BREAKING NEWS
Search

ನಾಳೆಯಿಂದ ಉತ್ತರ ಕನ್ನಡ ಜಿಲ್ಲೆಯ ಕಾಲೇಜುಗಳಲ್ಲಿ ಲಸಿಕಾಕರಣ-33,965 ಫಲಾನುಭವಿಗಳಿಗೆ ಲಸಿಕೆ.

2752

ಕಾರವಾರ :- ರಾಜ್ಯ ಸರ್ಕಾರ ಶೀಘ್ರದಲ್ಲಿ ಪದವಿ ಕಾಲೇಜುಗಳನ್ನು ಪ್ರಾರಂಭ ಮಾಡಲು ನಿರ್ಣಯಿಸಿರುವ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಲಸಿಕೆ ನೀಡಲು ಮುಂದಾಗಿದೆ.

ಈಗಾಗಲೇ 33 ಸಾವಿರಕ್ಕೂ ಹೆಚ್ಚು ಫಲಾನುಭವಿಗಳನ್ನು ಗುರುತಿಸಲಾಗಿದ್ದು ,ಆಯಾ ಕಾಲೇಜಿನಲ್ಲಿ ಲಸಿಕೆ ನೀಡಲು ಸಿದ್ದತೆ ಮಾಡಿಕೊಂಡಿದೆ.

ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಬಹುತೇಕ ಇಳಿಮುಖ ಕಂಡಿದೆ. ಇಂದಿಗೆ ಜಿಲ್ಲೆಯಲ್ಲಿ 1.08 ಪಾಸಿಟಿವ್ ರೇಟ್ ಇದ್ದು ಪಾಸಿಟಿವ್ ರೇಟನ್ನು ಶೂನ್ಯಕ್ಕೆ ತರಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

33,965 ಫಲಾನುಭವಿಗಳ ಗುರುತು.

ಜಿಲ್ಲೆಯಲ್ಲಿ ಪಾಲಿಟೆಕ್ನಿಕ್ ,ಪದವಿ ,ಐಟಿಐ ಸೇರಿದಂತೆ 94 ಕಾಲೇಜುಗಳಿವೆ. ಇದರಲ್ಲಿ 18 ವರ್ಷ ಮೇಲ್ಪಟ್ಟ 31833 ವಿದ್ಯಾರ್ಥಿಗಳಿದ್ದರೆ 18 ರಿಂದ 44 ವರ್ಷ ವಯಸ್ಸಿನ ಬೋಧಕ ಬೋಧಕೇತರ ಸಿಬ್ಬಂದಿ 1497 ,45 ವರ್ಷ ಮೇಲ್ಪಟ್ಟ ಬೋಧಕ ಬೋಧಕೇತರ ಸಿಬ್ಬಂದಿ 645 ಜನ ಇದ್ದು ಒಟ್ಟು 33,965 ಜನರಿಗೆ ಲಸಿಕೆ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಲಸಿಕೆ ಕೊರತೆ ನೀಗಿಸಲು ಹಂತ ಹಂತವಾಗಿ ಲಸಿಕಾಕರಣ

ಜಿಲ್ಲೆಯಲ್ಲಿ 4000 ಕೋವ್ಯಾಕ್ಸಿನ್ ಮಾತ್ರ ಇದ್ದು
ಇಂದು ಹೆಚ್ಚುವರಿಯಾಗಿ 7000 ಕೋವಿಡ್ ಶೀಲ್ಡ್ ಡೋಸೇಜ್ ಬರಲಿದೆ.
ಒಟ್ಟು 11 ಸಾವಿರ ನಾಳೆಗೆ ವ್ಯಾಕ್ಸಿನ್ ಇರಲಿದ್ದು ಇದರಲ್ಲಿ 4000 ಡೋಸೇಜ್ ಅನ್ನು ವಿದ್ಯಾರ್ಥಿಗಳಿಗೆ ಹಾಗೂ 3000 ಡೋಸೇಜ್ ಸಾರ್ವಜನಿಕರಿಗೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ನಾಳೆ ಕಾರವಾರದ ದಿವೇಕರ್ ಕಾಲೇಜು, ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಕುಮಟಾದ ಎವಿ ಬಾಳಿಗಾ ಕಾಲೇಜ್ ,ಶಿರಸಿಯ ಎಂಇಎಸ್ ಕಾಲೇಜ್ ಮತ್ತು ಎಂ.ಇ.ಎಸ್ ವಾಣಿಜ್ಯ ಕಾಲೇಜು ಗಳಲ್ಲಿ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!