ಕಾರವಾರ:- ಇದೇ ತಿಂಗಳು 16ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕಾರವಾರಕ್ಕೆ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನಿಂದ ಆಗಮಿಸುವ ಮುಖ್ಯಮಂತ್ರಿ ಮೊದಲು ಕಾರವಾರ ಕ್ರಿಮ್ಸ್ ನಲ್ಲಿ 450 ಬೆಡ್ ಹಾಸಿಗೆಯ ಆಸ್ಪತ್ರೆ ಕಾಮಗಾರಿಗೆ ಶಿಲಾನ್ಯಾಸ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಅರಣ್ಯ ,ಹಾಗೂ ಬಂದರು ವಿಷಯವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಅಧಿಕಾರಿಗಳ ಸಭೆಯಲ್ಲಿ ಬಂದರು ಕಾಮಗಾರಿ,ಮೀನುಗಾರರ ಸಮಸ್ಯೆ ಕುರಿತು ಚರ್ಚಿಸುವ ಜೊತೆಗೆ ಅರಣ್ಯ ಒತ್ತುವರಿ ಸೇರಿದಂತೆ ಜಿಲ್ಲೆಯ ಸಮಸ್ಯೆ ಕುರಿತು ಚರ್ಚಿಸಲಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ದೊರೆತಿದೆ.
ಇನ್ನು ಸದ್ಯ ಮುಖ್ಯಮಂತ್ರಿಗಳ ಕಾರ್ಯದರ್ಶಿಯಿಂದ ಈಗಾಗಲೇ ಕಾರವಾರಕ್ಕೆ ಬರುವ ಕುರಿತು ಅಧಿಕೃತ ದಿನಾಂಕ ನಿಗಧಿ ಮಾಡಲಾಗಿದೆ. ಆದರೇ ಈ ಹಿಂದೆ ಸಹ ಮುಖ್ಯಮಂತ್ರಿ ಯಡಿಯೂರಪ್ಪನವರು ಕಾರವಾರಕ್ಕೆ ಬೇಟಿ ನೀಡುವ ಕಾರ್ಯಕ್ರಮ ಹವಾಮಾನ ವೈಪರಿತ್ಯದಿಂದ ರದ್ದಾಗಿತ್ತು. ಆದರೇ ಇದೀಗ ದಿನಾಂಕ ನಿಗದಿಯಾಗಿದ್ದರೂ ಇದೇ ತಿಂಗಳ 15 ರ ವರೆಗೆ ಜಿಲ್ಲೆಯಲ್ಲಿ ಬಾರಿ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ಮತ್ತೆ ಹವಾಮಾನ ವೈಪರಿತ್ಯದಿಂದ ರದ್ದಾಗುವ ಸಾಧ್ಯತೆಗಳು ಸಹ ಇವೆ. ಇನ್ನು ಉಪಚುನಾವಣೆ ನಂತರ ಇದೇ ಮೊದಲಬಾರಿಗೆ ಉತ್ತರ ಕನ್ನಡ ಜಿಲ್ಲೆಗೆ ಮುಖ್ಯಮಂತ್ರಿಗಳು ಆಗಮಿಸುತಿದ್ದಾರೆ.