BREAKING NEWS
Search

ಬಿಜೆಪಿ ಗೂಡು ಸೇರಿಲು ಸಿದ್ದವಾದ ಶಶಿಭೂಷಣ್ ಹೆಗಡೆ! ಕುಮಟಾ ಕ್ಷೇತ್ರಕ್ಕೆ ಪರ್ಯಾಯ ನಾಯಕ ಸಿದ್ದ.

267

ಕಾರವಾರ :- ವಿಧಾನ ಸಭಾ ಚುನಾವಣೆ ಸಮೀಪಿಸುತಿದ್ದಂತೆ ಪಕ್ಷ ತೊರೆದು ಹೊಸ ಪಕ್ಷ ಸೇರುವುದು ನಾಯಕರ ಪಾಲಿಗೆ ಹೊಸದೇನಲ್ಲ. ದಿ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮೊಮ್ಮಗ ಶಿರಸಿಯ ಶಶಿಭೂಷಣ್ ಹೆಗಡೆ ಪಾಲಿಗೆ ಮಾತ್ರ ಇದು ಸಂಪೂರ್ಣ ಉಲ್ಟಾ ಆಗಿದೆ. ಈ ಬಾರಿ ಚುನಾಚಣೆಗೆ ಸ್ಪರ್ದೆ ಮಾಡುವುದಿಲ್ಲ ಎಂಬ ಷರತ್ತಿನೊಂದಿಗೆ ಶಶಿಭೂಷಣ್ ಹೆಗಡೆ ಬಿಜೆಪಿಗೆ ಸೇರ್ಪಡೆ ಗೊಳ್ಳುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಬೊಮ್ಮಾಯಿ ಪ್ರಯತ್ನ ಫಲ

ಶಶಿಭೂಷಣ್ ಹೆಗಡೆ ಹಿಂದೆ ಕುಮಟಾ ಕ್ಷೇತ್ರದಲ್ಲಿ ಎರಡು ಬಾರಿ ವಿಧಾನಸಭೆಗೆ ಸ್ಪರ್ದಿಸಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು.ಇದಾದ ನಂತರ 2018 ರಲ್ಲಿ ಶಿರಸಿ ಕ್ಷೇತ್ರದಲ್ಲಿ ಸ್ಪರ್ದಿಸಿ 26,625 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು. ಈ ಹಿಂದೆ 2004 ರಲ್ಲಿ ಕುಮಟಾ ದಲ್ಲಿ ಬಿಜೆಪಿ ಯಿಂದ ಸ್ಪರ್ದಿಸಿ 31,273 ಮತ ಪಡೆದು ಕಾಂಗ್ರಸ್ ನ ಮೋಹನ್ ಕೆ.ಶಟ್ಟಿ ವಿರುದ್ಧ 3,465 ಮತದಲ್ಲಿ ಸೋತರೇ,2008 ರಲ್ಲಿ ಕುಮಟಾ ದಲ್ಲಿ ಬಿಜೆಪಿಯಿಂದ ಸ್ಪರ್ದಿಸಿ 30,201 ಮತ ಪಡೆದು ಅಂದಿನ ಜನತಾದಳದ ದಿನಕರ್ ಶಟ್ಟಿ ವಿರುದ್ಧ 591 ಮತಗಳ ಅಂತರದಲ್ಲಿ ಸೋಲುವ ಮೂಲಕ ಮೂರನೇ ಸ್ಥಾನದಲ್ಲಿ ಇದ್ದರು.

ಮೂರು ಸೋಲಿನ ನಂತರ ಜೆಡಿಎಸ್ ನಲ್ಲೇ ತಮ್ಮ ಅಸ್ತಿತ್ವ ಉಳಿಸಿಕೊಂಡು ಶಿರಸಿ ಕ್ಷೇತ್ರದಲ್ಲಿ ತಮ್ಮ ಹಿಡಿತ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ಸಾಗಿದ್ದ ಇವರಿಗೆ ಜೆಡಿಎಸ್ ನಿಂದ ಮತ್ತೊಮ್ಮೆ ಈ ಭಾರಿ ಸ್ಪರ್ದಿಸಲು ಅವಕಾಶ ವದಗಿಬಂದರೂ ಸ್ಪರ್ದಿಸುವ ಮನಸ್ಸು ಮಾಡಲಿಲ್ಲ. ಆದರೇ ಕಾಗೇರಿ ವಿರುದ್ಧ ಕಾಂಗ್ರೆಸ್ ಒಂದೊಳ್ಳೆ ಬ್ರಾಹ್ಮಣ ನಾಯಕನಿಗಾಗಿ ಹುಡುಕಾಟ ನಡೆಸಿದ್ದು ಶಿಶಿಭೂಷಣ್ ಹೆಗಡೆ ಗೆ ಗಾಳ ಹಾಕಲು ಪ್ರಯತ್ನ ಪಟ್ಟಿತ್ತು.

ಆದರೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಯತ್ನದ ಫಲ ,ಕಾಗೇರಿ ಚಾಣುಕ್ಯ ನೀತಿ ಕೊನೆಗೂ ಮತ್ತೆ ಶಶಿಭೂಷಣ್ ಹೆಗಡೆ ಬಿಜೆಪಿ ಸೇರುವ ಮುಹೂರ್ತ ಫಿಕ್ಸ್ ಆಗಿದ್ದು ಇನ್ನು ಮೂರು ದಿನಗಳಲ್ಲಿ ಬೆಂಗಳೂರಿನಲ್ಲಿ ಬಸವರಾಜ್ ಬೊಮ್ಮಾಯಿ ನೇತ್ರತ್ವದಲ್ಲಿ ಮತ್ತೆ ಬಿಜೆಪಿ ಸೇರುತಿದ್ದಾರೆ.

ಈ ಭಾರಿ ಶಶಿಭೂಷಣ್ ಹೆಗಡೆ ಸ್ಪರ್ದೆಇಲ್ಲ!

ಶಶಿಭೂಷಣ್ ಹೆಗಡೆ ಈಭಾರಿ ಯಾವುದೇ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ದೆ ಮಾಡುವುದಿಲ್ಲ. ಬದಲಾಗಿ ಪಕ್ಷದ ಕೆಲಸದಲ್ಲಿ ಇವರನ್ನು ತೊಡಗಿಸಿಕೊಳ್ಳಲಾಗುತ್ತದೆ.
ದೆಹಲಿ ಬಿಜೆಪಿ ಮೂಲಗಳ ಪ್ರಕಾರ ಶಶಿಭೂಷಣ್ ಹೆಗಡೆ extra player.

ದೆಹಲಿ ಮೂಲಗಳ ಪ್ರಕಾರ ಕುಮಟಾ ಕ್ಷೇತ್ರಕ್ಕೆ ದಿನಕರ್ ಶಟ್ಟಿ ಸ್ಥಾನಕ್ಕೆ ಇವರನ್ನು ಮುಂಬರುವ ವಿಧಾನಸಭಾ ಚುನಾವಣೆ 2028 ರಲ್ಲಿ ಕಣಕ್ಕಿಳಿಸುವ ಯೋಚನೆ ಇದೆ. ಇದಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ಸ್ಪರ್ದೆ ಮಾಡದಿದ್ದರೇ ಅವರ ಸ್ಥಾನಕ್ಕೆ ಇವರನ್ನು ಇಳಿಸುವ ಲೆಕ್ಕಾಚಾರ ಬಿಜೆಪಿ ಪಕ್ಷದ್ದಾಗಿದೆ.
ಶಶಿಭೂಷಣ್ ಹೆಗಡೆ ಕಳಂಕ ರಹಿತ ರಾಜಕಾರಣಿ .ಯಾವುದೇ ಕ್ರಿಮಿನಲ್ ಹಿನ್ನಲೆ,ಬ್ರಷ್ಟಾಚಾರ ವಿಲ್ಲದ ರಾಯಲ್ ರಾಜಕಾರಣಿ. ವಿವಾದ ಸಹ ಇವರ ಬೆನ್ನಿಗಿಲ್ಲ. ಇದಲ್ಲದೇ ದಿ. ರಾಮಕೃಷ್ಣ ಹೆಗಡೆ ಮೊಮ್ಮಗ ಸಹ .ಇನ್ನು ಕೇಂದ್ರ ರಾಜ್ಯಗಳಲ್ಲಿ ಎಲ್ಲಾ ಪಕ್ಷದ ದೊಡ್ಡಮಟ್ಟದ ರಾಜಕಾರಣಿಗಳ ಜೊತೆ ಉತ್ತಮ ಸಂಬಂಧ ಇರಿಸಿಕೊಂಡಿದ್ದಾರೆ‌‌. ಬಿಜೆಪಿಗೆ ಬೇಕಿರುವ ಎಲ್ಲಾ ಗುಣಗಳು ಇವರಲ್ಲಿದೆ. ಹೀಗಾಗಿ ಬಿಜೆಪಿ ಕೊನೆಗೂ ಬಲೆಯಿಂದ ತಪ್ಪಿಸಿಕೊಂಡು ಈಜುತಿದ್ದ ಮೀನನ್ನು ಮತ್ತೆ ಬಲೆಗೆ ಬೀಳಿಸಿಕೊಳ್ಳಲು ಮತ್ತೆ ಸಫಲವಾಗಿದೆ.

