BREAKING NEWS
Search

ಭಟ್ಕಳದಲ್ಲಿ NIA ದಾಳಿ- ಭಯೋತ್ಪಾದಕರೊಂದಿಗೆ ಸಂಪರ್ಕ ಆರೋಪದಡಿ ಮೂವರನ್ನು ವಶಕ್ಕೆ ಪಡೆದು ತನಿಖೆ.

1226

ಕಾರವಾರ :- ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ .ಐ. ಎ ಭಟ್ಕಳ ದಲ್ಲಿ ದಾಳಿ ನಡೆಸಿದೆ.

ಭಟ್ಕಳದ ಉಮರ್‌ ಸ್ಟ್ರೀಟ್ ,ತೆಂಗಿನ ಗುಂಡಿ ಹಾಗೂ ಸಾಗರ ರಸ್ತೆಯಲ್ಲಿರುವ ಮನೆಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದೆ. ಭಟ್ಕಳದ ಅಮೀನ್ ಜುವೇಬ್,ಜವಾದ್ ಎಂಬ ಇಬ್ಬರನ್ನು ತೀವ್ರ ತನಿಖೆ ನಡೆಸುತಿದ್ದು,


ಈ ಹಿಂದೆ ದುಬೈ ನಲ್ಲಿ ಬಂಧನಕ್ಕೊಳಕ್ಕಾಗಿರುವ ಭಯೋತ್ಪಾದಕ ನೋರ್ವನ ತಮ್ಮನನ್ನೂ ಎನ್ .ಐ.ಎ ವಶಕ್ಕೆ ಪಡೆದಿದೆ. ಸ್ಥಳದಲ್ಲಿ ಕೆ.ಎಸ್.ಆರ್.ಪಿ ತುಕಡಿ ಜಮಾವಣೆ ಮಾಡಲಾಗಿದೆ.

ಸ್ಥಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ್ ದೇವರಾಜು ಮೊಕ್ಕಾಂ ಹೂಡಿದ್ದಾರೆ. ಬಂಧಿತರು ಐಸಿಸ್ ನಂಟಿರುವ ಆರೋಪದ ಕುರಿತು ಅಧಿಕಾರಿಗಳಿಂದ ತನಿಖೆ ಮುಂದುವರೆದಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!