BREAKING NEWS
Search

ಉತ್ತರವಕನ್ನಡ ಲೋಕಸಭೆಗೆ ಯುವಕರೇ ನಿರ್ಣಾಯಕ! ಎನನ್ನುತ್ತೆ ಪಕ್ಷಗಳು?

132

ಕಾರವಾರ: ಲೋಕಸಭೆ ಚುನಾವಣೆಗೆ( Loksabha election 2025) ಕೆಲವೇ ತಿಂಗಳು ಬಾಕಿ ಉಳಿದುಕೊಂಡಿದ್ದು ರಾಜಕೀಯ ಪಕ್ಷಗಳು ಗೆಲುವಿಗೆ ತಂತ್ರ ಹೆಣೆಯುವುದರಲ್ಲಿ ನಿರತವಾಗಿವೆ. ಇನ್ನೊಂದೆಡೆ ಈಚೆಗಷ್ಟೆ ಮತದಾರರ ಕರಡು ಪಟ್ಟಿ ಪ್ರಕರಟಗೊಂಡಿದ್ದು, ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ 18 ರಿಂದ 29 ವರ್ಷ ವಯಸ್ಸಿನ ‘ಯುವ’ ಮತದಾರರೇ (young voters) ಹೆಚ್ಚಾಗಿದ್ದಾರೆ.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರ, ಪಕ್ಕದ ಬೆಳಗಾವಿ ಜಿಲ್ಲೆಯ ಕಿತ್ತೂರು ಮತ್ತು ಖಾನಾಪುರ ಕ್ಷೇತ್ರ ಒಳಗೊಂಡು ಉತ್ತರ ಕನ್ನಡ ಲೋಕಸಭೆ ಕ್ಷೇತ್ರ ರಚನೆಯಾಗಿದೆ. ಮತದಾರರ ಕರಡು ಪಟ್ಟಿಯಲ್ಲಿ (voter )ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 16,07,600 ಇದೆ. ಜಿಲ್ಲೆಯಲ್ಲಿ 11,98,532 ಮತದಾರರಿದ್ದರೆ, ಕಿತ್ತೂರು ಕ್ಷೇತ್ರದಲ್ಲಿ 1,95,178 ಮತ್ತು ಖಾನಾಪುರ ಕ್ಷೇತ್ರದಲ್ಲಿ 2,13,890 ಮಂದಿ ಮತದಾರರು ಇದ್ದಾರೆ.

18 ರಿಂದ 29 ವರ್ಷ ವಯೋಮಿತಿಯ 2,34,461 ಮತದಾರರು ಜಿಲ್ಲೆಯಲ್ಲಿದ್ದಾರೆ. ಕಿತ್ತೂರು ಕ್ಷೇತ್ರದಲ್ಲಿ ಅವರ ಸಂಖ್ಯೆ 40,350 ಮತ್ತು ಖಾನಾಪುರದಲ್ಲಿ 43,011 ರಷ್ಟಿದೆ.

ಮತದಾರರ ಕರಡು ಪಟ್ಟಿಯ ಅನ್ವಯ ಜಿಲ್ಲೆಯ ಒಟ್ಟು ಮತದಾರರಲ್ಲಿ ಶೇ.19.56 ರಷ್ಟು ಯುವ ಮತದಾರರು ಇದ್ದಾರೆ. ಕಿತ್ತೂರು, ಖಾನಾಪುರ ಕ್ಷೇತ್ರದ ಮತದಾರರನ್ನೂ ಪರಿಗಣಿಸಿದರೆ ಶೇ.19.76 ರಷ್ಟು ಮತದಾರರು ಕಿರಿ ವಯಸ್ಸಿನವರಿದ್ದಾರೆ.

2024ರ ಜ.1ಕ್ಕೆ 18 ವರ್ಷ ತುಂಬಲಿರುವವರು ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಲು ವಿನಂತಿಸಲಾಗಿದೆ. ಸಾವಿರಾರು ಅರ್ಜಿಗಳು ಹೆಸರು ನೊಂದಾವಣೆಗೆ ಬರುತ್ತಿವೆ. ಹೀಗಾಗಿ ಯುವ ಮತದಾರರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.

ಯುವ ಮತದಾರರನ್ನು ಸೆಳೆಯಲು ಪಕ್ಷಗಳ ತಂತ್ರಗಾರಿಕೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಇರುವ ಯುವ ಮತದಾರರನ್ನು ಸೆಳೆಯಲು ಹೊಸ ಕಾರ್ಯಕ್ರಮಗಳನ್ನು ಆಯೋಜನೆ ಮಾಡತೊಡಗಿದೆ.