ಶಶಿಭೂಷಣ್ ಹೆಗಡೆ ಮೇಲೆ ಜನರ ಅಭಿಪ್ರಾಯ ಹೇಗಿದೆ?

ಶಶಿಭೂಷಣ್ ಹೆಗಡೆ ಚಿಕ್ಕವಯಸ್ಸಿನಲ್ಲೇ ರಾಜಕಾರಣದ ಸಂತೆಯನ್ನು ನೋಡಿಕೊಂಡು ಬೆಳದವರು. ದಿ.ರಾಮಕೃಷ್ಣ ಹೆಗಡೆಯವರ ರಾಜಕೀಯ ಪಟ್ಟುಗಳು ,ಮೌಲ್ಯಗಳನ್ನ ತಮ್ಮಲ್ಲಿ ಬೆಳಸಿಕೊಳ್ಳುವ ಮೂಲಕ ಪ್ರಭುದ್ಧ ರಾಜಕಾರಣಿಯಾಗಿದ್ದಾರೆ‌ . ಇದರ ಜೊತೆ ಯುವ ನಾಯಕತ್ವದ ಗುಣಗಳಿವೆ.
ಆದರೇ ಜನರಲ್ಲಿ ಇವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಸಮಯ ಬೇಕಿದೆ. ತಳಮಟ್ಟದ ಜನರೊಂದಿಗೆ ಒಡನಾಟ ಕಮ್ಮಿ ಎನ್ನುವ ಮಾತುಗಳಿವೆ. ಜನರೊಂದಿಗೆ ಇನ್ನೂ ಬೆರೆಯಬೇಕು ,ಜನರ ಹಾಗೂ ಅವರ ನಡುವೆ ಇರುವ ಅಂತರ ಕಡಿಮೆಯಾಗಬೇಕಿದೆ. ಎಲ್ಲರೊಂದಿಗೆ ಸಹಜವಾಗಿ ಬೆರೆಯುವುದು ಕಡಿಮೆ ಎಂಬ ಆಪಾದನೆ ಹೋಗಬೇಕಿದೆ.

ಮಾತಿನಲ್ಲಿ ಹಿಡಿತವಿದೆ,ತಪ್ಪು ಒಪ್ಪುಗಳು ತಿಳಿಯುವ ಶಕ್ತಿ ಇದೆ. ಆದರೇ ಕೆಲವು ನ್ಯೂನ್ಯತೆಯಿಂದ ವಿಧಾನಸಭೆಯಲ್ಲಿ ಇರಬೇಕಾದವರು ಅದೃಷ್ಟದ ಪರೀಕ್ಷೆಯಲ್ಲಿ ಮೂರು ಬಾರಿ ಸೋತಿದ್ದಾರೆ. ಹಲವು ವಿಷಯಗಳನ್ನು ಅರಿತಿರುವ ಇವರು ಹಣ ಹೆಂಡ ಚಲ್ಲಿ ಮತಪಡೆಯುವ ದುರುಳರಲ್ಲ. ಆದರೇ ಇಂದಿನ ದಿನದಲ್ಲಿ ಹಣವೇ ಮುಖ್ಯ ಎನ್ನುವ ರಾಜಕೀಯ ಪರಿಸ್ಥಿತಿಯಲ್ಲಿ ಮತ್ತೆ ಬಿಜೆಪಿ ಮನೆ ಸೇರಿರುವ ಇವರ ರಾಜಕೀಯ ಯಾವ ಮೌಲ್ಯಾಧಾರದಲ್ಲಿ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!