ಕಾರವಾರ :- ಕಾರವಾರ ತಾಲ್ಲೂಕಿನ ದೇವಬಾಗ ಕಡಲತೀರದಲ್ಲಿ ಜಮೀನು ನೀಡಬೇಕು ಎಂಬ ಕೋಸ್ಟ್ ಗಾರ್ಡ್ ಪ್ರಸ್ತಾವಕ್ಕೆ ಸ್ಥಳೀಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕಡಲತೀರದಲ್ಲಿ ಇಂದು ಸೇರಿದ್ದ ನೂರಾರು ಮೀನುಗಾರರು ತಮ್ಮ ನೆಲೆಯನ್ನು ಕೋಷ್ಟ್ ಗಾರ್ಡ ಗೆ ನೀಡದಂತೆ ಆಗ್ರಹಿಸಿದರು.
ಕರಾವಳಿ ಕಾವಲು ಪಡೆಯ ಅಧಿಕಾರಿಗಳು ದೇವಬಾಗಕ್ಕೆ ಜ.28ರಂದು ಭೇಟಿ ನೀಡಿದ್ದರು. ಅವರು ಅಲ್ಲಿರುವ ಸರ್ಕಾರಿ ಜಮೀನು ಮತ್ತು ಸ್ಥಳದ ಜಿ.ಪಿ.ಎಸ್ ದಾಖಲೆಗಳನ್ನು ಪರಿಶೀಲಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸುಮಾರು ಎಂಟು ಎಕರೆಗಳಷ್ಟು ಜಮೀನನ್ನು ಅವರು ತಮ್ಮ ಠಾಣೆ ನಿರ್ಮಿಸಲು ಹುಡುಕುತ್ತಿದ್ದಾರೆ. ದೇವಬಾಗದಲ್ಲಿ ಅವರಿಗೆ ಜಮೀನು ನೀಡಲು ಬಿಡುವುದಿಲ್ಲ. ಇದರಿಂದ ಸ್ಥಳೀಯ ಮೀನುಗಾರರು ಅತಂತ್ರರಾಗುತ್ತಾರೆ ಎಂದು ಸ್ಥಳೀಯ ಮಿನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ್ ರವರು ದೇವಬಾಗದ ಕಡಲತೀರವು ಸಾಂಪ್ರದಾಯಿಕ ಮೀನುಗಾರರ ತಾಣ. ಇಲ್ಲಿನ ಕಡಲತೀರವನ್ನು ಕರಾವಳಿ ಕಾವಲು ಪಡೆಗೆ ನೀಡಿದರೆ ಮೀನುಗಾರರ ಬದುಕಿನ ಮೇಲೆ ದೊಡ್ಡ ಹೊಡೆತ ಬೀಳಲಿದೆ. ದೇವಬಾದಿಂದ ಮಾಜಾಳಿಯ ತನಕ ಸುಮಾರು 10 ಸಾವಿರ ಮೀನುಗಾರರಿದ್ದು, ಎಲ್ಲರಿಗೂ ಇದೇ ಕಡಲತೀರ ಆಧಾರವಾಗಿದೆ ಎಂದು ಹೇಳಿದ ಅವರು ಫೆ.1ರಂದು ಜಿಲ್ಲಾಧಿಕಾರಿಗೆ ಮನವಿ ನೀಡಲಾಗುವುದು,ಒಂದುವೇಳೆ ಸ್ಥಳೀಯ ಆಡಳಿತ ಜಾಗ ನೀಡಿದರೆ ಜಿಲ್ಲೆಯಾಧ್ಯಾಂತ ಮೀನುಗಾರಿಕೆಯನ್ನು ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಕೋಸ್ಟ್ ಗಾರ್ಡ ಗೆ ಜಾಗದ ಸಮಸ್ಯೆ
ಕರಾವಳಿ ಕಾವಲು ಪಡೆಯು ಅಮದಳ್ಳಿಯಲ್ಲಿ ಸ್ಟೇಷನ್ ಹೊಂದಿದ್ದು, ಬಾಡಿಗೆ ಕಟ್ಟಡದಲ್ಲಿದೆ. ಅದರ ಹೋವರ್ ಕ್ರಾಫ್ಟ್ ದೋಣಿಯನ್ನು ನಿಲ್ಲಿಸಲು ಸೂಕ್ತ ಸ್ಥಳ ಸಿಕ್ಕಿಲ್ಲ. ಅಲ್ಲದೇ ಸಿಬ್ಬಂದಿಗೆ ಒಂದೇ ಕಡೆ ವಸತಿ ಸೌಕರ್ಯದ ವ್ಯವಸ್ಥೆ ಆಗಿಲ್ಲ. ಹಾಗಾಗಿ ಈ ಹಿಂದೆ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಜಾಗ ಮಂಜೂರು ಮಾಡಲಾಗಿತ್ತು. ಆದರೆ, ಅದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ರದ್ದು ಮಾಡಲಾಗಿತ್ತು.
ಅಮದಳ್ಳಿಯಲ್ಲಿ 26 ಎಕರೆ 8 ಗುಂಟೆ ಜಾಗವನ್ನು ಗುರುತಿಸಿ, ಭೂ ಮಾಲೀಕರಿಂದ ಖರೀದಿಸಲು ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ, ಅದೂ ಯಶಸ್ವಿಯಾಗಿಲಿಲ್ಲ. ಈ ಕಾರಣದಿಂದ ಮತ್ತೆ ಜಾಗದ ಹುಡುಕಾಟವನ್ನು ಕರಾವಳಿ ಕಾವಲುಪಡೆ ನಡೆಸಿದ್ದು ಮತ್ತೆ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ:-
https://kannadavani.news/uttara-kannada-shivamogga-district-covid-health-bulletin-today/