ಶಿರಸಿ- ಸ್ಟುಡಿಯೋ ದೋಚಿದ್ದ ಕಳ್ಳನ ಬಂಧನ.

919

ಶಿರಸಿ :- ಶಿರಸಿ ನಗರದ ಮಂಜು ಸ್ಟುಡಿಯೋ ದಲ್ಲಿ ಕಳ್ಳತನವಾಗಿದ್ದ ಪ್ರಕರಣವನ್ನು ಶಿರಸಿ ನಗರ ಠಾಣೆ ಪೊಲೀಸರು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ತಿಂಗಳು ಶಿರಸಿ ಮಾರ್ಕೇಟ್ ರಸ್ತೆಯ ಸಿ.ಎಮ್ ಸಿ ಕಾಂಪ್ಲೇಕ್ಸನಲ್ಲಿ ಇರುವ ಮಂಜು ಡಿಜಿಟಲ್ ಫೋಟೋ ಸ್ಟುಡಿಯೋದ ಕ್ಯಾಮರಾ ಸೇರಿದಂತೆ ಇತರೆ ವಸ್ತುಗಳನ್ನು ಕಳ್ಳರು ಕಳ್ಳತನ ಮಾಡಿದ್ದರು.

ಒಟ್ಟು ₹70 ಸಾವಿರ ಮೌಲ್ಯದ ಕ್ಯಾಮರಾ ಸೇರಿದಂತೆ ಇತರೆ ವಸ್ತುಗಳು ಕಳ್ಳತನವಾಗಿತ್ತು.

ಇಂದು ಕಳವು ಪ್ರಕರಣದಲ್ಲಿನ ಆರೋಪಿತನಾದ ಗಿರೀಶ ಈ ‘ಗಿರಿ ತಂದೆ ಶಿವಪ್ಪ ಭಜಂತ್ರಿ ಪಾಯ 22 ವರ್ಷ ಉದ್ಯೋಗ ಕೂಲಿಕೆಲಸ ಸಾ|| ಬಾಳೆಕೊಪ್ಪ ಶುಂಶಿ ಪೋಸ್ಟ ಶಿವಮೊಗ್ಗ ತಾಲೂಕ’ ಶಿವಮೊಗ್ಗ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿ, ಈತನಿಂದ ಕಳುವಾದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!