ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಹಂತದ ಕರಾವಳಿ ಯಲ್ಲಿ ಆದ ಮತದಾನಕ್ಕಿಂತ ಮಲೆನಾಡು ಭಾಗದಲ್ಲಿ ಹೆಚ್ಚು ಮತದಾನವಾಗಿದೆ.
ಎರಡನೇ ಹಂತದಲ್ಲಿ 81.41% ಶೇಕಡವಾರು ಮತದಾನವಾಗಿದ್ದು ಮಲೆನಾಡು ಮತದಾರರು ತಮ್ಮ ಕರ್ತವ್ಯದ ಪ್ರಜ್ಞೆ ಮೆರೆದಿದ್ದಾರೆ.
ಶಿರಸಿ- 81.00
ಸಿದ್ದಾಪುರ- 82.20
ಯಲ್ಲಾಪುರ – 80.87
ಮುಂಡಗೋಡು- 83.99
ಹಳಿಯಾಳ- 84.64
ದಾಂಡೇಲಿ- 75.23
ಜೋಯಿಡಾ-76.32
ಒಟ್ಟು :- 81.41 % ಶೇಕಡ ಮತದಾನ
ಮೊದಲ ಹಂತದಲ್ಲಿ ಕರಾವಳಿಯಲ್ಲಿ ಆದ ಮತದಾನದ ವಿವರ:-
ಒಟ್ಟು ಮತದಾನ ಶೇ.74.83%
ಕಾರವಾರ : 71.22
ಅಂಕೋಲಾ : 75.84
ಕುಮಟಾ : 75.3
ಹೊನ್ನಾವರ: 76.17
ಭಟ್ಕಳ : -74.63
ಗಣ್ಯರ ಮತದಾನ :-

ಯಲ್ಲಾಪುರದಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ರವರು ಹೆಬೈಲಿನ ಬೂತ್ ನಲ್ಲಿ ಪತ್ನಿ ವನಜಾಕ್ಷಿ ,ಪುತ್ರ ವಿವೇಕ್ ರೊಂದಿಗೆ ಆಗಮಿಸಿ ಮತದಾನ ಮಾಡಿದರು.

ಶಿರಸಿಯ ಸೊಂದದ ಸ್ವರ್ಣವಳ್ಳಿ ಶ್ರೀಗಳು ಸೊಂದ ಪಂಚಾಯಿತ್ ನ ಖಾಸಾಪಾಲ, ಶಾಲೆ
ಮಠದೇವಳ ಮತಗಟ್ಟೆಯಲ್ಲಿ ಮತದಾನದ ಹಕ್ಕು ಚಲಾಯಿಸಿದರು.

ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಜನತಾ ವಿದ್ಯಾಲಯದ ಕುಳವೆಗೆ ತೆರಳಿ ಕುಳವೆ ಗ್ರಾಮಪಂಚಾಯ್ತಿ ಕ್ಷೇತ್ರಕ್ಕೆ ಮತದಾನ ಮಾಡಿದರು.