ಕಾರವಾರ :-ಸ್ಥಳೀಯ ವೆಬ್ ಪೋರ್ಟಲ್ ವರದಿಗಾರನ ಮೇಲೆ ಮುಸುಕುದಾರಿಗಳ ಗುಂಪು ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆಯಲ್ಲಿ ನಡೆದಿದೆ. ಕರಾವಳಿ ಸಮಾಚಾರ್ ಎಂಬ ವೆಬ್ ಪೋರ್ಟಲ್ ವರದಿಗಾರ
ಅರ್ಜುನ್ ಮಲ್ಯ ಎಂಬಾತನೇ ಹಲ್ಲೆಗೊಳಗಾದವನಾಗಿದ್ದು, ಭಟ್ಕಳದ ಪುರಸಭೆಯ ಕಟ್ಟಡದಲ್ಲಿರುವ ತನ್ನ ಕಚೇರಿ ಮುಚ್ಚಿ ಮನೆಗೆ ತೆರಳುತ್ತಿದ್ದಾಗ ಬೆಳಕೆ ಬಳಿ ಆರು ಜನರ ಮುಸುಕುದಾರಿಗಳು ರಾಡ್ ಮತ್ತು ಕಟ್ಟಿಗೆ ತುಂಡುಗಳಿಂದ ದಾಳಿ ನಡೆಸಿದ್ದು ಸ್ಥಳೀಯರು ಆಗಮಿಸುತಿದ್ದಂತೆ ಹಲ್ಲೆಕೋರರು ಓಡಿಹೋಗಿದ್ದಾರೆ.

ಹಲ್ಲೆಯಿಂದ ಅರ್ಜುನ್ ಮಲ್ಯ ರವರ ಕೈ ಮುರಿದಿದ್ದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲಿಸರು ಆಗಮಿಸಿದ್ದು ದೂರು ದಾಖಲಾಗಿದೆ