ಉತ್ತರ ಕನ್ನಡ ಜಿಲ್ಲೆಗೆ ಲೋಕಸಭಾ ಅಭ್ಯರ್ಥಿಯಾಗಿ ಯಲ್ಲಾಪುರದ ಶಾಸಕ ಶಿವರಾಮ್ ಹೆಬ್ಬಾರ್ ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳತ್ತಾರೆ ಎಂಬ ಸುದ್ದಿ ಬೆನ್ನಲ್ಲೇ ಇವರನ್ನು ಕಾಂಗ್ರೆಸ್ ನಿಂದ ಲೋಕಸಭಾ ಅಭ್ಯರ್ಥಿ ಮಾಡಬೇಕು ಎಂಬ ಕೂಗೂ ಕಾಂಗ್ರೆಸ್ ವಲಯದಲ್ಲಿ ಕೇಳಿಬಂದಿದ್ದು ಈ ಕುರಿತು ಮಾಧ್ಯಮದವರು ಮಾಜಿ ಸಚಿವ ,ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆಯವರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಲೋಕಸಭೆಗೆ ಉತ್ತರ ಕನ್ನಡ ಜಿಲ್ಲೆಯಿಂದ ಯಾರು ಅಭ್ಯರ್ಥಿಯಾಗಬೇಕು ಎಂದು ಪಕ್ಷ ನಿರ್ಣಯ ಕೈಗೊಂಡಿಲ್ಲ. ಪಕ್ಷದ ಸಿದ್ದಾಂತಕ್ಕೆ ಸೂಕ್ತವಲ್ಲದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಿಲ್ಲ. ಅಂತಹ ಸಂದರ್ಭ ಬಂದರೇ ಸೂಕ್ತ ವೇದಿಕೆಯಲ್ಲಿ ವಿರೋಧಿಸುವೆ ಎಂದರು.
ಪಕ್ಷಕ್ಕೆ ಬರುವವರು ಪಕ್ಷದ ತತ್ವ ಸಿದ್ದಾಂತ ಅರಿವಿರಬೇಕು,ಬದ್ದತೆ ಇರುವವರನ್ನೇ ಪಕ್ಷಕ್ಕೆ ಬರಮಾಡಿಕೊಳ್ಳಬೇಕು ಎಂದು ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ರವರು ಮರಳಿ ಪಕ್ಷಕ್ಕೆ ಬರುತ್ತಿರುವ ಬಗ್ಗೆ ಮಾರ್ಮಿಕವಾಗಿ ವಿರೋಧ ವ್ಯಕ್ತಪಡಿಸಿದರು.