BREAKING NEWS
Search

ಮಿನುಗಾರಿಕಾ ದೋಣಿ ಮುಳುಗಡೆ-ಓರ್ವ ನಾಪತ್ತೆ.ಮೂರು ಜನರ ರಕ್ಷಣೆ

1134

ಕಾರವಾರ :- ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ನಾಡದೋಣಿ ಮುಳುಗಡೆಯಾಗಿ ದೋಣಿಯಲ್ಲಿದ್ದ
ಮೂರು ಜನ ಮೀನುಗಾರರ ರಕ್ಷಣೆ ಮಾಡಿದ್ದು, ಓರ್ವ ಮೀನುಗಾರ ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡು ಭಾಗದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಉದಯ್ ದಾಮೋದರ್ ತಾಂಡೇಲ್(30) ಕಾಣೆಯಾದ ಮೀನುಗಾರನಾಗಿದ್ದು ವಿಜಯ್ ಕ್ರಿಸ್ತಾದಾಸ್ ಫರ್ನಾಂಡಿಸ್,(49)ಶಂಕರ್ ತಾಂಡೇಲ್( 38),ಕಾಮೇಶ್ವರ್ ತಾಂಡೇಲ್ (39) ರಕ್ಷಣೆಗೊಳಗಾದವರಾಗಿದ್ದಾರೆ.

ಇಂದು ಬೆಳಗ್ಗೆ ಮೀನುಗಾರುಕೆಗೆ ಹೊನ್ನಾವರದ ಕಾಸರಕೋಡು ಭಾಗದಿಂದ ತೆರಳಿದ್ದ ದೋಣಿ ಹೊನ್ನಾವರದ ಇಕೋ ಬೀಚ್ ಬಳಿ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಡೆಯಾಗಿದೆ. ಈವೇಳೆ ಮೂರು ಜನ ಈಜಿ ದಡದ ಭಾಗಕ್ಕೆ ಬಂದಿದ್ದು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ ,ಪೊಲೀಸ್ ಸಿಬ್ಬಂದಿ ಹಾಜುರಾಗಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದು ನಾಪತ್ತೆಯಾದ ಮೀನುಗಾರರ ಹುಡುಕಾಟ ನಡೆಸಲಾಗುತ್ತಿದೆ.
ಘಟನೆ ಹೊನ್ನಾವರ ಠಾಣಾ ಪ್ಯಾಪ್ತಿಯಲ್ಲಿ ನಡೆದಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!