ಕುಡಿದ ಮತ್ತಲ್ಲಿ ದೋಣಿಕದ್ದು ಅರಬ್ಬಿ ಸಮುದ್ರದ ನಡುಗೆಡ್ಡೆಯಲ್ಲಿ ಸಿಲುಕಿದ್ದ ವ್ಯಕ್ತಿ ರಕ್ಷಿಸಿದ ಕರಾವಳಿಕಾವಲುಪಡೆ.

988

ಕಾರವಾರ :- ಕುಡಿದ ಮತ್ತಲ್ಲಿ ಕಾರವಾರದ ಕೋಣಿ ಬೀಚ್ ನಲ್ಲಿ ನಿಲ್ಲಿಸಿಟ್ಟಿದ್ದ ದೋಣಿಯನ್ನು ಕದ್ದು ಲೈಟ್ ಹೌಸ್ ನೋಡಲು ಹೋದ ಮಹಾರಾಷ್ಟ್ರ ಮೂಲದ ಸಪ್ನಲ್ (21) ಎಂಬ ವ್ಯಕ್ತಿಯು ಅರಬ್ಬಿ ಸಮುದ್ರದ ಮಧ್ಯದಲ್ಲಿರುವ ಲೈಟ್ ಹೌಸ್ ಪಕ್ಕದ ದ್ವೀಪದಲ್ಲಿ ಸಿಲುಕಿಕೊಂಡ ಘಟನೆ ಇಂದು ನಡೆದಿದ್ದು ಕರಾವಳಿ ಕಾವಲುಪಡೆ ಸಿಬ್ಬಂದಿಗಳು ರಕ್ಷಣೆ ಮಾಡಿ ಕಾರವಾರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಕ್ಷಣೆಗೊಳಗಾದವನು.

ಇಂದು ಕಾರವಾರದ ಕೋಣಿ ಬೀಚ್ ಗೆ ಬಂದಿದ್ದ ಈತ ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿರುವ ಲೈಟ್ ಹೌಸ್ ನೋಡುವ ಹಂಬಲವಾಗಿದೆ. ಕುಡಿದ ಮತ್ತಲ್ಲಿ ಬೀಚ್ ನಲ್ಲಿ ಇಟ್ಟಿದ್ದ “ಓಂ ಯತಾಳ” ಎಂಬ ನಾಡದೋಣಿ ಯನ್ನು ಕದ್ದು ಸಮುದ್ರದಲ್ಲಿ ಹೋಗಿ ಲೈಟ್ ಹೌಸ್ ತಲುಪಿದ್ದಾನೆ. ಈ ವೇಳೆ ದೋಣಿಯನ್ನು ಲಂಗುರನ್ನು ಸರಿಯಾಗಿ ಹಾಕದೇ ಲೈಟ್ ಹೌಸ್ ಬಳಿಯ ದ್ವೀಪದಲ್ಲಿರುವ ಬಂಡೆಯ ಬಳಿ ಸಿಲುಕಿಕೊಂಡಿದೆ.

ಈ ಕುರಿತು ಮಾಹಿತಿ ಪಡೆದ ಕರಾವಳಿ ಕಾವಲುಪಡೆ ಸಿಪಿಐ ನಿಶ್ಚಲ್ ಕುಮಾರ್ ರವರು ಇಂಟರ್ ಸೆಫ್ಟರ್ ಬೋಟ್ ಮೂಲಕ ಅಲ್ಲಿಗೆ ತೆರಳಿ ಈತನನ್ನು ರಕ್ಷಿಸಿ ಕರೆತಂದಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!