ಬಿಜೆಪಿಯ ಉತ್ತರ ಕನ್ನಡ ಜಿಲ್ಲಾ ಯುವ ಮೂರ್ಚಾ ಅಧ್ಯಕ್ಷ ಪ್ರಶಾಂತ್ ನಾಯ್ಕ ರವರು ಕಾಲೇಜು ಮಟ್ಟದಲ್ಲಿ ಯುವಕರನ್ನು ಸೆಳೆಯಲು ಸಮರ್ಥ ಭಾರತ ಎಂಬ ಸಂಘಟನೆ ಯೊಂದಿಗೆ ಕಾರ್ಯಕ್ರಮಗಳ ಆಯೋಜನೆ ಮಾಡುತಿದ್ದು ಯೂತ್ ಪೇಸ್ಟ್ , ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಹಲವು ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಪಕ್ಷಕ್ಕೆ ಯುವ ಭಲ ತುಂಬಲು ತೆಯಾರಿ ನಡೆಸಿದ್ರೆ, ಕಾಂಗ್ರೆಸ್ ನಿಂದ ಬೂತ್ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆಗೆ ಸಿದ್ದತೆ ಮಾಡಿಕೊಂಡಿದ್ದು ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶಟ್ಟಿ ನೇತ್ರತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕ್ಕರ್ ರವರ ಮುಂದಾಳತ್ವ ದಲ್ಲಿ ಐದು ಗ್ಯಾರಂಟಿಗಳ ಯೋಜನೆಯನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಯಕ್ಕೆ ಸಿದ್ದತೆ ಮಾಡಿಕೊಂಡಿದೆ. ಈ ಮೂಲಕ ಯುವ ಮತದಾರರನ್ನು ಸೆಳೆಯಲು ಆಡಳಿತಾರೂಢ ಕಾಂಗ್ರೆಸ್ ,ವಿರೋಧ ಪಕ್ಷ ಬಿಜೆಪಿ ಸಕಲ ಸಿದ್ದತೆ ಮಾಡಿಕೊಂಡು ಚುನಾವಣೆ ಕಣಕ್ಕೆ ದುಮುಕಲು ಸಿದ್ದವಾಗಿದೆ.

ಜಿಲ್ಲೆಯ ಯುವಕರು ಏನು ಹೇಳ್ತಾರೆ?
ಸಧ್ಯ ಜಿಲ್ಲೆಯಲ್ಲಿ ಮೋದಿ ಅಲೆ ಯುವಕರಲ್ಲಿ ಒಲವೂ ಇದ್ದರೂ ,ಕಾಂಗ್ರೆಸ್ ಗ್ಯಾರಂಟಿ ಯೋಜನೆ ಹಲವು ಯುವಕರನ್ನು ಸೆಳೆಯುವಲ್ಲಿ ಸಫಲವಾಗಿದೆ.

ನಾವು ಮತಹಾಕುತ್ತೇವೆ ಆದ್ರೆ ಅಭ್ಯರ್ಥಿ ಯಾರು ಅವರಿಂದ ನಮಗೇನು ಅನುಕೂಲ ನೋಡುತ್ತೇವೆ,ದೇಶದ ಅಭಿವೃದ್ಧಿ ಜೊತೆ ಯುವಕರಿಗೆ ಉದ್ಯೋಗ ಕೂಡ ಮುಖ್ಯ ಹೀಗಾಗಿ ಅಭ್ಯರ್ಥಿ ಪಕ್ಷ ಎರಡು ಮುಖ್ಯ ಎನ್ನುತ್ತಾರೆ ಹಲವು ಯುವಕರು.

ಆದ್ರೆ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಯುವಕರಲ್ಲಿ ಅಲ್ಪ ಒಲವು ಇದ್ದರೂ ಬಿಜೆಪಿ ಹವಾ ಕೂಡ ಅಲ್ಪ ಮಟ್ಟಿಗೆ ಯುವಕರನ್ನು ಸೆಳೆಯುತ್ತಿದೆ.ಆದ್ರೆ ಯಾರು ಅಭ್ಯರ್ಥಿ ,ಪಕ್ಷದ ಸಂಘಟನೆ ಮೇಲೆ ಯುವಕರ ಮತ ಭೇಟೆ ನಿಂತಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!