ಕಾರವಾರ :- ಯಲ್ಲಾಪುರತಾಲ್ಲೂಕಿನ ಮದ್ನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂಬಂಧ ಮೂವರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಒಬ್ಬ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ
ಗ್ರಾಮ ಪಂಚಾಯ್ತಿಯ 13 ಸದಸ್ಯರೂ ಬಿ.ಜೆ.ಪಿ ಬೆಂಬಲಿತರಾಗಿದ್ದಾರೆ. ಸದಸ್ಯರ ಪೈಕಿ ಆರು ಮಂದಿ ದನಗರ ಗೌಳಿ ಸಮಾಜಕ್ಕೆ ಸೇರಿದವರಾಗಿದ್ದಾರೆ.
ಅಧ್ಯಕ್ಷ ಸ‌್ಥಾನ ಹಿಂದುಳಿದ ‘ಅ’ ವರ್ಗದ ಮಹಿಳೆ ಮೀಸಲಾತಿ ಬಂದಿದೆ. ಹಾಗಾಗಿ ತಮ್ಮ ಸಮಾಜಕ್ಕೇ ಅಧ್ಯಕ್ಷ ಹುದ್ದೆ ನೀಡಬೇಕೆಂದು ವಿನಂತಿ ಮಾಡಿಕೊಂಡಿದ್ದರು. ಇದಕ್ಕೆ ಒಪ್ಪದ ಕೆಲವರು ಬೇರೆ ಸಮುದಾಯದವರನ್ನು ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.
ಭಾನುವಾರ ನಡೆದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಲ್ಲಿ ಗೌಳಿ ಸಮುದಾಯಕ್ಕೆ ಹುದ್ದೆ ನೀಡದಿರುವ ಬಗ್ಗೆ ಖಾತ್ರಿ ಪಡಿಸಿಕೊಂಡರು.
ಗೌಳಿ ಸಮುದಾಯದವರು ವಿಟ್ಟು ಬೊಮ್ಮು ಸೆಳಕೆ, ಲಕ್ಕು ಗಾವಡೇ ಹಾಗೂ ಬಾಪು ತಾಟೆ ಎಂಬುವವರನ್ನು ಕರೆದುಕೊಂಡು ಹೋಗಬಹುದು ಎಂಬ ಶಂಕೆಯಿಂದ ಊರಿನಿಂದ ಮುಖಂಡರು ಹೊರಗೆ ಕರೆದುಕೊಂಡು ಹೋಗುತಿದ್ದರು.
ಕಲಘಟಗಿಯ ಧಾರವಾಡ ಕ್ರಾಸ್ ಬಳಿ ಢಾಬಾವೊಂದರಲ್ಲಿ ಊಟ ಮಾಡುತ್ತಿದ್ದವರ ಮೇಲೆ ಕಿರವತ್ತಿಯ ಹಾಗೂ ಕಲಘಟಗಿಯ ಕೆಲವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾಗಿ ದೂರಲಾಗಿದೆ.