೆಸರು ತಗಲಿಕೊಂಡಿದೆ. ಜೊತೆಗೆ ಕೆಲವು ಸಂಘಟನೆಗಳು ದೇಶದ್ರೋಹ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಈ ಸಂಬಂಧ ಈಗಾಗಲೇ ಕೆಲವು ಜನರನ್ನು ಜಿಲ್ಲೆಯಲ್ಲಿ ಬಂಧಿಸಿಲಾಗಿದೆ. ಇನ್ನು ಶಿರಸಿಯಲ್ಲೂ ಸಹ ಕೆಲವು ವ್ಯಕ್ತಿಗಳ ಹೆಸರಿನ ಸಿಮ್ ಗಳು ಉಗ್ರವಾದಿಗಳು ಬಳಸಿದ ಹಿನ್ನಲೆಯಲ್ಲಿ ಬಂದಿಸಿ ತನಿಖೆ ಕೈಗೊಳ್ಳಲಾಗಿದೆ. ಹೀಗಾಗಿ ಕುಮಟಾದಲ್ಲಿ ಸಿಕ್ಕ ನಕಲಿ ಬಾಂಬ್ ಹಲವು ಸಂಶಯಗಳನ್ನು ತಂದೊಡ್ಡಿದೆ.
ಸದ್ಯ ಕುಮಟಾ ದಲ್ಲಿ ಸಿಕ್ಕ ಈ ಬಾಂಬ್ ನಕಲಿ ಎಂದಾಗಿದ್ದರೂ ಇದನ್ನು ಏಕೆ ತಯಾರಿಸಿದರು? ಇದರ ಉದ್ದೇಶ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ವಿಜ್ಞಾನ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರಿಗೆ ಸಂಶಯ ಮೂಡಿದೆ.ಇದರ ಜೊತೆಗೆ ಬೇರೆ ಯಾರಾದರೂ ಕುಚೇಷ್ಟೆಗೆ ಮಾಡಿರಬಹುದಾ ಎಂಬ ಅನುಮಾನ ಸಹ ಇದೆ. ಹೀಗಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ.
ಆದರೂ ಮುಂಜಾಗ್ರತಾ ಕ್ರಮವಾಗಿ ಇದೀಗ ಪೊಲೀಸರು ಹೆಚ್ಚಿನ ತಪಾಸಣೆಯನ್ನು ಜಿಲ್ಲೆಯಾಧ್ಯಾಂತ ಕೈಗೊಂಡಿದ್ದಾರೆ.